ಉತ್ತರ ಕನ್ನಡ: ಎಸ್‌ಪಿ ವರ್ಗಾವಣೆ ವಿರೋಧಿಸಿ ಅರೆ ಬೆತ್ತಲೆ ಪ್ರತಿಭಟನೆ
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟದಿಂದ ಅರೆಬೆತ್ತಲೆ ಪ್ರತಿಭಟನೆ
ಕಾರವಾರ(ನ.05): ಎಸ್‌ಪಿ ಡಾ. ಸುಮನ್ ಪೆನ್ನೇಕರ್ ವರ್ಗಾವಣೆ ವಿರೋಧಿಸಿ ನಿನ್ನೆ(ಶುಕ್ರವಾರ) ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ವಿದ್ಯಾರ್ಥಿ ಒಕ್ಕೂಟದಿಂದ ಅರೆಬೆತ್ತಲೆ ಪ್ರತಿಭಟನೆ ನಡೆಯಿತು. ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ರಾಘು ನಾಯ್ಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಸದಸ್ಯರು ಅರೆಬೆತ್ತಲೆಯಾಗಿ ಸಮುದ್ರಕ್ಕೆ ಇಳಿದು ಎಸ್‌ಪಿ ವರ್ಗಾವಣೆಯನ್ನು ವಿರೋಧಿಸಿದರು. ಅಲ್ಲದೇ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಒಂದೇ ವರ್ಷಕ್ಕೇ ಡಾ. ಸುಮನ್ ಪೆನ್ನೇಕರ್ ಅವರನ್ನು ವರ್ಗಾಯಿಸಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಾಜಕೀಯ ದುರುದ್ದೇಶದಿಂದ ವರ್ಗಾವಣೆ ಮಾಡಿರುವುದಾಗಿ ಆರೋಪಿಸಿದ್ದಲ್ಲದೇ, ದಕ್ಷ ಅಧಿಕಾರಿ ವರ್ಗಾವಣೆ ಕೈಬಿಡುವಂತೆ ಆಗ್ರಹಿಸಿದರು.
UTTARA KANNADA: ಹೋವರ್‌ಕ್ರಾಫ್ಟ್ ನಿಲುಗಡೆಗೆ ಮುಂದುವರಿದ ವಿರೋಧ
ಎಸ್‌ಪಿ ಡಾ.ಸುಮನಾ ಪೆನ್ನೇಕರ್ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿವೆ. ಚುನಾವಣೆ ಹತ್ತಿರ ಬರುತ್ತಿದ್ದಂತೇ ರಾಜಕೀಯ ಪ್ರೇರಿತದ ಕಾರಣ ಎಸ್‌ಪಿಯವರನ್ನು ಉದ್ದೇಶ ಪೂರ್ವಕವಾಗಿ ವರ್ಗಾವಣೆ ಮಾಡಲಾಗ್ತಿದೆ. ಕೂಡಲೇ ಸರ್ಕಾರ ವರ್ಗಾವಣೆ ಕೈ ಬಿಡದಿದ್ದಲ್ಲಿ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.