Asianet Suvarna News Asianet Suvarna News

ಬೆಳಗಾವಿ: ಜಲಾವೃತಗೊಂಡಿದ್ದ ಶಾಲೆ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

ಬೆಳಗಾವಿಯಲ್ಲಿ ಪ್ರವಾಹದಿಂದ ಜಲಾವೃತಗೊಂಡಿದ್ದ ಶಾಲೆಯನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದ್ದಾರೆ. ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯುವ ರೆಡ್‌ ಕ್ರಾಸ್‌ ಘಟಕದ ಯುವಕರು ಸೋಮವಾರ ಅಥಣಿ ತಾಲೂಕಿನ ಪ್ರವಾಹ ಪೀಡಿತ ವಿವಿಧ ಗ್ರಾಮಗಳಲ್ಲಿನ ಶಾಲೆಗಳನ್ನು ಸ್ವಚ್ಛಗೊಳಿಸಿದರು.

Students cleaned school which submerged during flood
Author
Bangalore, First Published Aug 27, 2019, 11:22 AM IST

ಬೆಳಗಾವಿ(ಆ.27): ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯುವ ರೆಡ್‌ ಕ್ರಾಸ್‌ ಘಟಕದ ಯುವಕರು ಸೋಮವಾರ ಅಥಣಿ ತಾಲೂಕಿನ ಪ್ರವಾಹ ಪೀಡಿತ ವಿವಿಧ ಗ್ರಾಮಗಳಲ್ಲಿನ ಶಾಲೆಗಳನ್ನು ಸ್ವಚ್ಛಗೊಳಿಸಿದರು.

ಸಾಂಕ್ರಾಮಿಕ ರೋಗ ಹರಡಬಹುದಾದ ಸ್ಥಳಗಳಲ್ಲಿ ಮೆಡಿಕಲ್‌ ಕಿಟ್‌ ಕೊಟ್ಟು ಜನ ಜಾಗೃತಿ ಮೂಡಿಸಿದರು. ಘಟಕದ ಸಂಚಾಲಕ ಪೊ›.ಶಿವಾನಂದ ಹಾಲೊಳ್ಳಿ ಮಾತನಾಡಿ, ಶ್ರಮದಾನ ಇದು ದೊಡ್ಡ ಪುಣ್ಯದ ಕೆಲಸ. ಇಂತಹ ಕಾರ್ಯದಲ್ಲಿ ಪಾಲ್ಗೊಂಡು ಸೇವೆಗೈದ ಯುವ ರೆಡ್‌ ಕ್ರಾಸ್‌ ಘಟಕದ ಯುವಕ ಯುವತಿಯರು 6 ಶಾಲೆ ಸ್ವಚ್ಛ ಮಾಡುವ ಮೂಲಕ ನಿಜಕ್ಕೂ ಸೇವೆಯಲ್ಲಿ ದೇವರನ್ನು ಕಂಡರು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅವಶ್ಯಕ ವಸ್ತುಗಳ ವಿತರಣೆ:

ಇಲ್ಲಿ ನಿರಾಶ್ರಿತ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬವ ಕೆಲಸ ಮಾಡಲಾಗಿದೆ. ಕೆಲ ಕುಟುಂಬಗಳಿಗೆ ಗ್ರಹ ಬಳಕೆಗೆ ಬೇಕಿರುವ ಅವಷ್ಯಕ ವಸ್ತುಗಳನ್ನುಕೂಡಾ ವಿತರಿಸಲಾಗಿದೆ. ಸಾಂಕ್ರಾಮಿಕ ರೋಗದ ಬೀತಿ ಹೆಚ್ಚಿದ್ದು ಜನ ಇದರಿಂದ ಎಚ್ಚರಿರುವುದಲ್ಲದೆ ತಮ್ಮ ಸುತ್ತಮುತ್ತಲು ಸ್ವಚ್ಛ ಹಾಗೂ ಶುದ್ಧವಾಗಿಟ್ಟುಕೊಳ್ಳುವ ಕೆಲಸ ಮೊದಲು ಮಾಡಿರಿ ಎಂದರು.

ಬೆಳಗಾವಿ: ಸಾರ್ವಜನಿಕ ಪ್ರದೇಶದಲ್ಲಿ ಪೊಲೀ​ಸರ ಮುಂದೆಯೇ ಫೈರಿಂಗ್..!

Follow Us:
Download App:
  • android
  • ios