ರಾಜ್ಯದ ಮೂಲೆ ಮೂಲೆಗೂ ರಸ್ತೆ ಸಂಪರ್ಕ ಕಲ್ಪಿಸಲು ವಿಶೇಷ ಅನುದಾನ: ಸಚಿವ ಸತೀಶ್‌ ಜಾರಕಿಹೊಳಿ

ರಸ್ತೆಗಳ ಅಭಿವೃದ್ಧಿ ರಾಜ್ಯದ ಪ್ರಗತಿಗೆ ಮಾನದಂಡವಾಗಿದೆ. ಸಮರ್ಪಕ ರಸ್ತೆಗಳು ಕೃಷಿ, ಕೈಗಾರಿಕೆ, ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ಧಿ ಬೆಳವಣಿಗೆಯನ್ನು ನಿರ್ಧರಿಸಲಿದ್ದು, ರಾಜ್ಯದ ಮೂಲೆ ಮೂಲೆಗಳಿಗೂ ರಸ್ತೆಗಳನ್ನು ಸಂಪರ್ಕಿಸುವಲ್ಲಿ ಆದ್ಯತೆಗೆ ಅನುಗುಣವಾಗಿ ವಿಶೇಷ ಅನುದಾನ ನೀಡುವುದಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು. 

Special grant to provide road connectivity to every corner of the state Says Minister Satish Jarkiholi gvd

ಬ್ಯಾಡಗಿ (ಸೆ.21): ರಸ್ತೆಗಳ ಅಭಿವೃದ್ಧಿ ರಾಜ್ಯದ ಪ್ರಗತಿಗೆ ಮಾನದಂಡವಾಗಿದೆ. ಸಮರ್ಪಕ ರಸ್ತೆಗಳು ಕೃಷಿ, ಕೈಗಾರಿಕೆ, ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ಧಿ ಬೆಳವಣಿಗೆಯನ್ನು ನಿರ್ಧರಿಸಲಿದ್ದು, ರಾಜ್ಯದ ಮೂಲೆ ಮೂಲೆಗಳಿಗೂ ರಸ್ತೆಗಳನ್ನು ಸಂಪರ್ಕಿಸುವಲ್ಲಿ ಆದ್ಯತೆಗೆ ಅನುಗುಣವಾಗಿ ವಿಶೇಷ ಅನುದಾನ ನೀಡುವುದಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು. ಲೋಕೋಪಯೋಗಿ ಇಲಾಖೆ ವತಿಯಿಂದ ₹ 22 ಕೋಟಿ ವೆಚ್ಚದಲ್ಲಿ ಪಟ್ಟಣದ ಅಗಸನಹಳ್ಳಿಯಿಂದ-ಶಿಡೇನೂರ ಗ್ರಾಮದವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ರಸ್ತೆಯು ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದ್ದು ಸಾಮಾಜಿಕ ಪ್ರಯೋಜನಗಳಿಗೆ ಬಹಳ ನಿರ್ಣಾಯಕವಾಗಿವೆ. ದೇಶ ಅಭಿವೃದ್ಧಿ ಹೊಂದುವುದು ಸೇರಿದಂತೆ ಉದ್ಯೋಗ, ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಸೇವೆ ಸೇರಿದಂತೆ ಬಡತನ ಮತ್ತು ಪ್ರತಿಕೂಲತೆ ವಿರುದ್ಧ ಹೋರಾಡಲು ರಸ್ತೆಗಳು ನಿರ್ಣಾಯಕವಾಗಿವೆ ಎಂದರು.

ಪೀಣ್ಯದಲ್ಲಿ ಸಣ್ಣ ಕೈಗಾರಿಕಾ ನಿಗಮ ಉತ್ಕೃಷ್ಟತಾ ಕೇಂದ್ರ: ಶೋಭಾ ಕರಂದ್ಲಾಜೆ

ಬಡವರ ಪರವಾದ ಪಕ್ಷ: ಕಾಂಗ್ರೆಸ್ ಬಡವರ ಪರವಾದ ಪಕ್ಷವಾಗಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿದೆ. ನಮ್ಮ ಆರ್ಥಿಕ ಇತಿಮಿತಿಯಲ್ಲಿ ಅಭಿವೃದ್ಧಿ ಮಾಡಬೇಕಾಗಿದ್ದರಿಂದ ಜನರ ನಿರೀಕ್ಷೆಗೆ ತಕ್ಕಂತೆ ರಸ್ತೆಗಳ ಅಭಿವೃದ್ಧಿ ಆಗದೇ ಇರಬಹುದು, ಆದರೆ ಅವಶ್ಯವಿರುವಲ್ಲಿ ಆದ್ಯತೆ ಮೇರೆಗೆ ಅನುದಾನ ನೀಡಲು ಈಗಲೂ ಬದ್ಧನಾಗಿದ್ದೇನೆ ಎಂದರು.

