ಬೀದರ್‌ (ಜ.27):  ಹೆಣ್ಣು ಮಗುವಿನ ಬಗ್ಗೆ ಕಾಳಜಿ, ಶೈಕ್ಷಣಿಕ ಪ್ರಗತಿಗಾಗಿನ ಚಿಂತನೆ ‘ಬೇಟಿ ಪಡಾವೋ, ಬೇಟಿ ಬಚಾವೋ’ ಎಂಬೆಲ್ಲ ಘೋಷಣೆಗಳನ್ನೆಲ್ಲ ಕೇಳಿದ್ದೇವೆ. ಇದಕ್ಕೆಲ್ಲ ಮೀರಿ ವಿಶೇಷ ಎಂಬಂತೆ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಬೀದರ್‌ನಲ್ಲಿ ಹೆಣ್ಣು ಮಗುವಿನ ವೃತ್ತವನ್ನೇ ನಿರ್ಮಿಸಿ ರಸ್ತೆಯಲ್ಲಿ ಸಾಗುವವರಿಗೆಲ್ಲ ಹೆಣ್ಣಿನ ಬಗ್ಗೆ ಗೌರವ ಮೂಡುವಂತೆ ಮಾಡಲಾಗಿದೆ.

ಒಟ್ಟಾರೆಯಾಗಿ ಹೆಣ್ಣು ಮಗುವಿನ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ, ಕಾಳಜಿ ಹೊಂದಲು ಪ್ರೇರೇಪಣೆಯಾಗುವ ಆಶಯದೊಂದಿಗೆ ಗಡಿ ಜಿಲ್ಲೆ ಬೀದರ್‌ ನಗರದಲ್ಲಿ ಜಿಲ್ಲಾಡಳಿತ ಸ್ಥಾಪಿಸಿರುವ ಹೆಣ್ಣು ಮಗುವಿನ ವೃತ್ತಕ್ಕೆ(ಬೇಟಿ ಸರ್ಕಲ್‌) ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್‌ ಮಂಗಳವಾರ ಚಾಲನೆ ನೀಡಿದರು. ಸಂಸದ ಭಗವಂತ ಖೂಬಾ, ಜಿಲ್ಲಾಧಿಕಾರಿ ರಾಮಚಂದ್ರನ್‌ ಇದ್ದರು.

ಗರ್ಭಿಣಿಗೆ ಹಿಂಗಾದರೆ ಹುಟ್ಟೋ ಮಗು ಹೆಣ್ಣೋ, ಗಂಡೋ ಎಂಬುದನ್ನು ಸೂಚಿಸುತ್ತಂತೆ! ..

2017-18ನೇ ಸಾಲಿನಲ್ಲಿ ಬೀದರ್‌ ನಗರಸಭೆ ಅಧ್ಯಕ್ಷರಾಗಿದ್ದ ಶಾಲಿನಿ ಚಿಂತಾಮಣಿ ಅವರ ನೇತೃತ್ವದಲ್ಲಿ ನಗರಸಭೆಯ ಆಡಳಿತ ಕೈಗೊಂಡ ನಿರ್ಧಾರದಂತೆ ಇಲ್ಲಿನ ಬೀದರ್‌ ಬಸ್‌ ಡಿಪೋ ಹಿಂಭಾಗದಲ್ಲಿನ ವೃತ್ತಕ್ಕೆ ಹೆಣ್ಣು ಮಗುವಿನ ವೃತ್ತ(ಬೇಟಿ ಸರ್ಕಲ್‌) ಎಂದು ನಾಮಕರಣ ಮಾಡಲಾಗಿತ್ತು. ಇದೀಗ .10 ಲಕ್ಷ ರು.ಗಳ ವೆಚ್ಚದಲ್ಲಿ ಹುಬ್ಬಳ್ಳಿಯ ಕಲಾವಿದನ ಕೈಚಳಕದಲ್ಲಿ ಸಿರಾಮಿಕ್‌ನಲ್ಲಿ ನಿರ್ಮಿತವಾದ ತಾಯಿ ಹಸುಗೂಸಿನ ಮೂರ್ತಿಯನ್ನು ಮಂಗಳವಾರ ಉದ್ಘಾಟಿಸಲಾಗಿದೆ.