Chitradurga: ಮಾಳಪ್ಪನಹಟ್ಟಿಯಲ್ಲಿ ಸದ್ದಿಲ್ಲದೆ ರಾತ್ರೋರಾತ್ರಿ ಸ್ಥಾಪನೆಗೊಂಡ ರಾಯಣ್ಣನ ಕಂಚಿನ ಪ್ರತಿಮೆ

ಮಾಳಪ್ಪನಹಟ್ಟಿಯಲ್ಲಿ ಶಿವರಾತ್ರಿ ದಿನದಂದೇ ರಾತ್ರೋರಾತ್ರಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಅನಾವರಣಗೊಂಡಿರೋದು ಎಲ್ಲರನ್ನ ನಿಬ್ಬೆರಗಾಗುವಂತೆ ಮಾಡಿದೆ.

Statue of Sangolli Rayanna installed in chitradurga gow

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.18): ನಿನ್ನೆ ಮೊನ್ನೆವರೆಗೂ ಆ ಜಾಗದಲ್ಲಿ ಯಾವುದೇ ಪ್ರತಿಮೆ, ಪುತ್ಥಳಿ ಇರಲಿಲ್ಲ. ಆದ್ರೆ ಶಿವರಾತ್ರಿ ದಿನದಂದೇ ರಾತ್ರೋರಾತ್ರಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಅನಾವರಣಗೊಂಡಿರೋದು ಎಲ್ಲರನ್ನ ನಿಬ್ಬೆರಗಾಗುವಂತೆ ಮಾಡಿದೆ. ಅಷ್ಟಕ್ಕೂ ಅದೇ ಜಾಗದಲ್ಲಿ ರಾಯಣ್ಣ ಪ್ರತಿಮೆ ಯಾಕೆ ಸ್ಥಾಪನೆ ಆಯ್ತು? ಅಲ್ಲಿನ ಸುತ್ತಮುತ್ತಲಿನ ಜನರ ಅಭಿಪ್ರಾಯವಾದ್ರು ಏನು ಅಂತೀರಾ..! ಸುಮಾರು 8.5 ಅಡಿ ಎತ್ತರ ಹಾಗೂ 850 ಕೆಜಿ ತೂಕವಿರುವ ಕಂಚಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಆಗಿರೋ ಸ್ಥಳದಲ್ಲಿ ಜಮಾವಣೆಗೊಂಡಿರುವ ಜನರು. ಮತ್ತೊಂದೆಡೆ ರಸ್ತೆ ಮಧ್ಯದಲ್ಲೇ ಪ್ರತಿಮೆ ಸ್ಥಾಪನೆ ಆಗಿದ್ರು ನಮಗ್ಯಾಕ್ ಬೇಕು ತಮ್ಮ ಪಾಡಿಗೆ ತಾವು ವಾಹನ ಚಲಾವಣೆ ಮಾಡಿಕೊಂಡು ತೆರಳ್ತಿರೋ ವಾಹನ ಸವಾರರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಸಮೀಪದಲ್ಲಿರುವ ಮಾಳಪ್ಪನಹಟ್ಟಿ ಗ್ರಾಮದ ಬಳಿ. ಸುಮಾರು ವರ್ಷಗಳಿಂದ ಈ ಊರಿನಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ತಮ್ಮದೇ ಒಂದು ಟ್ರಸ್ಟ್ ಕಟ್ಟಿಕೊಂಡು ಪ್ರತಿಮೆ ಮಾಡಬೇಕು ಎಂದು ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅಲ್ಲದೇ ಈ ಊರಿನಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಲು ಯಾವುದೇ ಸಮುದಾಯದ ಜನರ  ವಿರೋಧವಿಲ್ಲ. ಆ ಕಾರಣಕ್ಕಾಗಿಯೇ ಇಡೀ ಊರಿನ ರಾಯಣ್ಣ ಅಭಿಮಾನಿಗಳು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪ್ಲಾನ್ ಮಾಡಿಕೊಂಡು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಮಾಡಿದ್ದಾರೆ.

