ಬೆಂಗಳೂರು(ಡಿ.12): ಶಾಲೆಗೆ ಪೋಷಕರನ್ನು ಕರೆದುಕೊಂಡು ಬಾ ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಾಲೆ ತಪ್ಪಿಸುತ್ತಿದ್ದ ಬಾಲಕನಿಗೆ ಪೋಷಕರನ್ನು ಕರೆದುಕೊಂಡ ಬಾ ಎಂದು ಶಿಕ್ಷಕರು ಸೂಚಿಸಿದ್ದರು. ಅಷ್ಟಕ್ಕೇ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

"

ವೇಣುಗೋಪಾಲ್( 13 ) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬೆಂಗಳೂರಿನ ದೊಮ್ಮಲೂರು ಲೇಔಟ್‌ನಲ್ಲಿ ಘಟನೆ ನಡೆದಿದೆ. ವೇಣುಗೋಪಾಲ್ ಎಂಬ ವಿದ್ಯಾರ್ಥಿ ಶಾಲೆಗೆ ಆಗಾಗ ತಪ್ಪಿಸಿಕೊಳ್ಳುತ್ತಿದ್ದ. 

ಪರಿಹಾರಕ್ಕಾಗಿ ಟವರ್ ಏರಿದ ರೈತ, ಆತ್ಮಹತ್ಯೆಗೆ ಯತ್ನ

ಹೀಗಾಗಿ ಪೋಷಕರನ್ನ ಕರೆದುಕೊಂಡು ಬರುವಂತೆ ಶಾಲೆ ಶಿಕ್ಷಕರು ಸೂಚಿಸಿದ್ದರು. ಇದಕ್ಕೆ ಭಯ ಬಿದ್ದು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿ ಪೋಷಕರು ಶಾಲೆ ಬಳಿ ತೆರಳಿ ಗಲಾಟೆ ಮಾಡುತ್ತಿದ್ದು, ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಮುಂದಿನ ಚುನಾವಣೆ ಗೆಲ್ಲಲು ಪೌರತ್ವ ತಿದ್ದುಪಡಿ ತಂತ್ರ'..!