ಹುಬ್ಬಳ್ಳಿ:(ಸೆ.20) ಇಲ್ಲಿನ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾದ ಪಬ್ಲಿಕ್‌ ಸ್ಟೋರ್‌ನ ಕಪಾಟಿನಲ್ಲಿ ಶ್ವಾನವೊಂದು ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಶ್ವಾನ ಮಲಗಿದ್ದರಿಂದ ಪಬ್ಲಿಕ್‌ ಸ್ಟೋರನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲವೆಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಳ್ಳವರು ತಾವು ಬಳಸಿದ ಅಥವಾ ಇಲ್ಲದವರಿಗಾಗಿ ವಸ್ತುಗಳನ್ನು ಇಲ್ಲಿ ಇರಿಸಬಹುದಾಗಿದ್ದು, ಅದನ್ನು ಅವರು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿ ನಾಯಿ ನಿದ್ರಿಸುತ್ತಿರುವ ಫೋಟೋ ಟ್ವಿಟ್ಟರ್‌ನಲ್ಲಿ ಹರಿದಾಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಲವರು ಸಚಿವ ಪಿಯೂಶ್‌ ಗೋಯಲ್‌, ಸಚಿವ ಸುರೇಶ ಅಂಗಡಿ ಹಾಗೂ ಸಚಿವ ಪ್ರಹ್ಲಾದ ಜೋಶಿ ಅವರಿಗೂ ಇದನ್ನು ಟ್ವಿಟ್‌ ಮಾಡಿದ್ದಾರೆ. ಹಲವರು ನಾಯಿಯ ಕುರಿತು ಸಿಂಪತಿ ವ್ಯಕ್ತಪಡಿಸಿದ್ದರೆ, ಇನ್ನು ಹಲವರು ರೈಲ್ವೆ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ನಾಯಿಗಳು ಇಲ್ಲಿ ನಿದ್ರಿಸುವುದಾದರೆ ವಸ್ತುಗಳನ್ನು ಇಡುವುದು ಹೇಗೆ? ಅದಲ್ಲದೆ, ಇಲ್ಲಿರುವ ವಸ್ತುಗಳನ್ನು ಯಾರು ಪಡೆಯುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.