Asianet Suvarna News Asianet Suvarna News

ಇಂದು ಪಿಯುಸಿ ಇಂಗ್ಲೀಷ್ ಪರೀಕ್ಷೆ: ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್, ಇಲ್ಲಿದೆ ಡೀಟೇಲ್ಸ್

ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಜೂ. ೧೮ ರಂದು ನಡೆಯಲಿದ್ದು, ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋದಿಂದ ಪರೀಕ್ಷಾ ಕೇಂದ್ರಗಳಿಗೆ ಬರಲು ವಿದ್ಯಾರ್ಥಿಗಳಿಗೆ ೪೫ ವಿಶೇಷ ಬಸ್‌ಗಳನ್ನು ಉಚಿತವಾಗಿ ವ್ಯವಸ್ಥೆ ಮಾಡಲಾಗಿದೆ.

Special bus for pu students writing exam
Author
Bangalore, First Published Jun 18, 2020, 7:19 AM IST

ಕುಂದಾಪುರ(ಜೂ.18): ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಜೂ. ೧೮ ರಂದು ನಡೆಯಲಿದ್ದು, ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋದಿಂದ ಪರೀಕ್ಷಾ ಕೇಂದ್ರಗಳಿಗೆ ಬರಲು ವಿದ್ಯಾರ್ಥಿಗಳಿಗೆ ೪೫ ವಿಶೇಷ ಬಸ್‌ಗಳನ್ನು ಉಚಿತವಾಗಿ ವ್ಯವಸ್ಥೆ ಮಾಡಲಾಗಿದೆ.

"

ಪ.ಪೂ. ಶಿಕ್ಷಣ ಇಲಾಖೆಯ ಅಽಕಾರಿಗಳು ಆಯಾಯ ಪ.ಪೂ. ಕಾಲೇಜಿನ ಮುಖಾಂತರ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದು, ಸ್ವಂತ, ಖಾಸಗಿ ವಾಹನದಲ್ಲಿ ಬರುವ ವಿದ್ಯಾರ್ಥಿಗಳು ಹೊರತುಪಡಿಸಿ, ಬಾಕಿ ಅವಶ್ಯವಿರುವ ಉಳಿದ ಎಲ್ಲರಿಗೂ ಬಸ್ ವ್ಯವಸ್ಥೆ ಮಾಡಲಾಗಿದೆ.

ಯಾವೆಲ್ಲ ರೂಟ್‌ಗಳು?

ಕುಂದಾಪುರ - ಬಂದೂರು, ಗೋಳಿಹೊಳೆ - ಕುಂದಾಪುರ, ಉಪ್ಪುಂದ - ನಾವುಂದ, ಗೋಳಿಯಂಗಡಿ- ಬಾರ್ಕೂರು, ಭಟ್ಕಳ- ಬಂದೂರು, ಕೊಲ್ಲೂರು - ವಂಡ್ಸೆ, ಹೊಸಂಗಡಿ - ಬಿದ್ಕಲ್‌ಕಟ್ಟೆ, ಹಳ್ಳಿಹೊಳೆ - ಬಿದ್ಕಲ್‌ಕಟ್ಟೆ, ಶೇಡಿಮನೆ- ಬಿದ್ಕಲ್‌ಕಟ್ಟೆ, ಬೇಳೂರು - ಕೋಟೇಶ್ವರ, ಕೊಲ್ಲೂರು - ಕುಂದಾಪುರ, ಕುಂದಾಪುರ - ಬ್ರಹ್ಮಾವರ, ಸಿದ್ದಾಪುರ - ಬ್ರಹ್ಮಾವರ, ಕುಂದಾಪುರ- ಉಡುಪಿ, ಗಂಗೊಳ್ಳಿ - ಕುಂದಾಪುರ ಮಾರ್ಗದಲ್ಲಿ ಬಸ್‌ಗಳು ಸಂಚರಿಸಲಿದೆ.

ಎಲ್ಲಿಂದ ? ಎಷ್ಟು ಬಸ್?

ಕುಂದಾಪುರದ ವಿವಿಧೆಡೆಯಿಂದ ೪೫ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಕಲ್ಪಿಸಲಾಗಿದೆ. ಗಂಗೊಳ್ಳಿ - ೬, ಗೋಳಿಹೊಳೆ - ೧, ಉಪ್ಪುಂದ - ೨, ಕೊಲ್ಲೂರು - ೫, ಭಟ್ಕಳ-೫, ಬಂದೂರು - ೨, ಹೊಸಂಗಡಿ-೪, ಹಳ್ಳಿಹೊಳೆ-೨, ಶೇಡಿಮನೆ-೧, ಮಚ್ಚಟ್ಟು-೨, ಬೇಳೂರು -೧, ಕೆರಾಡಿ-೧, ಆಲೂರು-೧, ನೆಲ್ಲಿಕಟ್ಟೆ -೧, ನೂಜಾಡಿ -೧, ಹಾಲಾಡಿ-೨, ಕೊಂಡಳ್ಳಿ-೧, ಆವರ್ಸೆ-೧, ಸಿದ್ದಾಪುರ-೩, ಗೋಳಿಯಂಗಡಿ-೧, ಕುಂದಾಪುರ-೨ ಬಸ್‌ಗಳು ಸಂಚರಿಸಲಾಗಿದೆ.

ಪರೀಕ್ಷಾ ಕೇಂದ್ರಗಳು

ಅವಿಭಜಿತ ಕುಂದಾಪುರ ತಾಲೂಕಿನ ೯ ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ನಡೆಯಲಿದ್ದು, ಕುಂದಾಪುರ ಸರಕಾರಿ ಪ.ಪೂ., ಭಂಡಾರ್‌ಕಾರ್‍ಸ್ ಕಾಲೇಜು, ಆರ್.ಎನ್. ಶೆಟ್ಟಿ ಪ.ಪೂ. ಕಾಲೇಜು, ಬಂದೂರು, ಶಿರೂರು, ನಾವುಂದ, ವಂಡ್ಸೆ, ಬಿದ್ಕಲ್‌ಕಟ್ಟೆ, ಕೋಟೇಶ್ವರ ಪ.ಪೂ. ಕಾಲೇಜುಗಳು ಪರೀಕ್ಷಾ ಕೇಂದ್ರಗಳಾಗಿವೆ.

Follow Us:
Download App:
  • android
  • ios