ಮೈಸೂರು(ಅ.30): ಭಾರತೀಯ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಮ್‌ ಕಾರ್ಪೊರೇಷನ್‌ (ಐಆರ್‌ಸಿಟಿಸಿ) ದಕ್ಷಿಣ ವಲಯವು ವಿಶೇಷ ಎಸಿ ಟೂರಿಸ್ಟ್‌ ರೈಲು ಪ್ರಾರಂಭಿಸಿದೆ.

1 ಪ್ರಥಮ ಎಸಿ ಕೋಚ್‌, 3 ಸೆಕೆಂಡ್‌ ಎಸಿ ಬೋಗಿಗಳು, 3 ಮೂರನೇ ಎಸಿ ಬೋಗಿಗಳು, 3 ಪ್ಯಾಂಟ್ರಿ ಕಾರು, 1 ಡೈನಿಂಗ್‌ ಕಾರ್‌ ಸೇರಿ ಒಟ್ಟು 11 ಬೋಗಿಗಳನ್ನು ಹೊಂದಿರುವ 2 ಪವರ್‌ ಕಾರನ್ನು ಒಳಗೊಂಡಿರುವ ಈ ರೈಲು ಪ್ರವಾಸಿಗರಿಗಾಗಿ ಮುಕ್ತಿನಾಥ್‌ ಮತ್ತು ನೇಪಾಳಕ್ಕೆ ಪ್ರವಾಸ ಪ್ರಾರಂಭಿಸಿದೆ.

ಮೈಸೂರು: 30 ಸೆಕೆಂಡ್‌ನಲ್ಲಿ 6 ಮೊಟ್ಟೆತಿಂದ ಕೌಶಿಕ್‌!

ಮುಕ್ತನಾಥ್‌ ದರ್ಶನವು ಬೆಂಗಳೂರಿನ ವೈಟ್‌ಫೀಲ್ಡ್‌ ರೈಲ್ವೆ ನಿಲ್ದಾಣದಿಂದ ಹೊರಟು, ಪೆರಂಬೂರು ಮೂಲಕ ನೈಮಿಸರಣ್ಯಂ- ಅಯೋಧ್ಯೆ- ಮುಕ್ತಿನಾಥ್‌- ಫೋಖರಾನ್‌- ಕಠ್ಮಂಡು ಸ್ಥಳಗಳನ್ನು ಸೆ. 19 ರಿಂದ ನ. 1 ರವರೆಗೆ ಸಂಚರಿಸಲಿದೆ. ಪ್ರವಾಸದ ಪ್ಯಾಕೇಜ್‌ ವೆಚ್ಚವು ಪ್ರತಿಯೊಬ್ಬರಿಗೆ 53,330 ತಗಲುತ್ತದೆ.

ಗ್ಲೋರಿ ಕಿಂಗ್‌ಡಮ್‌- ನೇಪಾಳ ರೈಲು ಬೆಂಗಳೂರು ವೈಟ್‌ಫೀಲ್ಡ್‌ನಿಂದ ಹೊರಟು, ಪೆರಂಬೂರು, ಲಕ್ನೋ- ಲುಂಬಿನಿ- ಫೋಖರಾ- ಕುರಿಂತಾರ್‌- ಕಠ್ಮಂಡು ಸ್ಥಳವನ್ನು ಅ. 19ಕ್ಕೆ ಹೊರಟು ನ. 1 ರೊಳಗೆ ಪೂರ್ಣಗೊಳಿಸಲಿದೆ.

ಮೈಸೂರು: ಮಹಿಷ ದಸರಾ ರದ್ದತಿ ಖಂಡಿಸಿ ಗ್ರಾಮೀಣ ದಸರಾಗೆ ಅಡ್ಡಿ

ಈ ಪ್ಯಾಕೇಜ್‌ಗೆ ಒಬ್ಬರಿಗೆ . 50,600 ದರ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಬೆಂಗಳೂರು ಪ್ರಾದೇಶಿಕ ಕಚೇರಿ ದೂ. 080- 22960014, ಮೊ. 97414 26474, ಮೈಸೂರು ರೈಲು ನಿಲ್ದಾಣ ಮೊ. 97414 21486 ಸಂಪರ್ಕಿಸಬಹುದು.

ಮೈಸೂರು: ಹೈಲಿರೈಡ್‌, ಓಪನ್‌ ಬಸ್‌ಗೆ ಮುಗಿಬಿದ್ದ ಜನ