ಆನ್‌ಲೈನ್ ಕ್ಲಾಸ್‌ಗಾಗಿ 15 ಅಡಿ ಎತ್ತರದ ಮರ ಏರುವ ವಿದ್ಯಾರ್ಥಿ!
ಶಿರಸಿ ತಾಲೂಕಿನ ಬಕ್ಕಳದ ವಿದ್ಯಾರ್ಥಿಯೊಬ್ಬ ಮೊಬೈಲ್ ಸಿಗ್ನಲ್‌ಗಾಗಿ ಮರ ಏರಿ ಆನ್‌ಲೈನ್ ಕ್ಲಾಸ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಇವರು ಶ್ರೀರಾಮ ಹೆಗಡೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಎಂಎಸ್‌ಡಬ್ಲ್ಯೂ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ.
ಕಾರವಾರ(ಮೇ 19): ಶಿರಸಿ ತಾಲೂಕಿನ ಬಕ್ಕಳದ ವಿದ್ಯಾರ್ಥಿಯೊಬ್ಬ ಮೊಬೈಲ್ ಸಿಗ್ನಲ್‌ಗಾಗಿ ಮರ ಏರಿ ಆನ್‌ಲೈನ್ ಕ್ಲಾಸ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಇವರು ಶ್ರೀರಾಮ ಹೆಗಡೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಎಂಎಸ್‌ಡಬ್ಲ್ಯೂ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ.
"
ಲಾಕ್‌ಡೌನ್ ಬಳಿಕ ಮನೆಗೆ ಹಿಂತಿರುಗಿದ್ದ ಶ್ರೀರಾಮ್‌ಗೆ ಮುಂದೆ ಮುಂದಿನ ತರಗತಿಗಳು ಹೇಗೆ ನಡೆಯುತ್ತವೆ ಎಂಬ ಪ್ರಶ್ನೆಯಿತ್ತು. ಬಳಿಕ ಸರ್ಕಾರ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ, ತರಗತಿ ನಡೆಸಲು ಸೂಚಿಸಿದ್ದರಿಂದ ಅದೇ ವ್ಯವಸ್ಥೆ ಮುಂದುವರಿದಿತ್ತು.
ಸರ್ಕಾರದ 1600 ಕೋಟಿ ಪ್ಯಾಕೇಜ್ ಬಗ್ಗೆ ಕುಮಾರಸ್ವಾಮಿ ಕಿಡಿ
ಅಂದಹಾಗೆ, ಶಿರಸಿ ನಗರದಿಂದ ಶ್ರೀರಾಮ ಅವರ ಮನೆಗೆ 30 ಕಿಮೀ ದೂರ ಸಾಗಬೇಕು. ಆದರೆ, ಮೊಬೈಲ್‌ಗೆ ನೆಟ್‌ವರ್ಕ್ ಇಲ್ಲ. ಮತ್ತೆ ಬೇರೆ ದಾರಿ ಕಾಣದೆ ಶ್ರೀರಾಮ, ಮರ ಹತ್ತಿ ನೆಟ್‌ವರ್ಕ್ ಹುಡುಕಲಾರಂಭಿಸಿದ್ದರು. ಆಗಲೇ, ಅವರಿಗೆ ನೆಟ್‌ವರ್ಕ್ ಸಿಗಲು ಪ್ರಾರಂಭವಾಗಿದ್ದರಿಂದ ಇದೀಗ ದಿನಾಲೂ ಮನೆಯಿಂದ ಒಂದು ಕಿ.ಮೀ. ದೂರ ನಡೆದುಕೊಂಡು ಹೋಗಿ 10-15 ಅಡಿ ಎತ್ತರದ ಮರ ಹತ್ತುತ್ತಾರೆ.
ಲಾಲ್‌ಬಾಗ್ ಓಪನ್: ವಾಕಿಂಗ್‌ಗೆ ದೌಡಾಯಿಸಿದ ಉದ್ಯಾನನಗರಿಯ ಜನ
ಅಲ್ಲಿಂದಲೇ ಅವರು ಆನ್‌ಲೈನ್ ವರ್ಚುವಲ್ ಕ್ಲಾಸ್ ಮೂಲಕ ಮಾಹಿತಿ ಹಾಗೂ ಇಂಟರ್‌ನೆಟ್ ಮೂಲಕ ಇತರ ಮಾಹಿತಿ ಪಡೆದುಕೊಂಡು ಹಿಂತಿರುತ್ತಾರೆ. ಕಳೆದ ಒಂದೂವರೆ ತಿಂಗಳಿಂದ ಇದನ್ನೇ ನಡೆಸುತ್ತಿರುವ ಶ್ರೀರಾಮ್, ಕಲಿಯೋ ಆಸೆಯಿಂದ 10- 15 ಅಡಿ ಎತ್ತರದ ಮರ ಹತ್ತೋ ರಿಸ್ಕ್ ತೆಗೆದುಕೊಂಡು ಕಠಿಣ ಪರಿಶ್ರಮ ಮಾಡುತ್ತಿದ್ದಾರೆ. ಗೋಪಾಲ ಹೆಗಡೆ ಹಾಗೂ ಗೀತಾ ದಂಪತಿಯ ಪುತ್ರನಾಗಿರುವ ಶ್ರೀರಾಮ ಓದುವ ಛಲದಿಂದ ಮರ ಏರುತ್ತಿದ್ದಾರೆ.