Asianet Suvarna News Asianet Suvarna News

ಸವಾರರಿಗೆ ದಂಡದ ಬದಲು ಹೆಲ್ಮೆಟ್ ವಿತರಣೆ

ಹೆಲ್ಮೆಟ್ ಧರಿಸದ ಸವಾರರಿಗೆ ಇನ್ಮುಂದೆ ದಂಡದ ಬದಲಾಗಿ ಹೆಲ್ಮೆಟ್ ವಿತರಣೆ ಮಾಡಲಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ. 

Special Programme For Farmers in Piriyapatna From Police Department snr
Author
Bengaluru, First Published Mar 2, 2021, 1:34 PM IST

ಪಿರಿಯಾಪಟ್ಟಣ (ಮಾ.02):  ರೈತರು ಉಪಯೋಗಿಸುವ ಟ್ರ್ಯಾಕ್ಟರ್‌ ವಾಹನಗಳ ವಿಮೆ ಮತ್ತು ಚಾಲನಾ ಪರವಾನಗಿ ಇಲ್ಲದ ತಾಲೂಕಿನ ರೈತರಿಗೆ ಆರಕ್ಷಕ ಇಲಾಖೆ ವತಿಯಿಂದ ಸೌಲಭ್ಯ ಕಲ್ಪಿಸಿಕೊಡಲು ಆರಕ್ಷಕ ನಾನೊಬ್ಬ ರೈತ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಬಿ.ಆರ್‌. ಪ್ರದೀಪ್‌ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಲು ಟ್ರ್ಯಾಕ್ಟರ್‌ ಸೇರಿದಂತೆ ವಿವಿಧ ವಾಹನಗಳಲ್ಲಿ ಆಗಮಿಸಿದ್ದ ರೈತರಿಗೆ ರಸ್ತೆ ಸುರಕ್ಷತೆ ಮತ್ತು ಚಾಲನಾ ಪರವಾನಗಿಯ ಬಗ್ಗೆ ಮಾಹಿತಿ ನೀಡಿದ ಅವರು, ಇತ್ತಿಚೆಗೆ ಸಂಚಾರಿ ನಿಯಮ ಪಾಲಿಸದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ.

18 ಗಂಟೆಯಲ್ಲಿ 25 ಕಿ.ಮೀ ರಸ್ತೆ ನಿರ್ಮಾಣ; ವಿಶ್ವ ದಾಖಲೆ ಬರೆದ ಭಾರತ! ..

 ಅಪಘಾತವಾದ ವಾಹನಗಳ ವಿಮೆ ಹಾಗೂ ಚಾಲಕನ ಚಾಲನಾ ಪರವಾನಗಿ ಇಲ್ಲದಿದ್ದರೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ಸಂದರ್ಭದಲ್ಲಿ ಸೌಲಭ್ಯ ಪಡೆಯುವುದು ಕಷ್ಟಕರವಾಗಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಎದುರಾದ ಎಷ್ಟೋ ಉದಾಹರಣೆಗಳಿವೆ. ರೈತರು ಕನಿಷ್ಠ ಕಾನೂನಿನ ಅರಿವು ತಿಳಿದಿರಬೇಕು. ತಾಲೂಕಿನಲ್ಲಿ 3 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿದ್ದು ಎಲ್ಲಾ ಚಾಲಕರು ಕಡ್ಡಾಯ ವಿಮೆ ಹಾಗೂ ಚಾಲನಾ ಪರವಾನಗಿ ಹೊಂದಿರಬೇಕು ಎಂದರು.
 
 ಹೆಲ್ಮೆಟ್‌ ವಿತರಿಸುವ ಯೋಜನೆ 

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು ಮುಂದಿನ ದಿನಗಳಲ್ಲಿ ಅಂಥವರೆಗೆ ದಂಡ ವಿಧಿಸುವ ಬದಲು ಹೆಲ್ಮೆಟ್‌ ಕಂಪೆನಿಯ ಸಹಯೋಗದೊಂದಿಗೆ ಹೆಲ್ಮೆಟ್‌ ವಿತರಿಸುವ ಯೋಚನೆ ಇದೆ. 

ಚಾಲನಾ ಪರವಾನಗಿ ಹೊಂದಿಲ್ಲದ ರೈತರು ತಮ್ಮ ವಿಳಾಸ ಮತ್ತು ವಯಸ್ಸನ್ನು ದೃಢೀಕರಿಸುವ ದಾಖಲಾತಿಯೊಂದಿಗೆ ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿಗೆ ಬಂದು ಅರ್ಜಿ ಸಲ್ಲಿಸಿದಲ್ಲಿ ಆರ್‌ಟಿಒ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಶೀಘ್ರದಲ್ಲಿ ಚಾಲನಾ ಪರವಾನಗಿ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Follow Us:
Download App:
  • android
  • ios