Asianet Suvarna News Asianet Suvarna News

ಖಾಸಗಿ ಸಾರಿಗೆ ಸಂಸ್ಥೆಗಳ ಮುಷ್ಕರ ಬೆನ್ನಲ್ಲೇ ನಾಳೆ ಅಂಗನವಾಡಿ ನೌಕರರ ರಾಜ್ಯವ್ಯಾಪಿ ಚಳವಳಿ!

ಅಂಗನವಾಡಿ ಕೇಂದ್ರಗಳಿರುವಲ್ಲೇ ವಿವಿಧ ಇಲಾಖೆಯು ಪರ್ಯಾಯವಾಗಿ ಶಿಶುಪಾಲನಾ ಕೇಂದ್ರಗಳು, ಶಾಲಾ ಪೂರ್ವ ಶಿಕ್ಷಣ ತರಗತಿಗಳ ಆರಂಭಿಸುವುದನ್ನು ವಿರೋಧಿಸಿ ರಾಜ್ಯ ವ್ಯಾಪಿ ಕರೆಯ ಮೇರೆಗೆ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ನೌಕರರು ಸೆ.15ರಂದು ನಗರ, ಜಿಲ್ಲೆಯಲ್ಲಿ ಒಂದು ದಿನದ ಚಳವಳಿ ಹಮ್ಮಿಕೊಂಡಿದ್ದಾರೆ.

Statewide movement of Anganwadi employees tomorrow at davanagere rav
Author
First Published Sep 14, 2023, 12:01 PM IST

ದಾವಣಗೆರೆ (ಸೆ.14) :  ಅಂಗನವಾಡಿ ಕೇಂದ್ರಗಳಿರುವಲ್ಲೇ ವಿವಿಧ ಇಲಾಖೆಯು ಪರ್ಯಾಯವಾಗಿ ಶಿಶುಪಾಲನಾ ಕೇಂದ್ರಗಳು, ಶಾಲಾ ಪೂರ್ವ ಶಿಕ್ಷಣ ತರಗತಿಗಳ ಆರಂಭಿಸುವುದನ್ನು ವಿರೋಧಿಸಿ ರಾಜ್ಯ ವ್ಯಾಪಿ ಕರೆಯ ಮೇರೆಗೆ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ನೌಕರರು ಸೆ.15ರಂದು ನಗರ, ಜಿಲ್ಲೆಯಲ್ಲಿ ಒಂದು ದಿನದ ಚಳವಳಿ ಹಮ್ಮಿಕೊಂಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋ಼ಷ್ಠಿಯಲ್ಲಿ ಈ ವಿಷಯ ತಿಳಿಸಿದ ಫೆಡರೇಷನ್ ಜಿಲ್ಲಾಧ್ಯಕ್ಷೆ ಎಂ.ಬಿ.ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಎಸ್‌.ಎಸ್‌.ಮಲ್ಲಮ್ಮ, ತಮ್ಮ ಸಂಘಟನೆಯ ಕೇಂದ್ರ ಸಮಿತಿ ಕರೆಯ ಮೇರೆಗೆ ರಾಜ್ಯವ್ಯಾಪಿ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ಅಂಗನವಾಡಿಗಳ ಕಾರ್ಯಕರ್ತೆಯರು, ಸಹಾಯಕಿಯರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸೂಚನೆ; ಅಂಗನವಾಡಿ ಕಾರ್ಯಕರ್ತರು ತೀವ್ರ ವಿರೋಧ

