Asianet Suvarna News Asianet Suvarna News

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಿತ್ಯ 85 ಜನರಿಗೆ ಕಚ್ಚುತ್ತಿವೆ ನಾಯಿಗಳು: ಬಿಬಿಎಂಪಿ ಅಂಕಿ ಅಂಶದಲ್ಲಿ ಏನಿದೆ?

ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರದಲ್ಲಿ ಪ್ರತಿ ದಿನ ಸರಾಸರಿ 85ಕ್ಕೂ ಅಧಿಕ ಮಂದಿ ನಾಯಿ ಕಚ್ಚಿಸಿಕೊಳ್ಳುತ್ತಿದ್ದಾರೆ!
 

Street Dogs Bite 85 people daily in Bengaluru gvd
Author
First Published Dec 16, 2023, 12:48 PM IST

ಬೆಂಗಳೂರು (ಡಿ.16): ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರದಲ್ಲಿ ಪ್ರತಿ ದಿನ ಸರಾಸರಿ 85ಕ್ಕೂ ಅಧಿಕ ಮಂದಿ ನಾಯಿ ಕಚ್ಚಿಸಿಕೊಳ್ಳುತ್ತಿದ್ದಾರೆ! ಕಳೆದ 2023ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಯ ಒಟ್ಟು ಆರು ತಿಂಗಳಲ್ಲಿ ನಗರದಲ್ಲಿ ಒಟ್ಟು 15,285 ಮಂದಿಗೆ ನಾಯಿಗಳು ಕಚ್ಚಿದ ವರದಿಯಾಗಿದೆ ಎಂಬುದು ಬಿಬಿಎಂಪಿಯ ಅಂಕಿ ಅಂಶದಿಂದ ಬೆಳಕಿಗೆ ಬಂದಿದೆ. ಈ ಪ್ರಕಾರ ನಗರದಲ್ಲಿ ಪ್ರತಿ ದಿನ ಸುಮಾರು 85 ಮಂದಿ ನಾಯಿ ಕಚ್ಚಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.

ಇತ್ತೀಚೆಗೆ ಬಿಬಿಎಂಪಿಯು ನಿವೇದಿ ಸಂಸ್ಥೆ ಸಹಯೋಗದಲ್ಲಿ ಕೈಗೊಂಡ ಬೀದಿ ನಾಯಿಗಳ ಸಮೀಕ್ಷಾ ವರದಿಯಲ್ಲಿ 2.79 ಲಕ್ಷ ಬೀದಿ ನಾಯಿಗಳಿದ್ದು, 2019ಕ್ಕೆ ಹೋಲಿಸಿದರೆ ಬೀದಿ ನಾಯಿಗಳ ಸಂಖ್ಯೆ ಶೇ.10ರಷ್ಟು ಕಡಿಮೆಯಾಗಿವೆ ಎಂದು ತಿಳಿಸಿತ್ತು. ಆದರೆ, ಬೀದಿ ನಾಯಿಗಳ ಕಚ್ಚಿದ ಪ್ರಕರಣಗಳ ಸಂಖ್ಯೆ ಮಾತ್ರ ಏರಿಕೆಯಾಗುತ್ತಿದೆ. ಅದರಲ್ಲೂ ಕೇಂದ್ರ ಭಾಗದಲ್ಲಿಯೇ ಹೆಚ್ಚಿನ ನಾಯಿ ಕಚ್ಚಿದ ಪ್ರಕರಣ ವರದಿಯಾಗಿವೆ. ಬಿಬಿಎಂಪಿಯ ಪೂರ್ವ ವಲಯದ ವ್ಯಾಪ್ತಿಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ನಾಯಿ ಕಚ್ಚಿದ ವರದಿಯಾಗಿದೆ. ಉಳಿದಂತೆ ಪಶ್ಚಿಮ ವಲಯದಲ್ಲಿ 3 ಸಾವಿರಕ್ಕೂ ಅಧಿಕ ಹಾಗೂ ದಕ್ಷಿಣ ವಲಯದಲ್ಲಿ 2500ಕ್ಕೂ ಅಧಿಕ ನಾಯಿ ಕಚ್ಚಿವೆ.

