ಸಹ್ಯಾದ್ರಿ ಕಾಲೇಜಿನ ಹುಡುಯೋರ್ವಳನ್ನು ಸಹ್ಯಾದ್ರಿ ಕಾಲೇಜಿನ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಗೋಕುಲ್ ಚುಡಾಯಿಸಿದ್ದ ಎನ್ನಲಾಗಿದೆ. ಈ ವಿಚಾರವನ್ನು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಅವಿನಾಶ್ ಉಪನ್ಯಾಸಕರಿಗೆ ತಿಳಿಸಿದ್ದಾನೆ.
ಶಿವಮೊಗ್ಗ[ಸೆ.06]: ಹುಡುಗಿಯೊಬ್ಬಳ್ಳನ್ನು ಚುಡಾಯಿಸಿದ ಕ್ಷುಲ್ಲಕ ವಿಚಾರ, ಚಾಕು ಇರಿತದೊಂದಿಗೆ ಅಂತ್ಯವಾದ ಘಟನೆ ನಗರದ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಹ್ಯಾದ್ರಿ ಕಾಲೇಜಿನ ಹುಡುಯೋರ್ವಳನ್ನು ಸಹ್ಯಾದ್ರಿ ಕಾಲೇಜಿನ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಗೋಕುಲ್ ಚುಡಾಯಿಸಿದ್ದ ಎನ್ನಲಾಗಿದೆ. ಈ ವಿಚಾರವನ್ನು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಅವಿನಾಶ್ ಉಪನ್ಯಾಸಕರಿಗೆ ತಿಳಿಸಿದ್ದಾನೆ.
ಈ ವಿಚಾರ ದ್ವೇಷಕ್ಕೆ ತಿರುಗಿ ಗೋಕುಲ್ ಮತ್ತು ಸ್ನೇಹಿತರು ಅವಿನಾಶ್ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಗಾಯಾಳುವಾಗಿದ್ದ ಅವಿನಾಶ್ ಅವರನ್ನು ಮೆಗ್ಗಾನ್ ಆಸ್ಫತ್ರೆಗೆ ದಾಖಲಿಸಲಾಗಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.