ಮೈಸೂರು (ಸೆ.20): ಮೈಸೂರಿನಲ್ಲಿ ವೀರಾವೇಶದಿಂದ ಮಾತನಾಡುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೆ.21ರಿಂದ ಆರಂಭವಾಗಲಿರುವ ಅಧಿವೇಶನದಲ್ಲೂ ಅದೇ ವೀರಾವೇಶ ತೋರಿಸಲಿ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಸವಾಲು ಹಾಕಿದ್ದಾರೆ. 

ಸರ್ಕಾರ ಸತ್ತಿದೆ, ಸಚಿವರು ಕೆಲಸ ಮಾಡುತ್ತಿಲ್ಲ, ಇಬ್ಬಿಬ್ಬರು ಸಿಎಂ ಇದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಸವಾಲು ಹಾಕಿದರು.

ನನ್ನ ಸ್ಥಾನ ಡಿ.ಕೆ.ಶಿವಕುಮಾರ್ ತಪ್ಪಿಸಲ್ಲ : ಯೋಗೇಶ್ವರ್ ...

ದ ಅವರು, ಅವರು ಸದನದಲ್ಲಿ ಮಾತಾಡಲಿ, ಅಷ್ಟೇ ವೀರಾವೇಶದಿಂದ ಉತ್ತರ ನೀಡತಕ್ಕಂತಹ ಶಕ್ತಿ ದೇವರು ನಮಗೂ ಕೂಡ ಕೊಟ್ಟಿದ್ದಾನೆ ಎಂದರು. ವಿರೋಧ ಪಕ್ಷದವರ ಕೆಲಸ ಏನಿದೆ? ವಿರೋಧ ಪಕ್ಷದವರು ವಿರೋಧ ಮಾಡುವುದಕ್ಕೋಸ್ಕರ ಸಿದ್ಧತೆ ಮಾಡಿಕೊಳ್ಳುತ್ತಾರೆ. ನಾವು ಆಡಳಿತ ಪಕ್ಷದವರು ಆಡಳಿತ ಮಾಡುವುದಕ್ಕೋಸ್ಕರ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.