Koppal News: ಸಾಯುವ ಮುನ್ನಾದಿನ ತಮ್ಮ ಸ್ನೇಹಿತನಿಗೆ ಬಾಲಕರು ಫ್ರೆಂಡಶಿಪ್ ಬ್ಯಾಂಡ್‌ ಕಟ್ಟಿರುವ ಮನಕಲುಕುವ ಘಟನೆ ಕೊಪ್ಪಳದಲ್ಲಿ ನಡೆದಿದೆ

ಕೊಪ್ಪಳ (ಜು. 31): ಸ್ನೇಹವೆಂಬುದು (Friendship) ಮಧುರವಾದ ಬಾಂಧವ್ಯ. ಸ್ನ ಹಿತರು ಸುಖ, ದುಖಃ, ಸಂತೋಷ, ನೋವುಗಳಲ್ಲಿ ನಮ್ಮ ಕುಟುಂಬದವರಂತೆ (Family) ನಮ್ಮೊಂದಿಗೆ ಭಾಗಿಯಾಗುತ್ತಾರೆ. ಈ ಮಧುರ ಬಾಂಧವ್ಯಕ್ಕೆ ಸಾಕ್ಷಿ ಎಂಬಂತೆ ತಮ್ಮ ಸ್ನೇಹಿತ ಸಾಯುವ ಮುನ್ನಾದಿನ ಬಾಲಕರು ಫ್ರೆಂಡಶಿಪ್ ಬ್ಯಾಂಡ್‌ (Friendship Band) ಕಟ್ಟಿ ಅಂತಿಮ ವಿದಾಯ ಹೇಳಿದ ಮನಕಲುಕುವ ಘಟನೆ ಕೊಪ್ಪಳದಲ್ಲಿ (Koppal) ನಡೆದಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣ ನಿವಾಸಿ ಸುಹಾಸ್ ಸೌದ್ರಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ. 

ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದ ಸುಹಾಸ್ ಬಾಲ್ಯದಿಂದಲೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ತೀವ್ರ ಅನಾರೋಗ್ಯದ ನಡುವೆಯೂ ಶಾಲೆ, ಶಿಕ್ಷಕರು, ಸ್ನೇಹಿತರನ್ನು ಸುಹಾಸ್ ನೆನೆಸಿಕೊಂಡಿದ್ದ. ಈ ಹಿನ್ನಲೆಯಲ್ಲಿ ಸುಹಾಸ್‌ಸನ್ನು ಪಾಲಕರು ಶಾಲೆಗೆ ಕರೆದುಕೊಂಡು ಬಂದಿದ್ದರು.

ಈ ವೇಳೆ ಶಾಲಾ ಆವರಣದಲ್ಲಿ ಕಾರಿನಲ್ಲಿಯೇ ಸುಹಾಸ್ ಮಲಗಿದ್ದ. ಕಾರಿನಲ್ಲಿದ್ದ ಸುಹಾಸ್‌ಗೆ ಸ್ನೇಹಿತರು ಫ್ರೆಂಡಶಿಪ್ ಬೆಲ್ಟ್ ಕಟ್ಟಿದ್ದಾರೆ. ಸ್ನೇಹಿತ ಸುಹಾಸ್‌ನ ಪರಿಸ್ಥಿತಿ ಕಂಡು ಸ್ನೇಹಿತರು ಕಣ್ಣೀರು ಹಾಕುತ್ತಾ ಪ್ರೆಂಡಶಿಪ್ ಬೆಲ್ಟ್ ಕಟ್ಟಿದ್ದಾರೆ. ಸುಹಾಸ್ ಓದಿನಲ್ಲಿ ಟಾಪರ್ ಆಗಿದ್ದು, ಶಾಲೆಯಲ್ಲಿ ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ. ಸುಹಾಸ್‌ಗೆ ಫ್ರೆಂಡಶಿಪ್ ಬೆಲ್ಟ್ ಕಟ್ಟುವ ಮೂಲಕ ಸ್ನೇಹಿತರು ಅಂತಿಮ ವಿದಾಯ ಹೇಳಿದ್ದಾರೆ. 

ಮೆದುಳು ಜ್ವರದಿಂದ ಬಳಲುತ್ತಿರುವ ಮಗ, ಉಳಿಸಿಕೊಳ್ಳಲು ನೆರವಿನ ನಿರೀಕ್ಷೆಯಲ್ಲಿ ಪೋಷಕರು