ರಾಮನಗರಕ್ಕೆ ಕಾವೇರಿ ತರುವ ಆಲೋಚನೆ ಡಿಕೆಶಿಯದ್ದು: ಸಂಸದ ಡಿ.ಕೆ.ಸುರೇಶ್

ಮತ್ತೆ ಕಚ್ಚುವ ಪ್ರಕರಣ ಏರಿಕೆ: 2017-18ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ 36,672 ನಾಯಿ ಕಚ್ಚಿದ ಪ್ರಕರಣ ವರದಿಯಾಗಿತ್ತು. 2018-19ರಲ್ಲಿ 38,978 ಪ್ರಕರಣ ದಾಖಲಾಗಿದ್ದವು. 2019-20ರಲ್ಲಿ 42,818, 2020-21ರಲ್ಲಿ ಈ ಸಂಖ್ಯೆ 18,629ಕ್ಕೆ ಇಳಿಕೆಯಾಗಿತ್ತು. 2021-22ರಲ್ಲಿ 17,610 ಇತ್ತು. ಇದೀಗ 2022-23ನೇ ಸಾಲಿನಲ್ಲಿ ಮತ್ತೆ 22,945ಕ್ಕೆ ಏರಿಕೆಯಾಗಿದೆ. ಇದೀಗ 2023ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ 15,285 ಪ್ರಕರಣ ದಾಖಲಾಗಿವೆ. 2023-24ನೇ ಸಾಲಿನ ವರ್ಷ ಮುಕ್ತಾಯಗೊಳ್ಳುವುದರಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ.

ಈ ಕುರಿತು ವಿವರಣೆ ನೀಡಿರುವ ಬಿಬಿಎಂಪಿಯ ಪಶುಪಾಲನೆ ವಿಭಾಗದ ಅಧಿಕಾರಿಗಳು, ಬೀದಿ ನಾಯಿಗಳ ಹಾವಳಿ ತಡೆಗಟ್ಟುವುದಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರದಲ್ಲಿ ಶೇ.10ರಷ್ಟು ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗಿದೆ. ಬೀದಿ ನಾಯಿಗಳಿಗೆ ನಿಯಮಿತವಾಗಿ ಲಿಸಿಕೆ, ಸಂತಾನಹರಣ ಚಿಕಿತ್ಸೆ ನಡೆಸಲಾಗುತ್ತಿದೆ. ಸಾರ್ವಜನಿಕರು ಮತ್ತು ಮಕ್ಕಳಲ್ಲಿ ಬೀದಿ ನಾಯಿಗಳ ಕಚ್ಚುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಾಲಿನ ದರ ಏರಿಕೆಗೆ ಮುಖ್ಯಮಂತ್ರಿ ಸೂಚನೆ ನೀಡಿಲ್ಲ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ

ಬೀದಿ ನಾಯಿಗಳು ಹಾಗೂ ಕಚ್ಚಿದ ಸಂಖ್ಯೆ
ವಲಯ ಒಟ್ಟು ನಾಯಿ ಸಂಖ್ಯೆ ಕಚ್ಚಿದ ಸಂಖ್ಯೆ (ಏಪ್ರಿಲ್‌- ಸೆಪ್ಟಂಬರ್‌)

ಪೂರ್ವ 37,685 4,109
ಪಶ್ಚಿಮ 22,025 3,654
ದಕ್ಷಿಣ 23,241 2,045
ದಾಸರಹಳ್ಳಿ 21,221 659
ಆರ್ ಆರ್‌ ನಗರ 41,266 871
ಬೊಮ್ಮನಹಳ್ಳಿ 39,183 1,025
ಯಲಹಂಕ 36,343 1,041
ಮಹದೇವಪುರ 58,371 1,781
ಒಟ್ಟು 2,79,335 15,285

Follow Us:
Download App:
  • android
  • ios