* ಯಾವುದೇ ಆರ್ಥಿಕ ವ್ಯವಹಾರ ಕೈಗೊಳ್ಳದಂತೆ ತುರ್ತು ಅಗತ್ಯ * ಜಮೀನು ವಶಪಡಿಸಿಕೊಂಡ ರೈತರಿಗೆ ಇಲ್ಲಿಯವರೆಗೆ ಪರಿಹಾರ ಧನ ಮಂಜೂರಾಗಿಲ್ಲ* ಟೌನ್‌ಶಿಪ್ ನಿರ್ಮಾಣ ಮಾಡಲು ವಿರೋಧ
ಬೆಂಗಳೂರು(ಫೆ.15): ನೈಸ್ ಕಂಪನಿ ಹಾಗೂ ಕೆಐಎಡಿಬಿ(KIADB) ಅಧಿಕಾರಿಗಳು ರೈತರ ಜಮೀನುಗಳನ್ನು ಅನಧಿಕೃತವಾಗಿ ಹಣ ನೀಡಿ, ಖರೀದಿ ಮಾಡುತ್ತಿರುವ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್(ST Somashekhar) ಅವರು ನೈಸ್ ಸಮಿತಿ ಅಧ್ಯಕ್ಷರು ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್(CC Patil) ಅವರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಯಾವುದೇ ಆರ್ಥಿಕ ವ್ಯವಹಾರ ಕೈಗೊಳ್ಳದಂತೆ ತುರ್ತು ಅಗತ್ಯ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೆಮ್ಮಿಗೆಪುರ, ವರಾಹಸಂದ್ರ, ಕೆಂಗೇರಿ ಗೊಲ್ಲಹಳ್ಳಿ, ಬಡಮನವಾರ್ತೆ ಕಾವಲ, ದೇವಗೆರೆ, ಗುಡಿಮಾವು, ಕಂಬೀಪುರ ಗಂಗಸಂದ್ರ ಗೋಣಿಪುರ, ತಿಪ್ಪೂರು, ಸೀಗೇಹಳ್ಳಿ, ಕೊಡಿಯಾಲ ಕರೇನಹಳ್ಳಿ, ಮತ್ತು ದೊಡ್ಡಕುಂಟನ ಹಳ್ಳಿ ಗ್ರಾಮಗಳಲ್ಲಿನ ರೈತರು(Farmers) ತಮ್ಮ ಜಮೀನುಗಳನ್ನು(Land) ಟೌನ್‌ಶಿಪ್ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಾಗಿದ್ದು, ಜಮೀನು ವಶಪಡಿಸಿಕೊಂಡ ರೈತರಿಗೆ ಇಲ್ಲಿಯವರೆಗೆ ಪರಿಹಾರ ಧನ ಮಂಜೂರಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ರೈತರಿಗೆ ಸಾಲ ನೀಡಿಕೆಯಲ್ಲಿ 68% ಗುರಿ ಸಾಧನೆ: ಸಚಿವ ಎಸ್.ಟಿ.ಸೋಮಶೇಖರ್
ಇಷ್ಟು ಮಾತ್ರವಲ್ಲದೇ ಅಗತ್ಯಕ್ಕಿಂತ ಹೆಚ್ಚಿನ ಜಮೀನುಗಳನ್ನು ವಶಪಡಿಸಿಕೊಂಡು ರೈತರಿಗೆ ಅನ್ಯಾಯವಾಗಿರುವ ಬಗ್ಗೆ ಹಾಗೂ ಟೌನ್‌ಶಿಪ್ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಹಲವಾರು ಅಂಶಗಳ ಕುರಿತು ರೈತರು ದೂರು ಸಲ್ಲಿಸಿರುವುದರಿಂದ ಮೇಲ್ಕಂಡ ಗ್ರಾಮಗಳಲ್ಲಿನ ರೈತರ ಹಿತರಕ್ಷಣೆಯಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಖರೀದಿ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೋಮಶೇಖರ್ ಪತ್ರ ಬರೆದಿದ್ದಾರೆ.