ಕಳೆದ 48 ವರ್ಷದಿಂದ 6 ವರ್ಷದ ಮಕ್ಕಳಿಗಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ(ಐಸಿಡಿಎಸ್‌) ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ, ಲಾಲನೆ, ಪಾಲನೆ, ಪೌಷ್ಟಿಕ ಆಹಾರ, ಶಾಲಾಪೂರ್ವ ಶಿಕ್ಷಣ ಇತ್ಯಾದಿ ಸೇವೆ ನೀಡುತ್ತ ಬಂದಿದ್ದೇವೆ. ಆದರೆ, ಈಗ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುವಲ್ಲೇ ಶಿಶುಪಾಲನಾ ಕೇಂದ್ರಗಳು, ಶಾಲಾ ಪೂರ್ವ ತರಗತಿಗಳ ಆರಂಭಿಸಲು ಮುಂದಾಗಿರುವುದು ಅಂಗನವಾಡಿ ಕೇಂದ್ರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಆಶ್ರಯದಲ್ಲಿ ಇಂತಹ ಶಿಶುಪಾಲನಾ ಕೇಂದ್ರ ಆರಂಭಿಸಲಾಗುತ್ತಿದೆ. ಸಮಗ್ರ ಶಿಕ್ಷಣ ಕರ್ನಾಟಕವು ಸರ್ಕಾರಿ ಶಾಲೆಗಳಲ್ಲಿ 4ರಿಂದ 5 ವರ್ಷದ ಮಕ್ಕಳಿಗಾಗಿ ಶಾಲಾ ಪೂರ್ವ ತರಗತಿ ಆರಂಭಿಸಲು ಆದೇಶಿಸಿದೆ. ಎಲ್‌ಕೆಜಿ ತರಗತಿಗಳ ಆರಂಭಿಸಲು ಸೂಚಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ನರೇಗಾದಡಿ ಗ್ರಾಪಂ ವ್ಯಾಪ್ತಿಗಳಲ್ಲೂ ಶಿಶುಪಾಲನಾ ಕೇಂದ್ರ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.

ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ ಮತ್ತು ಯುಕೆಜಿ ಕಡ್ಡಾಯವಾಗಿ ಆರಂಭಿಸಬೇಕು. ಅಂಗನವಾಡಿಗೆ ಬರುವ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ನೀಡಬೇಕು. ಚುನಾವಣೆ ಪೂರ್ವದಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿ ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಸಂಘಟನೆ ಮುಖಂಡರೊಂದಿಗೆ ಸಮಾಲೋಚಿಸಿ, ಗೌರವಧನವನ್ನು ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ರು. ಹೆಚ್ಚಿಸುವ, ನಿವೃತ್ತಿ ವೇಳೆ 3 ಲಕ್ಷ ರು. ಇಡಿಗಂಟು ನೀಡುವ ಭರವಸೆ ನೀಡಿದ್ದು, ಆ ಆರನೇ ಗ್ಯಾರಂಟಿ ಭರವಸೆಯನ್ನು ಕಾರ್ಯ ರೂಪಕ್ಕೆ ಸರ್ಕಾರ ತರಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿ ವಿಧಾನಸೌಧದಲ್ಲಿ ಸೌಂಡ್‌ ಮಾಡಿತ್ತು!: ಅಂಗನವಾಡಿ ಕಾರ್ಯಕರ್ತೆಯರು ಈಗ ಫುಲ್‌ ಖುಷ್‌..!

ಸುಪ್ರೀಂ ಕೋರ್ಟ್‌ ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂಬ ತೀರ್ಪನ್ನು ಎಲ್ಲಾ ನಿವೃತ್ತರಿಗೂ ಅನ್ವಯವಾಗುವಂತೆ ಜಾರಿಗೊಳಿಸಲು ಆಡಳಿತಾತ್ಮಕವಾಗಿ ಶ್ರಮವಹಿಸಬೇಕು ಸೇರಿದಂತೆ ಅಂಗನವಾಡಿ ಕೇಂದ್ರಗಳ ಉಳಿಸಿ, ಅಂಗನವಾಡಿ ವ್ಯವಸ್ಥೆ ಬಲಗೊಳಿಸಿ ಘೋಷಣೆಯೊಂದಿಗೆ ಹೋರಾಟ ನಡೆಯಲಿದೆ ಎಂದು ಎಂ.ಬಿ.ಶಾರದಮ್ಮ, ಎಸ್.ಎಸ್‌.ಮಲ್ಲಮ್ಮ ತಿಳಿಸಿದರು.

ಸಂಘಟನೆ ಮುಖಂಡರಾದ ಆವರಗೆರೆ ವಾಸು, ವಿಶಾಲಾಕ್ಷಿ, ಕೆ.ಸಿ.ನಿರ್ಮಲ, ಡಿ.ಗೀತಾ, ಎ.ಸರ್ವಮ್ಮ, ಜಿ.ರೇಣುಕಾ, ಕೆ.ಸುಧಾ ಇತರರಿದ್ದರು.

Follow Us:
Download App:
  • android
  • ios