Asianet Suvarna News Asianet Suvarna News

Chikkamagaluru: ಸಿದ್ದಾಪುರ ಶಾಲೆಗೆ ಶಿಕ್ಷಕರ ನೇಮಕಕ್ಕೆ ಒತ್ತಾಯ: ವಿದ್ಯಾರ್ಥಿಗಳ ಪ್ರತಿಭಟನೆ

ಕಾಫಿನಾಡು ತಾಲೂಕಿನ ಸಿದ್ದಾಪುರ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರುಗಳು ವಿದ್ಯಾರ್ಥಿಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿ, ಅಲ್ಲಿಯೇ ಕುಳಿತುಕೊಂಡಿದ್ದು, ಶಿಕ್ಷಕರನ್ನು ನಿಯೋಜನೆಗೊಳಿಸುವ ತನಕ ಜಾಗಬಿಟ್ಟಿ ಕದಲುವುದಿಲ್ಲವೆಂದು ಪಟ್ಟುಹಿಡಿದ್ದು ಪ್ರತಿಭಟನೆ ನಡೆಸಿದರು. 
 

Students protest Demand for recruitment of teachers to Siddapur school at Chikkamagaluru gvd
Author
First Published Sep 11, 2024, 9:07 PM IST | Last Updated Sep 11, 2024, 9:07 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.11): ಕಾಫಿನಾಡು ತಾಲೂಕಿನ ಸಿದ್ದಾಪುರ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರುಗಳು ವಿದ್ಯಾರ್ಥಿಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿ, ಅಲ್ಲಿಯೇ ಕುಳಿತುಕೊಂಡಿದ್ದು, ಶಿಕ್ಷಕರನ್ನು ನಿಯೋಜನೆಗೊಳಿಸುವ ತನಕ ಜಾಗಬಿಟ್ಟಿ ಕದಲುವುದಿಲ್ಲವೆಂದು ಪಟ್ಟುಹಿಡಿದ್ದು ಪ್ರತಿಭಟನೆ ನಡೆಸಿದರು. 

ಮುಚ್ಚಿದ ಶಾಲೆಗೆ ಶಿಕ್ಷಕರ ನಿಯೋಜನೆ ! ಮಕ್ಕಳಿರುವಲ್ಲಿ ಶಿಕ್ಷಕರಿಲ್ಲ: ಸಿದ್ದಾಪುರ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. 1ರಿಂದ 5ನೇ ತರಗತಿವರೆಗೆ ಒಟ್ಟು20 ವಿದ್ಯಾರ್ಥಿ ಗಳಿದ್ದಾರೆ. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರೊಬ್ಬರು ವರ್ಗಾವಣೆಗೊಂಡಿದ್ದು, ಮಕ್ಕಳಿಗೆ ಪಾಠಮಾಡಲು ಶಿಕ್ಷಕರಿಲ್ಲದಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಶಿಕ್ಷಕರನ್ನು ಹಾಕಿಕೊಡುವಂತೆ ಹಲವುಬಾರಿ ಮನವಿ ಮಾಡಿದ್ದು, ಗ್ರಾಮಸ್ಥರ ಮನವಿಯಲ್ಲಿ ಶಿಕ್ಷಣ  ಇಲಾಖೆ ಅಧಿಕಾರಿಗಳು ಪುರಸ್ಕರಿಸಿಲ್ಲ, 

ಪಕ್ಕದ ಗಂಗೆಗಿರಿಯಿಂದ ಶಿಕ್ಷಕರೊಬ್ಬರನ್ನು ತಾತ್ಕಲಿಕವಾಗಿ ನಿಯೋಜನೆ ಮಾಡಲಾಗಿದೆ. ಆ ಶಿಕ್ಷಕರು ಸಿದ್ದಪುರ ಶಾಲೆಗೆ ಬಂದಿಲ್ಲವೆಂದಿದ್ದಾರೆ.ಬೇರೆ ಬೇರೆ ಕ್ಲಸ್ಟರ್ನಿಂದ ಶಿಕ್ಷಕರನ್ನು ನಿಯೋಜಿಸುವ ಆದೇಶವಿದ್ದರೂ ಅವರು ಶಾಲೆಗೆ ಬಂದಿರುವುದಿಲ್ಲ, ಶೂನ್ಯ ದಾಖಲಾತಿಯಿಂದ ಮುಚ್ಚಿರುವ ಶಾಲೆಯ ಶಿಕ್ಷಕರನ್ನು ನಮ್ಮ ಕ್ಲಸ್ಟರ್ಗೆ ನಿಯೋಜಿಸಬೇಕೆಂಬ ನಿಯಮವಿದ್ದರೂ ಅದನ್ನು ಅಧಿಕಾರಿಗಳು ಪಾಲಿಸಿಲ್ಲವೆಂದು ಮನವಿಯಲ್ಲಿ ತಿಳಿಸಲಾಗಿದೆ. ಮಲೆನಾಡು ಶಾಲೆಗಳ ಶಿಕ್ಷಕರನ್ನು ನಗರ ಪ್ರದೇಶಕ್ಕೆ ನಿಯೋಜನೆಗೊಳಿಸುತ್ತಿರುವುದರಿಂದ ಮಲೆನಾಡಿನ ಶಾಲೆಗಳು ದಿನದಿಂದ ದಿನಕ್ಕೆ ಮುಚ್ಚುವ ಹಂತ ತಲುಪಿವೆ. 

ಬಿಜೆಪಿ ಕುತಂತ್ರದಿಂದ ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಕಿಂಗ್‌ಪಿನ್: ಸಚಿವ ರಾಮಲಿಂಗಾರೆಡ್ಡಿ ಗರಂ

ಅಧಿಕಾರಿಗಳು ಕೂಡಲೇ ಸಿದ್ದಾಪುರ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ರವೀಶ್ ಅವರನ್ನು ಆಗ್ರಹಿಸಿದ್ದಾರೆ.ತಾಲೂಕು ಪಂಚಾಯಿತಿ ಮಾಜಿಉಪಾಧ್ಯಕ್ಷ ಸಿದ್ದಾಪುರ ರಮೇಶ್ ಮಾತನಾಡಿ, ಸಿದ್ದಾಪುರ ಶಾಲೆಗೆ ಶಿಕ್ಷಕರನ್ನು ಹಾಕಿಕೊಡುವಂತೆ ಹಲವು ಬಾರಿ ಮನವಿ ಮಾಡಿದ್ದರು. ಅಧಿಕಾರಿಗಳು ಸ್ಪಂದಿಸಿರುವುದಿಲ್ಲ,  ಶಿಕ್ಷಕರನ್ನು ನೇಮಿಸುವ ತನಕ ಜಾಗಬಿಟ್ಟು ಕದಲುವುದಿಲ್ಲವೆಂದು ಹೇಳಿದರು.

Latest Videos
Follow Us:
Download App:
  • android
  • ios