ವಂಚಕ ಬ್ಯಾಂಕಿಂದ ಸಾಲ ಮರುಪಾವತಿಗೆ ನೆರವು: ಸಚಿವ STS
ಬೆಂಗಳೂರು: ಠೇವಣಿದಾರರ ಹಿತ ಕಾಪಾಡಲು ಸರ್ಕಾರ(Government of Karnataka) ಬದ್ಧವಾಗಿದ್ದು, ಸಾಲ ಮರುಪಾವತಿ ಕುರಿತು ಅಗತ್ಯ ನೆರವು ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆಶ್ವಾಸನೆ ನೀಡಿದ್ದರು.
ಫೆ.9 ರಂದು ವಿಕಾಸಸೌಧದಲ್ಲಿ ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕ್(Shri Guraghavendra Co-operative Bank) ಮತ್ತು ಶ್ರೀ ವಶಿಷ್ಟ ಸೌಹಾರ್ದ ಸಹಕಾರ ಬ್ಯಾಂಕ್‌ನ(Shri Vashishta Co-Operative bank) ಅವ್ಯವಹಾರಗಳು ಮತ್ತು ಪುನಶ್ಚೇತನ ಕುರಿತು ಪರಾಮರ್ಶಿಸಿದರು.
ಈ ವೇಳೆ ಮಾತನಾಡಿದ ಅವರು, ಎರಡು ಬ್ಯಾಂಕ್‌ಗಳಲ್ಲಿ ನಡೆದಿರುವ ವಂಚನೆ(Fraud), ಅವ್ಯವಹಾರ, ಹಣ ದುರುಪಯೋಗ ಮಾಡಿರುವವರ ವಿರುದ್ಧ ಕಾನೂನಾತ್ಮಕ ಕ್ರಮ(Legal Action) ಕೈಗೊಳ್ಳುವುದರ ಜತೆಗೆ ಹಣ ವಸೂಲಾತಿ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅವಶ್ಯ ಇರುವ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಆಸ್ತಿಗಳನ್ನು ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಳ್ಳುವುದರ ಜತೆಗೆ ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ಆದಷ್ಟು ಶೀಘ್ರ ರೀಆಡಿಟ್(Re-Audit) ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಸ್ ಟಿ ಸೋಮಶೇಖರ್ ಬಾವುಟ ಹಾರಿಸುವ ಮಂತ್ರಿ: ಶಾಸಕ ಎಚ್ ಪಿ ಮಂಜುನಾಥ್!
ಅಕ್ರಮ ಎಸಗಿರುವ ಪ್ರಮುಖ 24 ಆರೋಪಿಗಳ(Accused) ಹೆಸರು ಮತ್ತು ಫೋಟೋವನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸುವಂತಾಗಬೇಕು. ಸಾಲ ವಸೂಲಾತಿ, ಠೇವಣಿದಾರರ(Depositors) ಹಿತ ಕಾಪಾಡುವಲ್ಲಿ ಸರ್ಕಾರ, ಆರ್‌ಬಿಐ(RBI) ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಠೇವಣಿದಾರರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸುತ್ತಿರಬೇಕು. ಆಡಳಿತಾಧಿಕಾರಿಗಳು ವೆಚ್ಚಗಳನ್ನು ನಿಭಾಯಿಸಲು ಆರ್‌ಬಿಐ ಸೂಕ್ತ ರೀತಿಯಲ್ಲಿ ಸಹಕರಿಸಬೇಕು ಎಂದರು.
ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವವರಲ್ಲಿ ಶೇ.95ರಷ್ಟುಜನ ಹಿರಿಯ ನಾಗರಿಕರಾಗಿದ್ದಾರೆ. ಠೇವಣಿಯಿಂದ ಬರುವ ಬಡ್ಡಿ ಹಣದಲ್ಲಿ ಅವರು ಜೀವನ ಸಾಗಿಸುತ್ತಿದ್ದಾರೆ. ಸಾಲ ವಸೂಲಾತಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಸಭೆಯಲ್ಲಿ ಶಾಸಕರಾದ ಸೌಮ್ಯಾ ರೆಡ್ಡಿ, ಯು.ಬಿ.ವೆಂಕಟೇಶ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಇತರರು ಉಪಸ್ಥಿತರಿದ್ದರು.
