ಬದಲಾಯ್ತು ಶ್ರೀ ರಾಮುಲು ಖಾತೆ : ಸಿಗುತ್ತಾ ಮತ್ತೊಂದು ಆಫರ್..?
ಭುಗಿಲೆದ್ದ ಅಸಮಾಧಾನದ ನಡುವೆ ಮತ್ತೊಂದು ಆಫರ್ ಸಿಗುತ್ತಾ ಸಚಿವ ಶ್ರೀ ರಾಮುಲು ಅವರಿಗೆ..?
ಬಳ್ಳಾರಿ (ಅ.14): ಸಚಿವ ಶ್ರೀರಾಮುಲು ಬಳಿ ಇದ್ದ ಆರೋಗ್ಯ ಇಲಾಖೆಯನ್ನು ಕಸಿದು ಸುಧಾಕರ್ ಅವರಿಗೆ ನೀಡಿರುವ ಧೋರಣೆಗೆ ವಾಲ್ಮೀಕಿ ಸಮಾಜದಿಂದ ವಿರೋಧ ವ್ಯಕ್ತವಾಗಿದೆ.
ಈ ವೇಳೆ ಅಭಿಮಾನಿಗಳು ಶ್ರೀರಾಮುಲು ಪರ ಜಿಲ್ಲೆಯ ಗೋನಾಲ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಿಎಂ ಸಂಧಾನದ ಬಳಿಕ ಶ್ರೀರಾಮುಲು- ಸುಧಾಕರ್ ಟಾಂಗ್; ಹೇಳಿಕೆ ಸಖತ್ ಪಂಚಿಂಗ್! .
ಸಮಾಜದ ಸ್ವಾಮೀಜಿಗಳು ಹಾಗೂ ಬೆಂಬಲಿಗರು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಶ್ರೀರಾಮುಲುಗೆ ಮರಳಿ ಆರೋಗ್ಯ ಇಲಾಖೆ ಜತೆಗೆ ಉಪಮುಖ್ಯಮಂತ್ರಿ ಸ್ಥಾನವನ್ನೂ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಶ್ರೀ ರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಿದ್ದರು ಅಸಮಾಧಾನ ಮುಂದುವರಿದಿದೆ.