ಗ್ರಾಪಂನಲ್ಲಿ ಅಧ್ಯಕ್ಷ-ಪಿಡಿಒ ಮಧ್ಯೆ ಮುನಿಸು: ಅಭಿವೃದ್ಧಿ ಕುಂಠಿತ
- ಗ್ರಾಪಂನಲ್ಲಿ ಅಧ್ಯಕ್ಷ-ಪಿಡಿಒ ಮಧ್ಯೆ ಮುನಿಸು: ಅಭಿವೃದ್ಧಿ ಕುಂಠಿತ
- ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ಗ್ರಾಪಂನಲ್ಲಿ ಹಳಿ ತಪ್ಪಿದ ಆಡಳಿತ
- ಪಿಡಿಒ ವರ್ಗಾವಣೆಗೆ ಒತ್ತಾಯಿಸಿ ಸಿಇಒಗೆ ದೂರು
ತೀರ್ಥಹಳ್ಳಿ (ನ.10) : ಪಟ್ಟಣಕ್ಕೆ ಹೊಂದಿಕೊಂಡಿದ್ದು ತಾಲೂಕಿನ ದೊಡ್ಡ ಪಂಚಾಯಿತಿಗಳಲ್ಲಿ ಒಂದಾಗಿರುವ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು, ಪಿಡಿಓ ನಡುವೆ ಹೊಂದಾಣಿಕೆ ಇಲ್ಲದೇ ಕಳೆದ ಒಂದೂವರೆ ತಿಂಗಳಿನಿಂದ ಗ್ರಾ.ಪಂ. ಆಡಳಿತ ನಿಂತ ನೀರಾಗಿದೆ. ಇದರಿಂದ ಸಾರ್ವಜನಿಕರ ಕೆಲಸ, ಕಾರ್ಯಗಳು ನನೆಗುದಿಗೆ ಬಿದ್ದಿವೆ.
ಬೇನಾಮಿ ಬಿಲ್ ಸೃಷ್ಟಿಸಿ 40 ಲಕ್ಷ ಗುಳುಂ ಮಾಡಿದ ನುಗ್ಗೇಹಳ್ಳಿ ಗ್ರಾಪಂ ಪಿಡಿಒ
ಗ್ರಾಮ ಪಂಚಾಯಿತಿಗೆ ಇತ್ತೀಚಿಗೆ ವರ್ಗವಾಗಿ ಬಂದಿರುವ ಪಿಡಿಒ ಮತ್ತು 10 ವರ್ಷಗಳಿಂದ ಇರುವ ಡೇಟಾ ಎಂಟ್ರಿ ಆಪರೇಟರ್‌ಗಳು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ. ಸದಸ್ಯರಿಗೆ ಗೌರವವನ್ನೂ ಕೊಡದೇ ಸಾರ್ವಜನಿಕರ ಅಹವಾಲುಗಳಿಗೂ ಸ್ಪಂದಿಸುತ್ತಿಲ್ಲ ಎಂಬುದು ಅಧ್ಯಕ್ಷರ ಆರೋಪ. ಈ ಬೆಳವಣಿಗೆಯಿಂದ ಬೇಸರಗೊಂಡ ಅಧ್ಯಕ್ಷರು ಗ್ರಾಪಂ ಕಡೆಗೆ ಮುಖ ಮಾಡದೇ ಸುಮಾರು ಒಂದೂವರೆ ತಿಂಗಳೇ ಕಳೆದಿದೆ ಎನ್ನಲಾಗಿದೆ. ಪಿಡಿಒ ಸೇರಿದಂತೆ ಇಬ್ಬರನ್ನೂ ಇಲ್ಲಿಂದ ವರ್ಗಾವಣೆ ಮಾಡುವಂತೆ ನಿರ್ಣಯ ಮಾಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ದೂರು ಸಹ ಸಲ್ಲಿಸಲಾಗಿದೆ.