ಇದಕ್ಕಾಗಿ ಯಾವುದೇ ಅಧಿಕಾರಿಗಳ ಪರ್ಮಿಷನ್ ಪಡೆದಿಲ್ಲ. ಇದು ನಮ್ಮ ಗ್ರಾಮದ ಬಹು ದಿನಗಳ ಹೋರಾಟದ ಫಲವಾಗಿ ಇಂದು ನಮ್ಮ ನಾಯಕರ ಪ್ರತಿಮೆ ಅನಾವರಣ ಆಗಿದೆ ಅಂತಾರೆ ಸ್ಥಳೀಯರು. ಇನ್ನೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ರಾಯಣ್ಣ ಪ್ರತಿಮೆ ಅನಾವರಣ ಮಾಡಿದ್ದೀರಲ್ಲ ಎಂದು ಪ್ರಶ್ನೆ ಮಾಡಿದ್ರೆ, ಇಲ್ಲಿ ಇರುವ ಯಾವುದೇ ಸಮುದಾಯದ ಜನರಿಗೂ ಈ ಪ್ರತಿಮೆ ಸ್ಥಾಪನೆ ಮಾಡಿರೋದಕ್ಕೆ ವಿರೋಧವಿಲ್ಲ. ಅಲ್ಲದೇ ಕರ್ನಾಟಕದಲ್ಲಿ ಇರೋ ನಾವು ಯಾವುದೇ ದೇಶದ್ರೋಹಿ‌ ಕೆಲಸ ಮಾಡುವ ವ್ಯಕ್ತಿಯ ಪ್ರತಿಮೆ ನಿಲ್ಲಿಸಿಲ್ಲ. ಮೇಲಾಗಿ ಈ ಮಣ್ಣಿಗೆ ಸ್ವಾತಂತ್ರ್ಯ ದೊರಕಲು ಹೋರಾಟ ಮಾಡಿರುವ ಧೀರ, ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಇದಾಗಿದೆ.

 

ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣ, ನೇತಾಜಿ ಪ್ರತಿಮೆ ನಿರ್ಮಾಣ: ಸಿಎಂ ಬೊಮ್ಮಾಯಿ ಆದೇಶ

ಸರ್ಕಾರ ಹಾಗೂ ಅಧಿಕಾರಿಗಳು ಇದ್ರಲ್ಲಿ ಯಾವುದೇ ಬೇರೆ ವಿಚಾರ ಹುಡುಕುವ ಅಗತ್ಯವಿಲ್ಲ. ಸುತ್ತುಮುತ್ತ ಇರುವ ಎಲ್ಲಾ ಗ್ರಾಮಸ್ಥರು ಒಂದಾಗಿ ಸೇರಿ ಸುಮಾರು 9 ಲಕ್ಷ ವೆಚ್ಚರಲ್ಲಿ ನಿರ್ಮಾಣ ಮಾಡಿಸಿರುವ ಪ್ರತಿಮೆ ಇದು‌. ಮುಂದೆ ಅಧಿಕಾರಿಗಳು ಇದನ್ನ ಪ್ರಶ್ನೆ ಮಾಡಿ ತೊಂದರೆ ಕೊಟ್ಟಿದ್ದೇ ಆದ್ರೆ ನಾವು ಯಾವುದೇ ಹೋರಾಟಕ್ಕೂ ಸದಾ ಸಿದ್ದ ಎಂದರು.

ಇಂದು ಯಲಬುರ್ಗಾದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ

 ಒಟ್ನಲ್ಲಿ ಮಾಳಪ್ಪನಹಟ್ಟಿ ಗ್ರಾಮದ ಬಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಆಗಿರೋದು ಸ್ವಾಗತವೇ ಸರಿ. ಆದ್ರೆ ಮುಂದೊಂದು ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂಟ್ರಿ ಆದ್ರೆ ಏನೆಲ್ಲಾ ಆಗಬಹುದು ಎಂಬುದೇ ಪ್ರಶ್ನೆಯಾಗಿದೆ.

Latest Videos
Follow Us:
Download App:
  • android
  • ios