ಮುಖ್ಯರಸ್ತೆ ಅಗಲೀಕರಣ: ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ಬ್ಯಾಡಗಿ ತಾಲೂಕಿನ ಜನರ ಬಹುದಿನದ ಬೇಡಿಕೆಯಾಗಿದೆ. ನ್ಯಾಯಾಲಯದಲ್ಲಿನ ಮೊಕದ್ದಮೆಗಳನ್ನು ಇತ್ಯರ್ಥ ಮಾಡಿಕೊಂಡು ಅದನ್ನು ಕೂಡ ಅಗಲೀಕರಣ ಮಾಡಲಿದ್ದೇವೆ, ಸಚಿವ ಜಾರಕಿಹೊಳಿ ಅವರು ನೀಡಿದ ಅನುದಾನದಿಂದ ಇತ್ತೀಚೆಗೆ ಮುಕ್ತಾಯಗೊಂಡ ಸಿದ್ದರಾಮೇಶ್ವರ ಜಯಂತಿ ಅತ್ಯಂತ ಯಶಸ್ವಿಯಾಗಿ ಸಮಾಪನಗೊಂಡಿದ್ದು ತಾಲೂಕಿನ ಜನರ ಮೇಲೆ ಅವರಿಟ್ಟಿರುವ ವಿಶ್ವಾಸಕ್ಕೆ ಜನತೆಯ ಚಿರಋಣಿಯಾಗಿದ್ದೇನೆ ಎಂದರು.

ಇನ್ನಷ್ಟು ಅನುದಾನ ಬೇಕು: ಬ್ಯಾಡಗಿ ಮತಕ್ಷೇತ್ರ ಮಲೆನಾಡು ವ್ಯಾಪ್ತಿಗೆ ಸೇರುತ್ತದೆ. ಹೀಗಾಗಿ ತಾಲೂಕಿನ ಎಲ್ಲ‌ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದಕ್ಕಾಗಿ ಹೆಚ್ಚಿನ ಅನುದಾನದ ಅವಶ್ಯವಿದ್ದು ಅನುದಾನ ಬಿಡುಗಡೆಗೆ ಮನವಿ ಮಾಡುತ್ತಿದ್ದೇನೆ. ಕೊಟ್ಟಂತಹ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿ ನಡೆಸಲಿದ್ದೇವೆ, ಸರ್ಕಾರದ ಆಶಯವೂ ಕೂಡ ಆಗಿದ್ದು ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿದ್ದೇವೆ ಎಂದರು. ಇದಕ್ಕೂ ಮುನ್ನ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು. 

ನಿಮಗೆ ಕೈ ಮುಗಿಯುತ್ತೇನೆ, ಪ್ಲೀಸ್‌, ಸಿಎಂ ಬದಲಾವಣೆ ವಿಚಾರ ಕೇಳ್ಬೇಡಿ: ಸಚಿವ ಸತೀಶ್‌ ಜಾರಕಿಹೊಳಿ

ವೇದಿಕೆಯಲ್ಲಿ ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷ ಸುಭಾಸ್ ಮಾಳಗಿ, ಸವದತ್ತಿ ಶಾಸಕ ವೈದ್ಯ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಶಿವನಗೌಡ ಪಾಟೀಲ, ಮುಖಂಡರಾದ ಟಿ.ಈಶ್ವರ, ಚನ್ನಬಸಪ್ಪ ಹುಲ್ಲತ್ತಿ, ಶಂಭನಗೌಡ ಪಾಟೀಲ, ಬೀರಪ್ಪ ಬಣಕಾರ, ಮುನಾಫ್ ಎರೇಶೀಮಿ, ಫಕ್ಕೀರಮ್ಮ ಛಲವಾದಿ, ಶಂಕರ ಕುಸಗೂರ, ನಾಗರಾಜ ಆನ್ವೇರಿ, ರಾಜಣ್ಣ ಕಳ್ಯಾಳ, ಸೋಮಣ್ಣ ಸಂಕಣ್ಣನವರ, ಸುನೀಲ್ ಮಣ್ಣಮ್ಮನವರ, ಖಾದರಸಾಬ್ ದೊಡ್ಮನಿ, ರಾಮಣ್ಣ ಉಕ್ಕುಂದ, ಗಿರೀಶ ಇಂಡಿಮಠ, ಎಇಇ ಉಮೇಶ ನಾಯಕ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರರಿದ್ದರು.

Latest Videos
Follow Us:
Download App:
  • android
  • ios