Harapanahalli: ಭಾರಿ ಮಳೆ, ಗಾಳಿಗೆ ಕುಸಿದು ಬಿದ್ದ ಟೋಲ್ ಗೇಟ್: ಹೆದ್ದಾರಿ ಬಂದ್
* ಹರಪನಹಳ್ಳಿ, ಹೂವಿನ ಹಡಗಲಿ -ಮುಂಡರಗಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ
* ಯಾವುದೇ ಅಪಾಯ ಸಂಭವಿಸದೆ ಪಾರಾದ ಟೋಲ್ ಸಿಬ್ಬಂದಿ
* ಅವೈಜ್ಞಾನಿಕ ಟೋಲ್ ನಿರ್ಮಾಣವೇ ಇಂತಹ ಘಟನೆಗೆ ಕಾರಣ
ಹರಪನಹಳ್ಳಿ(ಏ.06): ಮಳೆ(Rain) ಹಾಗೂ ಭಾರಿ ಗಾಳಿ ಬೀಸಿದ್ದರಿಂದ ಪಟ್ಟಣ ಹೊರವಲಯದಲ್ಲಿರುವ ಟೋಲ್ ಗೇಟ್ ಚಾವಣಿ ಕುಸಿದು ಬಿದ್ದಿದ್ದರಿಂದ ರಾಜ್ಯ ಹೆದ್ದಾರಿ(State Highway) ಬಂದ್ ಆದ ಘಟನೆ ಮಂಗಳವಾರ ಸಂಜೆ ಜರುಗಿದೆ. ಹರಪನಹಳ್ಳಿ, ಹೂವಿನ ಹಡಗಲಿ -ಮುಂಡರಗಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿರುವ ಟೋಲ್(Toll Gate) ಸಂಗ್ರಹಣೆಯ ಚಾವಣಿ ಭಾರೀ ಗಾಳಿಗೆ ಇದ್ದಕ್ಕಿದ್ದ ಹಾಗೆ ಭಾರಿ ಶಬ್ದದೊಂದಿಗೆ ರಸ್ತೆಗೆ ಕುಸಿದಿದೆ.
ಈ ಸಂದರ್ಭದಲ್ಲಿ ಟೋಲ್ ಸಿಬ್ಬಂದಿ ಕೌಂಟರ್‌ನಲ್ಲಿ ಇದ್ದು, ಯಾವುದೇ ಅಪಾಯ ಸಂಭವಿಸದೆ ಪಾರಾಗಿದ್ದಾರೆ. ಅಲ್ಲಿಯೇ ಇದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ, ಜೆಸ್ಕಾಂ(GESCOM) ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ರಸ್ತೆ ಬಂದ್ ಆಗಿದ್ದರಿಂದ ಹಡಗಲಿ ಕಡೆಯಿಂದ ಬರುವ ಹಾಗೂ ಹರಪನಹಳ್ಳಿ ಕಡೆಯಿಂದ ಗದಗ, ಹಡಗಲಿ ಕಡೆ ಹೋಗುವ ವಾಹನ ಸವಾರರು ಪರದಾಡುವಂತಾಗಿತ್ತು.
ಚಿಕ್ಕಮಗಳೂರಲ್ಲಿ ಮಳೆ: ವರುಣನ ಆರ್ಭಟಕ್ಕೆ ಹಲವೆಡೆ ಭಾರೀ ಅನಾಹುತ
ಸ್ಥಳಕ್ಕೆ ಪಿಎಸ್‌ಐ ಪ್ರಕಾಶ ಮತ್ತು ಸಿಬ್ಬಂದಿ ಆಗಮಿಸಿ ಪಕ್ಕದ ಜಮೀನಿನಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಅವೈಜ್ಞಾನಿಕ ಟೋಲ್ ನಿರ್ಮಾಣವೇ ಇಂತಹ ಘಟನೆಗೆ ಕಾರಣ ಎಂದು ವಾಹನ ಸವಾರರು ದೂರಿದರು.
