ಕೋವಿಡ್ ಸೋಂಕಿನಲ್ಲೂ ಪರೀಕ್ಷೆ ಬರೆದು ಶೇ.92.6 ಅಂಕ ಪಡೆದ ವಿದ್ಯಾರ್ಥಿ
- ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳೆ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ವಿದ್ಯಾರ್ಥಿ
- ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿ
ಕೊಪ್ಪಳ (ಆ.10): ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳೆ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರೂ ಧೈರ್ಯದಿಂದ ಎದುರಿಸಿದ ವಿದ್ಯಾರ್ಥಿಯೋರ್ವ ಇದೀಗ ಅತ್ಯುತ್ತಮ ಫಲಿತಾಂಶ ಪಡೆದಿದ್ದಾನೆ.
ಕುಕನೂರು ತಾಲೂಕಿನ ಮಂಡಲಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮಾರುತಿ ಎಸ್ಸೆಸ್ಸೆಲ್ಸಿಯಲ್ಲಿ 579 ಅಂಕ ಪಡೆದು ಅಪೂರ್ವ ಸಾಧನೆ ಮಾಡಿದ್ದಾನೆ. ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಬಂದಿವೆ.
ಒಂದೇ ಜಿಲ್ಲೆಯ ನಾಲ್ವರಿಗೆ 625ಕ್ಕೆ 625 ಅಂಕ : ಅವರ ಮನದ ಮಾತುಗಳು ಕೇಳಿ
ಪರೀಕ್ಷೆ ಸಂದರ್ಭದಲ್ಲೇ ಈತನಿಗೆ ಕೋವಿಡ್-19 ಸೋಂಕು ಕಾಣಿಸಿದೆ. ಏನು ಮಾಡಬೇಕೆಂಬ ಆತಂಕದಲ್ಲಿದ್ದ ಈತ ಶಿಕ್ಷಕರು, ಪಾಲಕರ ಪ್ರೋತ್ಸಾಹ, ಧೈರ್ಯದ ಮಾತುಗಳಿಂದ ಪರೀಕ್ಷೆ ಬರೆಯಲು ಮುಂದಾಗಿದ್ದಾನೆ. ಇದರಿಂದ ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಈತನಿಗಾಗಿಯೇ ಪರೀಕ್ಷೆ ಕೇಂದ್ರ ಸಿದ್ಧಪಡಿಸಿ ಅಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ಬರೆದು ಶೇ.92.64 ರಷ್ಟುಅತ್ಯುತ್ತಮ ಅಂಕ ಗಳಿಸಿದ್ದಾನೆ.