ಗದಗ(ಆ.02): ಪಿಯು ಪರೀಕ್ಷಾ ಮಂಡಳಿ ಯಡವಟ್ಟಿಗೆ ವಿದ್ಯಾರ್ಥಿಯೊಬ್ಬ ತೊಂದರೆಗೆ ಸಿಲುಕಿದ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ವಿದ್ಯಾರ್ಥಿಯ ಭವಿಷ್ಯದ ಜೊತೆ ಪಿಯು ಪರೀಕ್ಷಾ ಮಂಡಳಿ ಚೆಲ್ಲಾಟವಾಡುತ್ತಿದೆ. 

ಹೌದು, ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಶಬ್ಬೀರ್ ಖಾಜಿ ಎಂಬ ವಿದ್ಯಾರ್ಥಿಯೇ ಪಿಯು ಪರೀಕ್ಷಾ ಮಂಡಳಿ ಯಡವಟ್ಟಿಗೆ ತೊಂದರೆ ಅನುಭವಿಸುತ್ತಿದ್ದಾನೆ. ಕೆಇಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಶಬ್ಬೀರ್ ಖಾಜಿ ದ್ವಿತೀಯ ಪಿಯು ಪರೀಕ್ಷೆಯ ಎಲ್ಲ ವಿಷಯದಲ್ಲಿ 90 ರ ಮೇಲ್ಪಟ್ಟು ಅಂಕ ಪಡೆದಿದ್ದಾನೆ. ಆದರೆ, ಪಿಯು ಪರೀಕ್ಷಾ ಮಂಡಳಿಯ ಯಡವಟ್ಟಿನಿಂದ ಇಂಗ್ಲಿಷ್ ವಿಷಯದಲ್ಲಿ ಫೇಲ್ ಆಗಿದ್ದಾನೆ. ಈ ಸಂಬಂಧ ಶಬ್ಬೀರ್ ಖಾಜಿ ಉತ್ತರ ಪ್ರತಿಕೆಯ ಫೋಟೋ ಕಾಪಿ ತರಿಸಿ ನೊಡಿದರೆ 54 ಅಂಕ ಪಡೆದಿದ್ದಾನೆ. ಹೀಗಾಗಿ ಶಬ್ಬೀರ್ ಖಾಜಿ ಮೌಲ್ಯ ಮಾಪನದ ಮೊರೆ ಹೋಗಿದ್ದ, ಮರು ಮೌಲ್ಯ ಮಾಪನದಲ್ಲೂ ಈ ವಿದ್ಯಾರ್ಥಿ ಉತೀರ್ಣ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ.

ಗದಗ ನಗರದಲ್ಲೂ ಭೂ ಕುಸಿತ: ಆತಂಕದಲ್ಲಿ ಜನತೆ..! 

ಹೀಗಾಗಿ ಪಿಯು ಪರೀಕ್ಷಾ ಮಂಡಳಿ ಯಡವಟ್ಟಿಗೆ ಶಬ್ಬೀರ್ ಖಾಜಿ ಸಮಸ್ಯೆ ಎದುರಿಸುತ್ತಿದ್ದಾನೆ. ಈ ಬಗ್ಗೆ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿ ಶಬ್ಬೀರ್ ಅತಂತ್ರ ಸ್ಥಿತಿಯಲ್ಲಿದ್ದಾನೆ. 

ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಶಬ್ಬೀರ್ ಖಾಜಿ, ದಯವಿಟ್ಟು ನನ್ನ ಭವಿಷ್ಯದ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಅಂತ ಮನವಿ ಮಾಡಿಕೊಂಡಿದ್ದಾನೆ.