ಬೆಂಗಳೂರು[ಡಿ.28] ಸಾಧಕರಿಗೆ ಸನ್ಮಾನ, ರುಚಿಕರ ಅಡುಗೆ ತಿನಿಸು, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ-ವಿಮರ್ಶೆ ಎಲ್ಲದಕ್ಕೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಸಾಕ್ಷಿಯಾಗಲಿದೆ.

ಬೆಂಗಳೂರಿನ ಅರಮನೆ ಮೈದಾನದ  ದಿ ರಾಯಲ್ ಸೆನೆಟ್ ನಲ್ಲಿ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಚಾಲನೆ ದೊರೆತಿದೆ. ಹವ್ಯಕರ ಸಂಸ್ಕೃತಿ ,ಕಲೆ, ಸಂಸ್ಕಾರ, ತೊಡುಗೆಯನ್ನು ಬಿಂಬಿಸುವ ಕಾರ್ಯಕ್ರಮ ಇದಾಗಿದ್ದು, ಇಂದಿನಿಂದ ಮೂರು ದಿನಗಳ [ಡಿಸೆಂಬರ್ 28 ರಿಂದ 30] ಕಾಲ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಚಾಲನೆ ನೀಡಿದರು.


"

ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಸಂಪಾದಕ ರವಿ ಹೆಗಡೆ  ಹವ್ಯಕ ಸಂಸ್ಕೃತಿ ಬಿಂಬಿಸುವ ವಿಶೇಷ t- shirt ಬಿಡುಗಡೆ ಮಾಡಿದರು. ಶ್ರೀ ಕ್ಷೇತ್ರ ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು, ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಸಚಿವ ಪಿ.ಆರ್.ಸಿಂಧ್ಯಾ , ಶಾಸಕ ಶಿವರಾಮ ಹೆಬ್ಬಾರ್ ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ಸಂಭ್ರಮ, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ

ಸಮ್ಮೇಳನಕ್ಕೆ ವಿದೇಶದಿಂದ ಕೂಡ ಹವ್ಯಕರು ಆಗಮಿಸಿದ್ದಾರೆ. ವಿಶ್ವ ಹವ್ಯಕ ಸಮ್ಮೇಳನದ ಬಗ್ಗೆ ವಿದೇಶದಲ್ಲಿ ನೆಲೆ ನಿಂತಿರುವ ಹವ್ಯಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"