ರಾಮಮಂದಿರ ಮುಸ್ಲಿಂಗೆ ಗುತ್ತಿಗೆ ರದ್ದುಪಡಿಸಲು ಶ್ರೀರಾಮ ಸೇನೆ ಮನವಿ
ಅಯೋಧ್ಯೆ ತೀರ್ಥ ಕ್ಷೇತ್ರ ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಾನಕ್ಕೆ 500 ವರ್ಷದಿಂದ ಹೋರಾಟ, ಬಲಿದಾನದ ಫಲ ಭವ್ಯ ಮಂದಿರ ಪುನರ್ ನಿರ್ಮಾಣ ಅತ್ಯಂತ ಸಂತಸದ ವಿಷಯ. ಆದರೆ ನಿರ್ಮಾಣ ಕಾರ್ಯಕ್ಕೆ ಮುಸ್ಲಿಮರಿಗೆ ಗುತ್ತಿಗೆ ನೀಡಿರುವುದು ಅತ್ಯಂತ ಆಘಾತಕಾರಿ ಹಾಗೂ ನೋವಿನ ಸಂಗತಿ. ಇದರಿಂದ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ.
ಉಡುಪಿ(ಆ.09): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಗುತ್ತಿಗೆಯನ್ನು ಮುಸ್ಲಿಮರಿಗೆ ನೀಡಿರುವುದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ, ಮೈಸೂರಿನಲ್ಲಿ ಚಾತುರ್ಮಾನ ವ್ರತದಲ್ಲಿರುವ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರನ್ನು ಭೇಟಿಯಾಗಿ ಆಗ್ರಹಿಸಿತು.
ಅಯೋಧ್ಯೆ ತೀರ್ಥ ಕ್ಷೇತ್ರ ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಾನಕ್ಕೆ 500 ವರ್ಷದಿಂದ ಹೋರಾಟ, ಬಲಿದಾನದ ಫಲ ಭವ್ಯ ಮಂದಿರ ಪುನರ್ ನಿರ್ಮಾಣ ಅತ್ಯಂತ ಸಂತಸದ ವಿಷಯ. ಆದರೆ ನಿರ್ಮಾಣ ಕಾರ್ಯಕ್ಕೆ ಮುಸ್ಲಿಮರಿಗೆ ಗುತ್ತಿಗೆ ನೀಡಿರುವುದು ಅತ್ಯಂತ ಆಘಾತಕಾರಿ ಹಾಗೂ ನೋವಿನ ಸಂಗತಿ. ಇದರಿಂದ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ತಕ್ಷಣ ಗುತ್ತಿಗೆ ರದ್ದುಪಡಿಸಿ ಹಿಂದುಗಳಿಂದಲೇ ನಿರ್ಮಾಣ ಕಾರ್ಯ ನಡೆಯಬೇಕೆಂದು ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.
ಉಡುಪಿ ವಿಡಿಯೋ ಕೇಸ್ ಸಿಐಡಿ ತನಿಖೆಗೆ: ರಾಜ್ಯ ಸರ್ಕಾರದಿಂದ ಆದೇಶ
ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಬೆಂಗಳೂರು ಮತ್ತು ಮೈಸೂರ್ ಜಿಲ್ಲಾ ಮುಖಂಡರಾದ ಭಾಸ್ಕರ್, ಅಮರನಾಥ್, ಮಹಾಲಿಂಗ ಮತ್ತಿತರರಿದ್ದರು.