ಅಧ್ಯಕ್ಷರ ಬೆರಳಚ್ಚು ಇಲ್ಲದ ಕಾರಣ ಬಿಲ್ ಮಾಡಲಾಗದೆ ಕಳೆದ ಮೂರು ತಿಂಗಳಿಂದ ಗ್ರಾ.ಪಂ. ಸಿಬ್ಬಂದಿಗೆ ವೇತನವೂ ಆಗಿಲ್ಲ. ಇಂಟರ್‌ನೆಟ್ ಬಿಲ್ ಕೂಡ ಪಾವತಿಸದೇ ದಿನನಿತ್ಯದ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಸಾರ್ವಜನಿಕರ ಅರ್ಜಿಗಳು ರಾಶಿ ಬಿದ್ದಿದ್ದು ವರ್ಗ-1 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಆಗಬೇಕಿರುವ ಕೆಲಸಗಳೂ ನನೆಗುದಿಗೆ ಬಿದ್ದಿವೆ. ಈ ನಡುವೆ ಕಳೆದ ಸುಮಾರು ಹತ್ತು ವರ್ಷಗಳಿಂದ ಡೇಟಾ ಆಪರೇಟರ್ಸ್ ಆಗಿ ಕೆಲಸ ಮಾಡುತ್ತಿರುವ ನವೀನ್ ಎಂಬವರನ್ನು ಈ ತಿಂಗಳ 15ರವರೆಗೆ ರಜೆ ಮೇಲೆ ಕಳುಹಿಸಲಾಗಿದೆ.
ನ.16ರಂದು ಸಾಮಾನ್ಯ ಸಭೆ:
ಗ್ರಾಪಂ ಅಧ್ಯಕ್ಷೆ ಭವ್ಯಾ ರಾಘವೇಂದ್ರ ಈ ಕುರಿತು ಪ್ರತಿಕ್ರಿಯಿಸಿ, ನಮ್ಮ ಗಮನಕ್ಕೆ ತಾರದೇ ಉದ್ಯೋಗ ಖಾತ್ರಿ ಮುಂತಾದ ಕೆಲಸಗಳು ಕೂಡ ನಡೆಯುತ್ತಿವೆ. ಇತರೆ ಸಿಬ್ಬಂದಿಯಿಂದ ನಾವು ವಿಚಾರ ತಿಳಿದುಕೊಳ್ಳುವಂತಾಗಿದೆ. ಸದಸ್ಯರಿಗೆ ಗೌರವ ನೀಡದ ಪಿಡಿಒ ಮತ್ತು ಡಿಟಿಪಿ ಆಪರೇಟರ್ ಸಾರ್ವಜನಿಕರ ಕೆಲಸಗಳ ಬಗ್ಗೆಯೂ ಕಾಳಜಿ ತೋರುತ್ತಿಲ್ಲ. ಹೀಗಾಗಿ ಈ ಇಬ್ಬರನ್ನು ಇಲ್ಲಿಂದ ವರ್ಗಾವಣೆ ಮಾಡುವಂತೆ ಪಂಚಾಯಿತಿ ನಿರ್ಣಯ ಮಾಡಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಾಪಂ ಇಓಗೆ ದೂರು ಸಲ್ಲಿಸಿದ್ದೇವೆ. ಈ ತಿಂಗಳ 16ನೇ ತಾರೀಖು ಪಂಚಾಯಿತಿ ಸಾಮಾನ್ಯ ಸಭೆ ಕರೆದಿದ್ದೇವೆ ಎನ್ನುತ್ತಾರೆ.
