ಅಯೋಧ್ಯಾ ರಾಮಲಲ್ಲಾ ಪ್ರತಿಷ್ಠಾಪನೆ ವಿರೋಧವೆಂಬ ಅಪಪ್ರಚಾರಕ್ಕೆ ಶೃಂಗೇರಿ ಜಗದ್ಗರು ಬೇಸರ

ಅಯೋಧ್ಯಾ ವಿಚಾರದಲ್ಲಿ  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದ ಜಗದ್ಗರು ಶ್ರೀ ಭಾರತೀರ್ಥ ಮಹಾ ಸ್ವಾಮೀಜಿ ಅವರು ವಿರೋಧ ಮಾಡುತ್ತಿದ್ದಾರೆ ಎಂದು ಕೆಲವರು ಪ್ರಚಾರ ಮಾಡುತ್ತಿರುವುದನ್ನು ಶ್ರೀಮಠದ ಕಿರಿಯ ಯತಿಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅಲ್ಲಗಳೆದಿದ್ದಾರೆ.

 Sringeri pontiff denies displeasure over Ayodhya Ram Lalla installation gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜ.24): ಅಯೋಧ್ಯಾದಲ್ಲಿ ನಡೆದ ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದ ಜಗದ್ಗರು ಶ್ರೀ ಭಾರತೀರ್ಥ ಮಹಾ ಸ್ವಾಮೀಜಿ ಅವರು ವಿರೋಧ ಮಾಡುತ್ತಿದ್ದಾರೆ ಎಂದು ಕೆಲವರು ಪ್ರಚಾರ ಮಾಡುತ್ತಿರುವುದನ್ನು ಅಲ್ಲಗಳೆದಿರುವ ಶ್ರೀಮಠದ ಕಿರಿಯ ಯತಿಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರು, ಈ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀಮಠದಲ್ಲಿ ನಡೆದ ಧಾರ್ಮಿಕ ಸಮಾರಂಭವೊಂದರಲ್ಲಿ ಮಾನತಾಡಿರುವ ಕಿರಿಯ ಶ್ರೀಗಳು, ಇತ್ತೀಚೆಗೆ ಅನೇಕ ಕಡೆಗಳಲ್ಲಿ ಗುರುಗಳ ಚಿತ್ರವನ್ನು ಹಾಕಿ ಇವರು ಅಯೋಧ್ಯೆಯಲ್ಲಿ ನಡೆಯುತ್ತಿರುವುದನ್ನು ವಿರೋಧ ಮಾಡುತ್ತಿದ್ದಾರೆ ಎಂದು ಪ್ರಚುರ ಪಡಿಸಲಾಗುತ್ತಿದೆ. ಎಲ್ಲಿ ವಿರೋಧ ಮಾಡಿದ್ದಾರೆ. ಹಾಗೇ ಹೇಳಿದ್ದು ಎಲ್ಲಾದರೂ ಇದೆಯಾ? ವಾಸ್ತವವಾಗಿ ಸ್ವಲ್ಪ ಸಮಯಕ್ಕಾದರೂ ಗುರುಗಳ ದರ್ಶನ ಸಿಗುವುದು ಎಷ್ಟು ದುರ್ಲಭವಾಗಿದೆ ಎನ್ನುವುದು ಎಲ್ಲ ಭಕ್ತರಿಗೂ ಗೊತ್ತಿರುವ ವಿಚಾರ ಎಂದಿದ್ದಾರೆ.ಇಂತಹದ್ದರಲ್ಲಿ ಅವರು ಇದನ್ನು ವಿರೋಧ ಮಾಡುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಬಾಲಕ ಮೂರು ಸಿಟಿ ಸಂಚರಿಸಿ ಹೈದರಾಬಾದ್‌ನಲ್ಲಿ ಪತ್ತೆ!

