ಬೆಂಗಳೂರು(ಜು. 11) ಬೆಂಗಳೂರಿನಲ್ಲಿ ಕೊರೋನಾ ಸೊಂಕು ಹೆಚ್ಚುತ್ತಿರುವುದಕ್ಕೆ ಅನಿಯಂತ್ರಿತ ವಲಸೆ ಕಾರಣ ಎನ್ನುವ ತಜ್ಞರ ವರದಿ ನಂತರ ಎಚ್ಚೆತ್ತ ಸರ್ಕಾರ ಬೇರೆ ಮುಂದೆ ಯಾವ ಹೆಜ್ಜೆ ಇಡುತ್ತದೆ ನೋಡಬೇಕಾಗಿದೆ.

ಅನಿಯಂತ್ರಿತ ವಲಸೆ ತಪ್ಪಿಸಲು ಪ್ಲಾನ್ ಮಾಡಲು ಮುಂದಾಗಿದ್ದ ಸರ್ಕಾರಕ್ಕೆ  ಹಿನ್ನಡೆಯಾಗಿದೆ. ವಲಸೆ ತಡೆಗೆ ಜನರ ಮನವೊಲಿಕೆ ಮಾತ್ರ ಸರ್ಕಾರದ ಮುಂದಿರುವ ಮಾರ್ಗ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ಹೋದ ಸೋಂಕಿತರಿಂದ ಹಳ್ಳಿಗಳಲ್ಲಿ ಕೋರೋನಾ ಉಲ್ಬಣವಾಗಿದೆ. ಹೊರಗಿನಿಂದ ನಗರಕ್ಕೆ ವಾಪಸಾದವರಿಗೂ ಬೆಂಗಳೂರಿನ ಸೋಂಕು ಹರಡುತ್ತಿದೆ ಈ ಹಿನ್ನೆಲೆಯಲ್ಲಿ ಅನಿಯಂತ್ರಿತ ವಲಸೆ ತಡೆಯಬೇಕು ಎಂದು ವರದಿ ತಿಳಿಸಿದೆ.

ಕೊರೋನಾ ಕಂಡು ಹಿಡಿಯುವ ಮೂರು ವಿಧಾನಗಳು ಯಾವವು?

ಇದರಿಂತ ಎಚ್ಚೆತ್ತ ಸರ್ಕಾರ ಪರಿಹಾರ ಮಾರ್ಗ ಕಂಡುಹಿಡಿಯಲುಹಚ್ಚುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದೆ.  ಆದರೆ ಅನಿಯಂತ್ರಿತ ವಲಸೆ ತಪ್ಪಿಸಲು ಕಷ್ಟ ಎಂಬುದು ಉನ್ನತಾಧಿಕಾರಿಗಳ ಅಭಿಪ್ರಾಯ. ವಲಸೆ ತಪ್ಪಿಸಲು ಒಂದಿಷ್ಟು ಸಲಹೆಗಳು ಬಂದಿವೆ. 

* ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರೋಂದಲನಕ್ಕೆ ಕೈಜೋಡಿಸಬೇಕು.

*  ಸಚಿವರು ಮತ್ತು ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯ.

* ಬೆಂಗಳೂರು ಬಿಟ್ಟು ಹೊರಗೆ ಹೋಗಬೇಡಿ ಅಂತ ಮನವರಿಕೆ ಮಾಡಬೇಕಾಗಿದೆ.

ಬೆಂಗಳೂರಲ್ಲಿ ಕೊರೋನಾ ಆರ್ಭಟಕ್ಕೆ ಕಾರಣ ಏನು?

*  ಕಾನೂನು ಕ್ರಮದ ಮೂಲಕ ಅನಿಯಂತ್ರಿತ ವಲಸೆ ಕಟ್ಟಿ ಹಾಕಲು ಅಸಾಧ್ಯ ಎಂದಿರುವ ಅಧಿಕಾರಿಗಳು.

*  ಅನ್ ಲಾಕ್ ಆಗಿರುವ ಹಿನ್ನೆಲೆಯಲ್ಲಿ ವಲಸೆ ತಡೆಯಲು ಕೂಡಾ ಸಾಧ್ಯವಾಗ್ತಿಲ್ಲ

* ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್ ಹಾಕಿದಲ್ಲಿ ಮಾತ್ರ ಒಂದಷ್ಟು ಮಟ್ಟದ ವಲಸೆಗೆ ಕಡಿವಾಣ ಬೀಳಬಹುದು

* ಆದರೆ ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್ ಹಾಕುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ.

*  ಅಂತರಜಿಲ್ಲಾ ಓಡಾಟ ನಿಂತರೆ ಆರ್ಥಿಕ  ಹೊಡೆತ ನೀಡುತ್ತದೆ,

* ಕಾರ್ಮಿಕರು ವಾಪಸ್ ಬರದಿದ್ದರೆ ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ

* ಹೀಗಾಗಿ ಅನಿಯಂತ್ರಿತ ವಲಸೆ ತಡೆಗೆ ಮನವೊಲಿಕೆ ಮಾತ್ರ ಪರಿಹಾರ.

ತಜ್ಞರ ಸಮಿತಿ ವರದಿ ಸಲ್ಲಿಸಿದ್ದು ಸಾಧ್ಯಾಸಾಧ್ಯತೆ ತಿಳಿಸಿದೆ.  ಸಿಎಂ ಯಡಿಯೂರಪ್ಪ ಮತ್ತು 8 ವಲಯದ ಟಾಸ್ಕ್ ಪೋರ್ಸ್ ಗೆ ಮಾಹಿತಿ ರವಾನೆ ಮಾಡಲಾಗಿದೆ. 

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"