ಬಾಗಲಕೋಟೆ(ಜ.04): ಎಸ್‌ಟಿಗೆ 7.5 ಮೀಸಲಾತಿ ಹೆಚ್ಚಿಸುವ ವಿಚಾರದಲ್ಲಿ ಸರ್ಕಾರಕ್ಕೆ ಕಾಲಮಿತಿ ಇಲ್ಲವಾದರೂ ಶೀಘ್ರವೇ ಮೀಸಲಾತಿಯನ್ನು ಹೆಚ್ಚಳ ಮಾಡುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಭಾನುವಾರ ಬಾಗಲಕೋಟೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನನ್ನ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚನೆಯಾಗಿದ್ದು, ಸಭೆಯಲ್ಲಿ ಮೀಸಲಾತಿ ಕುರಿತು ಚರ್ಚಿಸಿದ್ದೇವೆ.

ಚಿತಾಗಾರದ ಚಾವಣಿ ಕುಸಿದು 21 ಸಾವು!

ಸದ್ಯ 100 ಜಾತಿ ಎಸ್‌ಸಿ, 50 ಜಾತಿ ಎಸ್‌ಟಿ ಮೀಸಲಾತಿಯಲ್ಲಿವೆ. ಇವೆರಡು ಸೇರಿ ಮೀಸಲಾತಿ ಶೇ.15ರಿಂದ 17ರಷ್ಟುಆಗಬೇಕು. ನಾಗಮೋಹನ ದಾಸ್‌ ವರದಿಯಲ್ಲಿ ಎಸ್‌ಟಿಗೆ ಶೇ.3 ರಿಂದ 7.5 ರಷ್ಟುಹೆಚ್ಚು ಆಗಬೇಕು ಎಂಬುದಿದೆ. ವರದಿಯ ಸಾಧಕ ಬಾಧಕ ಬಗ್ಗೆ ಚರ್ಚೆ ಆಗುತ್ತದೆ ಎಂದು ಹೇಳಿದರು.

ಬಿಜೆಪಿಗೆ ರಮೇಶ್‌ ಜಾರಕಿಹೊಳಿ ಬಂದ ನಂತರ ಶ್ರೀರಾಮುಲು ಸೈಡ್‌ಲೈನ್‌ ಆಗಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಕೆಳಮಟ್ಟದಿಂದ ರಾಜಕಾರಣ ಮಾಡಿಕೊಂಡು ಈ ಸ್ಥಾನಕ್ಕೆ ಬಂದಿದ್ದೇನೆ. ಜನಮತದಿಂದ ಬಂದ ಒಬ್ಬ ನಾಯಕನಾಗಿ ಬೆಳೆದಿರುವ ನನ್ನ ಜನಪ್ರಿಯತೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಜಲಕಂಠೇಶ್ವರಸ್ವಾಮಿ ದೇಗುಲ ಬಳಿ ವಿಗ್ರಹ-ಮದ್ದುಗುಂಡುಗಳು ಪತ್ತೆ

ಇದೇ ವೇಳೆ, ಮತ್ತೆ ಸಿಎಂ ಆಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯ ಅವರು ಕನಸು ಮನಸಿನಲ್ಲೂ ಸಿಎಂ ಆಗಲು ಸಾಧ್ಯವಿಲ್ಲ. ಜೊತೆಗೆ ವಿರೋಧ ಪಕ್ಷದ ನಾಯಕನಾಗಿರುವ ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿ ಸ್ಥಾನಮಾನವಿಲ್ಲ. ಹೀಗಾಗಿ ಡಿಕೆಶಿಯವರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಸಿದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂದರು.