Asianet Suvarna News Asianet Suvarna News

ಶಿವಮೊಗ್ಗ: ರೈಲಿಗೆ ಸಿಲುಕಿ ರೈಲ್ವೆ ಸ್ಟೇಷನ್ ಮಾಸ್ಟರ್ ಸಾವು

ರೈಲ್ವೆ ಹಳಿಗೆ ತಲೆಕೊಟ್ಟು ಮೃತಪಟ್ಟ ರೀತಿಯಲ್ಲಿ ರೈಲ್ವೆ ಸ್ಟೇಷನ್​ ಮಾಸ್ಟರ್ ಅರುಣ್‌ ಕುಮಾರ್‌ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ರೈಲಿಗೆ ಸಿಲುಕಿ ಅರುಣ್‌ ಕುಮಾರ್‌ ಸಾವನ್ನಪ್ಪಿದ್ದಾರೆ. 

Station Master Deadbody Found in Shivamogga Railway Station grg
Author
First Published Nov 23, 2023, 9:39 AM IST

ಶಿವಮೊಗ್ಗ(ನ.23):  ರೈಲಿಗೆ ಸಿಲುಕಿ ರೈಲ್ವೆ ಸ್ಟೇಷನ್ ಮಾಸ್ಟರ್ ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ಇಂದು(ಗುರುವಾರ) ನಡೆದಿದೆ. ‌ಆನಂದಪುರ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್‌ ಬಿಹಾರ ಮೂಲಕ ಅರುಣ್‌ ಕುಮಾರ್‌ ಎಂಬುವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ. 

ರೈಲ್ವೆ ಹಳಿಗೆ ತಲೆಕೊಟ್ಟು ಮೃತಪಟ್ಟ ರೀತಿಯಲ್ಲಿ ರೈಲ್ವೆ ಸ್ಟೇಷನ್​ ಮಾಸ್ಟರ್ ಅರುಣ್‌ ಕುಮಾರ್‌ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ರೈಲಿಗೆ ಸಿಲುಕಿ ಅರುಣ್‌ ಕುಮಾರ್‌ ಸಾವನ್ನಪ್ಪಿದ್ದಾರೆ. 

ಶಿವಮೊಗ್ಗ: ಹುಣಸೇಮರ ಕಸದ ವಿಚಾರಕ್ಕೆ ಹತ್ಯೆ ಪ್ರಕರಣ; ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಬೆಂಗಳೂರಿನಿಂದ ನಿನ್ನೆ ಬೆಳಗ್ಗೆ ರೈಲಿನಲ್ಲಿ ಆಗಮಿಸಿದ್ದ ಅರುಣ್ ಕುಮಾರ್ ಕುಂಸಿ ನಿಲ್ದಾಣದಲ್ಲಿ ಇಳಿದಿದ್ದರು. ತಾವು ಬಂದಿದ್ದ ರೈಲಿಗೆ ಸಿಲುಕಿ ಅವರು ಸಾವನ್ನಪ್ಪಿರುವ ಘಟನೆ ನಿಗೂಢವೆನಿಸಿದೆ. ಈ ಸಂಬಂಧ ಶಿವಮೊಗ್ಗ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

Follow Us:
Download App:
  • android
  • ios