ಅಪ್ರಚಾರದ ಬಗ್ಗೆ ಜಾಗರೂಕರಾಗಿರಬೇಕು : 
ಆ ರೀತಿ ವಿಚಾರಗಳನ್ನು ಹಾಕುವವನು ಎಲ್ಲೋ ಕುಳಿತಿರುತ್ತಾನೆ. ಅವನಿಗೆ ಇಲ್ಲಿ ಏನು ನಡೆಯುತ್ತಿದೆ. ಇವರು ಏನು ಹೇಳಿದ್ದಾರೆ ಏನೂ ಗೊತ್ತಿಲ್ಲ. ಒಟ್ಟಾರೆ ಯರೋ ಹೇಳಿದ್ದನ್ನು ಕೇಳಿಕೊಂಡು ಅದಕ್ಕೆ ಇನ್ನೊಂದಷ್ಟು ಸೇರಿಸಿ ಹಾಗೇಯೇ ಪ್ರಚಾರ ಮಾಡಲಾಗುತ್ತಿದೆ. ಏನಾದರೊಂದು ಪ್ರಮಾಣಪೂರ್ವಕವಾಗಿ ಇದು ಹೀಗೆ ಎಂದು ಹೇಳಿದರೆ ಸರಿ ಎಂದರು.ಸುಮ್ಮನೆ ಯಾರ್ಯಾರೋ ಹೇಳಿದ್ದನ್ನು ನಾವು ಹೇಳಿದರೆ ಅದು ತುಂಬಾ ದೊಡ್ಡ ಅಪರಾಧವಾಗುತ್ತದೆ. ಈಗ ನಡೆಯುತ್ತಿರುವುದು ಅದೇ, ಇಂತಹ ವಿಷಯಗಳ ಬಗ್ಗೆ ತುಂಬಾ ಜಾಗರೂಕರಾಗಿರಬೇಕು ಎಂದಿದ್ದಾರೆ.
ಪಾಪಕ್ಕೆ ಭಾಜನ ಆಗಬೇಕಾಗುತ್ತದೆ : 

ಯಾವುದೇ ಲೌಕಿಕವಾದ, ರಾಜಕೀಯವಾದ ವಿಷಗಳ ಸಂಬಂಧ ವಿಲ್ಲದೆ ನಿರಂತರ ತಮ್ಮ ಅನುಷ್ಠಾನದಲ್ಲಿದ್ದು, ಯಾವಾಗಲೂ ಬ್ರಹ್ಮ ಚಿಂತನೆಯಲ್ಲಿದ್ದು, ಭಕ್ತರು, ಶಿಷ್ಯರ ಶ್ರೇಯಸ್ಸನ್ನು ಬಯಸುತ್ತಿರುವ ಒಬ್ಬ ವ್ಯಕ್ತಿಯ ವಿಷಯದಲ್ಲೇ ಹೀಗಾಯಿತು ಎಂದಾದರೆ ಸಾಮಾನ್ಯರು, ಬೇರೆಯವರ ವಿಷಯದಲ್ಲಿ ಏನಾಗಬಹುದು ಎನ್ನುವುದನ್ನು ಊಹೆ ಮಾಡಿಕೊಳ್ಳಲೂ ಸಾಧ್ಯವಿಲ್ಲ ಎಂದಿದ್ದಾರೆ.

ಚಿತ್ರದುರ್ಗ: ಕುಡಿದ ಮತ್ತಿನಲ್ಲಿ ಸ್ಟೀಲ್ ಕಟ್ಟರ್ ನಿಂದ ಮೂವರಿಗೆ ಇರಿದ ಯುವಕ

ಆದ್ದರಿಂದ ಈ ರೀತಿಯ ವಿಷಯಗಳಿಂದ ಎಲ್ಲರೂ ಜಾಗರೂಕವಾಗಿರಬೇಕು. ಒಂದು ವಿಷಯವನ್ನು ಹೇಳುವವರು ನಿಮ್ಮ ಬಳಿ ಏನು ಪ್ರಮಾಣ ಇದೆ ಎನ್ನುವುದನ್ನು ತೋರಿಸಬೇಕು. ಇಲ್ಲವಾದರೆ ಸುಮ್ಮನಾದರೂ ಇರಬೇಕು. ಪ್ರಮಾಣವಿಲ್ಲದೆ ಪ್ರಚಾರ ಮಾಡಿದರೆ ನಂಬುವುದು ಹೇಗೆ ಎಂದರು.ಈ ಪ್ರಪಂಚದಲ್ಲಿ ಯಾರಿಂದಲೂ ಗುರುಗಳಿಗೆ ತೊಂದರೆ ಆಗುವುದಿಲ್ಲ. ಅವರು ಸ್ಥಿತ ಪ್ರಜ್ಞರಾಗಿರುವವರು. ಆದರೆ ಅಂತಹವರಿಗೆ ತೊಂದರೆ ಮಾಡಲು ಹೋದವರು ಪಾಪಕ್ಕೆ ಭಾಜನ ಆಗಬೇಕಾಗುತ್ತದೆ. ಇದು ಆಗಬಾರದು ಎನ್ನುವ ಮಾತನ್ನು ಹೇಳಬಯಸುತ್ತೇವೆ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios