ಚಿತಾಗಾರದ ಚಾವಣಿ ಕುಸಿದು 21 ಸಾವು!

ಚಿತಾಗಾರದ ಚಾವಣಿ ಕುಸಿದು 21 ಸಾವು| ಉತ್ತರ ಪ್ರದೇಶದಲ್ಲೊಂದು ಭೀಕರ ಘಟನೆ| ಅಂತ್ಯಸಂಸ್ಕಾರಕ್ಕೆ ತೆರಳಿದವರು ಸಾವಿನ ಮನೆಗೆ

21 killed after roof collapses at crematorium in Ghaziabad pod

ಘಾಜಿಯಾಬಾದ್(ಜ.04)‌: ಚಿತಾಗಾರದ ಚಾವಣಿ 21 ಜನರ ಸಾವನ್ನಪ್ಪಿದ ಭೀಕರ ಘಟನೆ ಉತ್ತರಪ್ರದೇಶದ ಮುರದ್‌ನಗರದಲ್ಲಿ ಭಾನುವಾರ ಸಂಭವಿಸಿದೆ.

ರಾಮ್‌ಧನ್‌ ಎಂಬ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಆತನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆಗಮಿಸಿದ್ದರು. ಆದರೆ ಈ ವೇಳೆ ಸಣ್ಣದಾಗಿ ಮಳೆ ಸುರಿಯುತ್ತಿದ್ದ ಕಾರಣ ಸುಮಾರು 25 ಜನರು ಅಲ್ಲೇ ಇದ್ದ ಕಟ್ಟಡವೊಂದರ ಕೆಳಗೆ ನಿಂತಿದ್ದರು. ಈ ವೇಳೆ ಆ ಕಟ್ಟಡದ ಚಾವಣಿ ಏಕಾಏಕಿ ಕುಸಿದ ಪರಿಣಾಮ 21 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 20 ಜನರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಧಾವಿಸಿ, ರಕ್ಷಣಾ ಕಾರ್ಯ ಕೈಗೊಂಡಿದೆ.

ಘಟನೆ ಸಂಬಂಧ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಡಿದವರ ಕುಟುಂಬಕ್ಕೆ ತಲಾ 2 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.

Latest Videos
Follow Us:
Download App:
  • android
  • ios