ಪಿಡಿಒ ಅನನುಭವಿಯಾಗಿದ್ದು ಗ್ರಾಪಂ ಕಡೆಯಿಂದ ಆಗಬೇಕಿರುವ ಯಾವ ಕೆಲಸಗಳೂ ಸರಿಯಾಗಿ ನಡೆಯುತ್ತಿಲ್ಲ. ಪ್ರಭಾವಿಗಳ ಶಿಫಾರಸಿನ ಮೇಲೆ ಇಲ್ಲಿಗೆ ವರ್ಗವಾಗಿ ಬಂದಿರುವ ಪಿಡಿಓ ಪಂಚಾಯಿತಿ ಸದಸ್ಯರಿಗೆ ಗೌರವ ನೀಡದೇ ಅಸಡ್ಡೆಯಿಂದ ಕಾಣುತ್ತಿದ್ದಾರೆ ಎಂಬ ಗಂಭೀರ ಆರೋಪ ಗ್ರಾಪಂ ಉಪಾಧ್ಯಕ್ಷ ಪ್ರಭಾಕರ್ ಅವರದು.
ಸದಸ್ಯರ ಅಭಿಪ್ರಾಯ:
ಈ ಬೆಳವಣಿಗೆಯ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಗ್ರಾಪಂ ಸದಸ್ಯ ಅಣ್ಣಪ್ಪ ಹೇಳೋದು ಹೀಎ; ಗ್ರಾಪಂ ಅಧ್ಯಕ್ಷರು ನಡೆದುಕೊಂಡಿರುವ ರೀತಿ ನ್ಯಾಯ ಸಮ್ಮತವಾಗಿಲ್ಲ. ಮಾತ್ರವಲ್ಲ, ಅಂತಹ ಯಾವುದೇ ವರ್ತನೆ ಪಿಡಿಓ ಕಡೆಯಿಂದ ನಡೆದಿರುವುದು ನಮ್ಮಗಳ ಗÜಮನಕ್ಕೆ ಬಂದಿಲ್ಲ. ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಆದ್ಯತೆ ನೀಡದೆ ಸಿಬ್ಬಂದಿ ವಿಚಾರದಲ್ಲಿ ನಮ್ಮ ಮನವಿ ಧಿಕ್ಕರಿಸಿ, ಸಭೆ ಬಹಿಷ್ಕರಿಸಿರುವುದು ಹಾಗೂ ಸೂಕ್ತ ದಾಖಲೆ ಇಲ್ಲದೇ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವ ಕ್ರಮವೂ ಸರಿಯಲ್ಲ ಎಂದಿದ್ದಾರೆ.
ಗ್ರಾಪಂ ಸದಸ್ಯ- ಪಿಡಿಓ ಮಾರಾಮಾರಿ: ಠಾಣೆ ಎದುರು ಕಾಂಗ್ರೆಸ್ ಪ್ರತಿಭಟನೆ
ಕಾನೂನು ಬದ್ಧವಾಗಿ ನಿಷ್ಠೆಯಿಂದ ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ನಿಯಮವನ್ನು ಮೀರಿ ಮನೆ ರಿಪೇರಿಗೆ ಹಣ ಕೊಡದ ಕಾರಣ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರ ಗಂಡನಿಂದ ಬೀದಿಯಲ್ಲಿ ಕೆಟ್ಟಮಾತನ್ನು ಕೂಡ ಕೇಳಿಸಿಕೊಂಡಿದೀನಿ. ಕಾನೂನು ಪಾಲನೆ ಬಿಟ್ಟು ಕೆಲಸ ಮಾಡುವ ಸಾಧ್ಯತೆ ನನ್ನಿಂದಾಗದು. ಈ ಮೊದಲು ನಡೆದಿರುವ ಗ್ರಾಪಂ ಸಭೆಯಲ್ಲಿ ಶಿಷ್ಟಾಚಾರವನ್ನು ಮೀರಿ ಅಧÜ್ಯಕ್ಷರು ಸಭೆ ನಿರ್ಣಯ ಬರೆದಿದ್ದಾರೆ
- ಸರಿತಾ, ಪಿಡಿಒ, ಗ್ರಾಪಂ