ಬೆಂಗಳೂರು(ಜು.21): ರಾಜಧಾನಿಯಲ್ಲಿ ಕೊರೋನಾ ಸೋಂಕು ನಿಯಂತ್ರಣ ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಸಲಹೆ ಪಡೆಯಲು ರಾಜ್ಯ ಕೋವಿಡ್‌ ಕಾರ್ಯಪಡೆ ತಜ್ಞರ ಸಮಿತಿ ಮಾದರಿಯಲ್ಲಿ ‘ಬಿಬಿಎಂಪಿ ಕೋವಿಡ್‌ ಕಾರ್ಯಪಡೆ’ ರಚಿಸಲಾಗಿದೆ.

ಕಾರ್ಯಾಪಡೆಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅಧ್ಯಕ್ಷರಾಗಿರುತ್ತಾರೆ. ಇವರೊಂದಿಗೆ ಸಹ ಅಧ್ಯಕ್ಷರಾಗಿ ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್‌ ಹಾಗೂ ತಜ್ಞ ಗಿರಿಧರ್‌ ಬಾಬು ಕಾರ್ಯನಿರ್ವಹಿಸಲಿದ್ದಾರೆ.

ಬೆಂಗಳೂರಲ್ಲಿ ಸೋಂಕಿನ ನಿಯಂತ್ರಣಕ್ಕೆ 2 ಸಾವಿರ ಗೃಹ ರಕ್ಷಕ ಸಿಬ್ಬಂದಿಗೆ BBMP ಮನವಿ

ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಆರೋಗ್ಯ ಅಧಿಕಾರಿ ಡಾ. ವಿಜಯೇಂದ್ರ, ಪಾಲಿಕೆ ಕ್ಲಿನಿಕಲ್‌ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ. ನಿರ್ಮಲಾ ಬುಗ್ಗಿ ಸದಸ್ಯ ಕಾರ್ಯದರ್ಶಿಗಳಾಗಿ, ಸದಸ್ಯರಾಗಿ ಡಾ. ರವಿ ಮೆಹ್ರಾ, ಡಾ.ಕೃಷ್ಣಮೂರ್ತಿ, ಡಾ. ವೆಂಕಟೇಶ್‌, ಡಾ. ಆಶೀಸ್‌ ಸತ್ಪತಿ, ಡಾ.ಎನ್‌.ಟಿ. ನಾಗರಾಜ , ರಮೇಶ್‌ ಅರವಿಂದ್‌, ಡಾ.ರಂಗನಾಥ್‌, ಡಾ.ರಮೇಶ್‌ ಮಿಸ್ತಿ, ಡಾ. ಜಿ.ಕೆ.ಸುರೇಶ್‌, ಡಾ.ಕಲಾವತಿ, ಡಾ.ಪ್ರದೀಪ್‌ ರಂಗಪ್ಪ ಇರಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಡಾ  ಎಂ.ಕೆ.ಸುದರ್ಶನ್‌, ಪ್ರೊ.ರವಿ, ಪ್ರೊ.ಗುರುರಾಜ್‌, ಡಾ. ಲೋಕೇಶ್‌ ಅಲಹರಿ, ಯೂನಿಸೆಫ್‌ ಹಾಗೂ ರೋಟರಿ ಪ್ರತಿನಿ​ಧಿಗಳು, ಸ್ವಯಂ ನೇವಾ ಸಂಸ್ಥೆ ಸದಸ್ಯರು ಇರಲಿದ್ದಾರೆ.

24 ಗಂಟೆಯಲ್ಲಿ ಪರೀಕ್ಷಾ ವರದಿ

ಕಾರ್ಯಪಡೆ ನಗರದಲ್ಲಿ ಕೊರೋನಾ ನಿಗ್ರಹಕ್ಕೆ ಕೈಗೊಳ್ಳಲಾಗುತ್ತಿರುವ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತಂತೆ ಎರಡು ದಿನಕ್ಕೊಮ್ಮೆ ಸಭೆ ನಡೆಸಿ ಚರ್ಚಿಸಲಿದೆ. ನಗರದಲ್ಲಿ ಸೋಂಕು ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಮಾಡಿ ಚಿಕಿತ್ಸೆ ನೀಡುವುದು. ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಸೋಂಕು ಪರೀಕ್ಷೆಗೆ ಒಳಪಡಿಸುವುದು. ಸೋಂಕು ಪರೀಕ್ಷೆ ಪ್ರಮಾಣ ಹೆಚ್ಚಿಸುವುದರ ಜತೆಗೆ 24 ಗಂಟೆಯಲ್ಲಿ ಪರೀಕ್ಷಾ ವರದಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದು.

ಆಸ್ಪತ್ರೆಗಳ ಅಮಾನವೀಯತೆಗೆ ಮಗು ಬಲಿ! ಪ್ರಪಂಚ ನೋಡುವ ಮುನ್ನ ಕಣ್ಮುಚ್ಚಿತು ಪುಟ್ಟ ಹಸುಗೂಸು

ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ, ಸೋಂಕಿತ ಸಂಪರ್ಕಿತರನ್ನು ತ್ವರಿತವಾಗಿ ಪತ್ತೆ ಮಾಡಿ ಅವರ ಮೇಲೆ ನಿಗಾ ವಹಿಸುವುದು. ಅದಕ್ಕೆ ವಾರ್ಡ್‌ ಕೋವಿಡ್‌ ಸಮಿತಿ ಸದಸ್ಯರ ಬಳಕೆ ಮಾಡಿಕೊಳ್ಳುವುದು. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮ ಸಹಯೋಗ ಪಡೆದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಕುರಿತು ಕಾರ್ಯಪಡೆ ಚರ್ಚಿಸುತ್ತದೆ.