ಹುಕ್ಕಾ ಬಾರ್ ಬಂದ್ : ಸಚಿವ ಈಶ್ವರಪ್ಪ ಖಡಕ್ ಆದೇಶ
ಯಾವುದೇ ಕಾರಣಕ್ಕೂ ಹುಕ್ಕಾ ಬಾರ್ ತೆರೆಯಲು ಬಿಡುವುದಿಲ್ಲ. ಒಂದಲ್ಲ ಒಂದು ಕಾರಣದಿಂದ ಮುಚ್ಚಲಾಗುವುದು ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ (ಸೆ.16): ರಾಜ್ಯದಲ್ಲಿ ಡ್ರಗ್ ಮಾಫಿಯಾ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ಸಂಬಂಧ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಯಾವುದೇ ಕಾರಣಕ್ಕೂ ಹುಕ್ಕಾ ಬಾರ್ ತೆರೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಭೆ ನಡೆಸಿದ ಸಚಿವ ಈಶ್ವರಪ್ಪ ಹುಕ್ಕಾ ಬಾರನ್ನು ಒಂದಲ್ಲ ಒಂದು ಕಾರಣದಿಂದ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ ಹುಕ್ಕಾ ಬಾರ್ ಬಂದ್ ಮಾಡಲು ಪಾಲಿಕೆಗೆ ಸೂಚಿಸಲಾಗಿತ್ತು. ಆದರೆ ಹುಕ್ಕಾ ಬಾರ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ಮತ್ತೆ ಒಪನ್ ಮಾಡಿಕೊಂಡಿದ್ದಾರೆ. ಆದರೆ ಒಂದಲ್ಲ ಒಂದು ಕಾರಣ ನೀಡಿ ಬಂದ್ ಮಾಡುವ ಕ್ರಮ ಜರುಗಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
'ಎಲ್ಲರೂ ಬಿಜೆಪಿ ಸೇರ್ಪಡೆಗೊಳ್ಳಿ : ಕಾಂಗ್ರೆಸ್ ಪಕ್ಷ ಅವಸಾನದ ಅಂಚಲ್ಲಿದೆ' .
ಇನ್ನು ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರ ಜೊತೆ ತಿಂಗಳಿಗೊಮ್ಮೆ ಸಭೆ ನಡೆಸುವುದರ ಜೊತೆಗೆ ಜಿಲ್ಲೆಯನ್ನು ಗಾಂಜಾ, ಗುಟ್ಕಾ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಜಿಲ್ಲೆಯಲ್ಲಿ ಹುಕ್ಕಾ ಬಾರ್ ಬಂದ್ ಮಾಡುವ ಕುರಿತಂತೆ ಕಳೆದ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಮಹಾನಗರ ಪಾಲಿಕೆ ಬಂದ್ ಮಾಡಿಸಿತ್ತು. ಆದರೆ ಇತ್ತೀಚೆಗೆ ಹುಕ್ಕಾಬಾರ್ ಮತ್ತೆ ಒಪನ್ ಆಗಿರುವ ಕುರಿತು ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಸಭೆಯಲ್ಲಿ ಪ್ರಸ್ತಾಪ ಮಾಡಿದರು.