ಚಿಕ್ಕಮಗಳೂರು: ಇಂದಿನಿಂದ ಭಕ್ತರಿಗೆ ಶೃಂಗೇರಿ ಶಾರದಾಂಬೆ ದರ್ಶನ ಭಾಗ್ಯ
ಶೃಂಗೇರಿ ಶಾರದಾಂಬೆ ದೇವಾಲಯ ಇಂದಿನಿಂದ ಓಪನ್| ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿರುವ ಶಾರದಾಂಬೆ ದೇಗುಲ|ಬೆಳಿಗ್ಗೆ 6ಗಂಟೆಯಿಂದ ಅಪರಾಹ್ನ 12 ರವರೆಗೆ ಹಾಗೂ ಸಂಜೆ 5 ರಿಂದ 8 ರವರೆಗೆ ತೆರೆಯಲಿರುವ ದೇವಾಲಯ|
ಚಿಕ್ಕಮಗಳೂರು(ಜೂ.08): ಇಂದಿನಿಂದ (ಸೋಮವಾರ) ರಾಜ್ಯಾದ್ಯಂತ ಶಾಪಿಂಗ್ ಮಾಲ್, ದೇವಸ್ಥಾನ, ಚರ್ಚ್‌ಗಳು ಸೇರಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳು ತೆರೆಯಲಿವೆ. ಅದೇ ರೀತಿ ಜಿಲ್ಲೆಯ ಐತಿಹಾಸಿ ಶೃಂಗೇರಿ ಶಾರದಾಂಬೆ ದೇವಾಲಯ ಕೂಡ ಇಂದಿನಿಂದ ಓಪನ್ ಆಗಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ದೇವಸ್ಥಾನದ ಆಡಳಿತ ಮಂಡಳಿ ಇಂದಿನಿಂದ(ಸೋಮವಾರ) ಶೃಂಗೇರಿ ಶಾರದಾಂಬೆ ದೇವಸ್ಥಾನ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಬೆಳಿಗ್ಗೆ 6ಗಂಟೆಯಿಂದ ಅಪರಾಹ್ನ 12 ರವರೆಗೆ ಹಾಗೂ ಸಂಜೆ 5 ರಿಂದ 8 ರವರೆಗೆ ತೆರೆಯಲಿದೆ.
ನಂಬಿದವರನೆಂದೂ ಬಿಡದ ಶೃಂಗೇರಿ ಶಾರದಾಂಬೆ; ತಿಳಿಯಬನ್ನಿ ಮಹಾತ್ಮೆಯ!
ಜಗದ್ಗುರುಗಳ ಭೇಟಿಗೂ ಶ್ರೀಮಠ ಅವಕಾಶ ಮಾಡಿಕೊಟ್ಟಿದೆ. ಆದರೆ ದೇವಸ್ಥಾನಕ್ಕೆ ಬರುವ ಕೆಲವೊಂದು ನಿಯಮಗಳನ್ನ ಪಾಲನೆ ಮಾಡಿಕೊಂಡೇ ದೇವಿಯ ದರ್ಶನ ಪಡೆಯಬೇಕಾಗಿದೆ. ಭಕ್ತರು ಅಂತರ ಕಾಪಾಡಬೇಕು, ಮಾಸ್ಕ್ ಕಡ್ಡಾಯವಾಗಿ ಧರಿಬೇಕು, ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್, ಸ್ಯಾಟಿಟೈಜರ್ ಹಾಕಲಾಗುವುದು, ಒಂದೇ ಬಾರಿಗೆ 25 ಭಕ್ತರಿಗೆ ಮಾತ್ರ ದೇವಸ್ಥಾನದ ಒಳಗೆ ಬಿಡಲಾಗುವುದು ಎಂದು ತಿಳಿಸಿದೆ.