ಹಾವೇರಿ(ಜು.15): ರಾಜ್ಯ ಸರಕಾರದ ಸಚಿವರ ಮಧ್ಯ ಹೊಂದಾಣಿಕೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಹೇಳಿಕೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ ಕೆ ಹೊಂದಾಣಿಕೆ ಇದೆಯಾ..? ಎಂದು ಪ್ರಶ್ನಿಸಿರುವ ಅವರು, 100% ಅವರಿಬ್ಬರ ನಡುವೆ ಹೊಂದಾಣಿಕೆ ಇಲ್ಲಾ. ಆದರೆ ನಮ್ಮಲ್ಲಿ ಹೊಂದಾಣಿಕೆ ಇದೆ. ಎಲ್ಲರೂ ರಾಜ್ಯ ಪ್ರವಾಸ ಮಾಡ್ತಿದ್ದೇವೆ. ನಮ್ಮೆಲ್ಲ ಸಚಿವರ ನಡುವೆ ಹೊಂದಾಣಿಕೆ ಇದೆ ಎಂದಿದ್ದಾರೆ.

ವಿಕ್ಟೋರಿಯಾಗೆ ನೋ ಎಂಟ್ರಿ: ಹೊರಗಡೆಯೇ ವೈದ್ಯರ ಜೊತೆ ಡಿಕೆಶಿ ಸಮಾಲೋಚನೆ

ಕಾಂಗ್ರೆಸ್ ನಿಂದ ಲೆಕ್ಕ ಕೊಡಿ ಆಂದೋಲನ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಲೆಕ್ಕ ತಗೊಳಿ ಅಂತಾ ಶುರುಮಾಡಿದ್ದೇವೆ. ಸಿದ್ದರಾಮಯ್ಯ ಅವರೆ ವಿರೋಧ ಪಕ್ಷದ ನಾಯಕರಾಗಿದೀರಿ‌. ಎಲ್ಲರೂ ಲೆಕ್ಕ ಕೊಡಲು ಸಿದ್ಧರಿದ್ದಾರೆ ನೀವು ಲೆಕ್ಕ ನೋಡಿ. ಸುಮ್ಮನೆ ಪಬ್ಲಿಸಿಟಿಗೆ ಲೆಕ್ಕ ಕೊಡಿ ಎಂದು ಕೇಳುವುದಿಲ್ಲಾ. ಲೆಕ್ಕ ನೋಡುವುದಕ್ಕೆ ಮನಸ್ಸಿಲ್ವಾ ಎಂದು ಟಾಂಗ್ ಕೊಟ್ಟಿದ್ದಾರೆ.

ನೂತನ ಎಂಎಲ್ ಸಿ ಗಳಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಮಾತನಾಡಿ, ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ಪರಮಾಧಿಕಾರ. ಆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಅವರು ಸಂದರ್ಭ ಬಂದಾಗ ಬಳಸಿಕೊಳ್ಳುತ್ತಾರೆ. ನಾವು ರಾಜೀನಾಮೆ ಕೊಡುವ ಪ್ರಮೆಯ ಬರುವುದಿಲ್ಲಾ. ಮುಖ್ಯಮಂತ್ರಿಗಳು ಎಲ್ಲವನ್ನು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ.