ಉಡುಪಿ(ಫೆ.01): ಸುಭದ್ರ ಸರ್ಕಾರ ಮಾತ್ರ ನಮ್ಮ ಗುರಿ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಎಲ್ಲ ಸಮಸ್ಯೆಗಳೂ ಶೀಘ್ರ ಪರಿಹಾರ ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೀನುಗಾರಿಕೆ, ಬಂದರು, ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದ್ದು, ಸಿಎಂ ಯಡಿಯೂರಪ್ಪ ಕೇಂದ್ರ ನಾಯಕರ ಜೊತೆ ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ನೋಡಬೇಕು. ಅವರ ತೀರ್ಮಾನವನ್ನು ನಾವೆಲ್ಲಾ ಒಟ್ಟಾಗಿ ಒಂದಾಗಿ ಸ್ವಾಗತ ಮಾಡುತ್ತೇವೆ. ಸುಭದ್ರ ಸರ್ಕಾರವೊಂದೇ ನಮ್ಮ ಮುಂದಿನ ಗುರಿ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್‌: ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ ಮೋದಿಗೆ ಅಭಿನಂದನೆ, ಸವದಿ

ಸೋತವರಿಗೆ ಸ್ಥಾನಮಾನ ಕೊಡುವ ಬಗ್ಗೆ ಶ್ರೀನಿವಾಸ ಪೂಜಾರಿ ಏನು ಹೇಳೋಕೆ ಸಾಧ್ಯ? ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್, ಸಿಎಂ ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ. ಎಲ್ಲಾ ಸಮಸ್ಯೆ ಪರಿಹಾರ ಆಗುವ ವಿಶ್ವಾಸ ಇದೆ. ನಾನು ಮಂತ್ರಿಯಾಗಿ ಶೃದ್ದೆಯಿಂದ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

ಒಂದಿಷ್ಟು ಖಾತೆ ಪಾರ್ಟಿಗೆ ಬರುವವರಿಗೆ ಅಂತ ಸಿಎಂ ಮೀಸಲಿಟ್ಟಿದ್ದಾರೆ. ಈಗ ಅದರ ಪ್ರಕ್ರಿಯೆ ಗಳು ಆರಂಭವಾಗಿದೆ. ಸರ್ಕಾರ ಸಮರ್ಥವಾಗಿ‌ ಕೆಲಸ ಮಾಡ್ತಾ ಇದೆ. ಸಿಎಂ ಜವಾಬ್ದಾರಿಯುತವಾಗಿ ಎಲ್ಲವನ್ನೂ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ ಎಂದಿದ್ದಾರೆ.