ಎಂಟು ಜಿಲ್ಲೆಗಳಲ್ಲಿ ಮಳೆ, ಮೂವರು ಬಲಿ
ಬೆಂಗಳೂರು: ಬೆಳಗಾವಿ(Belagavi) ಸೇರಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದೀಚೆಗೆ ಕೆಲಕಾಲ ಉತ್ತಮ ಮಳೆಯಾಗಿದ್ದು, ಮಳೆ ಸಂಬಂಧಿ ಅನಾಹುತಕ್ಕೆ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಬಲಿಯಾಗಿದ್ದಾರೆ(Death).
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಜಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಬಸವರಾಜ ನಾಗಪ್ಪ ಕಾರನ್ನವರ (27), ವಿಜಯಪುರ ನಗರದಲ್ಲಿ ಆಟೋ ಮೇಲೆ ಮರಬಿದ್ದು ಯಲ್ಲಮ್ಮಾ ಕೊಂಡಗೂಳಿ (45) ಹಾಗೂ ಹಾವೇರಿ ತಾಲೂಕಿನ ಗುತ್ತಲದಲ್ಲಿ ಮನೆ ಚಾವಣಿ ಕುಸಿದು ಬಿದ್ದು ಮುಮ್ತಾಜ್ ಸಿರಾಜ್ ಬಾಲೆಕಾಯಿ (42) ಎಂಬುವವರು ಮೃತಪಟ್ಟಿದ್ದಾರೆ.
Uttara Kannada: ಯಲ್ಲಾಪುರದಲ್ಲಿ ಭಾರೀ ಗಾಳಿ-ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಕಳೆದ ಕೆಲವು ದಿನಗಳಿಂದ ಬಿಸಿಲಬೇಗೆಯಿಂದ ಕಂಗೆಟ್ಟಿದ್ದ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ವಿಜಯನಗರ, ಶಿವಮೊಗ್ಗ, ಕಲಬುರಗಿಯಲ್ಲಿ(Kalaburagi) ಸುಮಾರು ಅರ್ಧ, ಒಂದು ಗಂಟೆಗಳ ಕಾಲ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದೆ. ದಿಢೀರ್ ಮಳೆಯಿಂದಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಲಬುರಗಿ, ಬೆಳಗಾವಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಳೆ-ಗಾಳಿಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಭಾರೀ ಹಾನಿ:
ಕಲಬುರಗಿಯ ಅಫಜಲ್ಪುರ, ಚಿಂಚೋಳಿ, ಶಹಾಬಾದ್, ಜೇವರ್ಗಿಯಲ್ಲಿ ಸೋಮವಾರ ರಾತ್ರಿ ಕೆಲಕಾಲ ಸುರಿದ ಬಿರುಗಾಳಿ ಸಹಿತ ಮಳೆಯಾಗಿದೆ. ಅಫಜಲ್ಪುರ ತಾಲೂಕಿನ ಕೆಕ್ಕರಸಾವಳಗಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಧವಸ ಧಾನ್ಯಗಳು, ಬಟ್ಟೆ, ಮನೆಯ ಸಾಮಗ್ರಿಗಳು ನಾಶವಾಗಿವೆ. ಮನೆಯೊಂದರ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಭಾರೀ ಗಾಳಿಗೆ ನಾಲ್ಕಕ್ಕೂ ಹೆಚ್ಚಿನ ಮನೆಗಳ ತಗಡಿನ ಚಾವಣಿ ಹಾರಿಹೋಗಿದ್ದು, ಈ ವೇಳೆ 12 ವರ್ಷದ ಬಾಲಕ ವಿಠ್ಠಲ್ ಗಾಯಗೊಂಡಿದ್ದಾನೆ. ಹಾವೇರಿ ಜಿಲ್ಲೆಯ ಹಲವೆಡೆ ಮಳೆ ಗಾಳಿಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಗುತ್ತಲ ಹಾವೇರಿ ರಸ್ತೆಯಲ್ಲಿ ಮರ ಬಿದ್ದು ಮೂರು ವಾಹನ ಜಖಂಗೊಂಡಿವೆæ. ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ತಾಲೂಕಿನ ಕೆಲವೆಡೆಯೂ ಭಾನುವಾರ ಸಾಧಾರಣ ಮಳೆಯಾದ ವರದಿಯಾಗಿದೆ.