Asianet Suvarna News Asianet Suvarna News

ಮೈಸೂರು: ಮಹಿಷ ದಸರಾ ರದ್ದತಿ ಖಂಡಿಸಿ ಗ್ರಾಮೀಣ ದಸರಾಗೆ ಅಡ್ಡಿ

ಸಂಸದ ಪ್ರತಾಪ್‌ ಸಿಂಹ ಮಹಿಷಾ ದಸರಾ ಆಚರಣೆಗೆ ಅಡ್ಡಿ ಪಡಿಸಿರುವುದನ್ನು ವಿರೋಧಿಸಿ ದಲಿತಪರ ಸಂಘಟನೆಗಳು ಮತ್ತು ಪ್ರಗತಿಪರ ಒಕ್ಕೂಟಗಳ ಕಾರ್ಯಕರ್ತರು ಗ್ರಾಮೀಣ ದಸರಾ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಘಟನೆಯಲ್ಲಿ ಪ್ರತಿಭಟನೆಯ ತೀವ್ರತೆಯನ್ನು ಅರಿತ ಪೊಲೀಸರು ಸುಮಾರು 70 ಜನ ಕಾರ್ಯಕರ್ತರನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್‌ ಠಾಣೆಯ ಸಭಾಂಗಣದಲ್ಲಿ ಇರಿಸಿದ್ದಾರೆ.

People protest against gramina dasara celebrations in mysore
Author
Bangalore, First Published Oct 4, 2019, 8:43 AM IST

ಮೈಸೂರು(ಅ.04): ಸಂಸದ ಪ್ರತಾಪ್‌ ಸಿಂಹ ಮಹಿಷಾ ದಸರಾ ಆಚರಣೆಗೆ ಅಡ್ಡಿಪಡಿಸಿ ಪೊಲೀಸರ ವಿರುದ್ದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಕಪ್ಪುಪಟ್ಟಿಧರಿಸಿ ಗ್ರಾಮೀಣ ದಸರಾ ನಡೆಸದಂತೆ ಅಡ್ಡಿ ಪಡಿಸಲು ಮುಂದಾದ ದಲಿತಪರ ಸಂಘಟನೆಗಳು ಮತ್ತು ಪ್ರಗತಿಪರ ಒಕ್ಕೂಟಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜರುಗಿತು.

ನಂಜನಗೂಡು ನಗರದ ಜೂನಿಯರ್‌ ಕಾಲೇಜು ಆವರಣದಲ್ಲಿ ಗ್ರಾಮೀಣ ದಸರಾ ಮೆರವಣಿಗೆ ಚಾಲನೆ ನೀಡಲು ತಾಲೂಕು ಆಡಳಿತ ಸನ್ನದ್ದವಾಗಿತ್ತು. ಸಂಸದ ಪ್ರತಾಪ್‌ ಸಿಂಹ ಅವರ ಮಹಿಷಾ ದಸರಾ ಆಚರಣೆಗೆ ಅಡ್ಡಿ ಪಡಿಸಿ ಪೊಲೀಸರ ವಿರುದ್ದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಕಪ್ಪುಪಟ್ಟಿಧರಿಸಿ ಗ್ರಾಮೀಣ ದಸರಾವನ್ನು ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಯಿತು.

70 ಜನ ಕಾರ್ಯಕರ್ತರನ್ನು ವಶಕ್ಕೆ

ಜೂನಿಯರ್‌ ಕಾಲೇಜು ಆವರಣಕ್ಕೆ ನುಗ್ಗಲು ಮುಂದಾಗಿ ಅಡ್ಡಿ ಪಡಿಸಲು ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ಪ್ರಾರಂಭವಾಯಿತು. ಪ್ರತಿಭಟನೆಯ ತೀವ್ರತೆಯನ್ನು ಅರಿತ ಪೊಲೀಸರು ಸುಮಾರು 70 ಜನ ಕಾರ್ಯಕರ್ತರನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್‌ ಠಾಣೆಯ ಸಭಾಂಗಣದಲ್ಲಿ ಇರಿಸಿದರು.

ಪ್ರಾತಾಪ್‌ ಸಿಂಹ ಗಡಿಪಾರಿಗೆ ಆಗ್ರಹ:

ಇದೇ ಸಂದರ್ಭದಲ್ಲಿ ದಸಂಸ ಸಂಚಾಲಕ ಮಲ್ಲಹಳ್ಳಿ ನಾರಾಯಣ್‌ ಮಾತನಾಡಿ, ಮಹಿಷಾ ದಸರಾ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿ ಪೊಲೀಸರನ್ನು ಷಂಡ ಎಂದು ಸಂಬೋಧಿಸಿ ಬಹುಸಂಖ್ಯಾತರ ಭಾವೆನೆಗಳಿಗೆ ಧಕ್ಕೆ ತಂದು ಪುಂಡಾಟ ಮೆರೆದಿರುವ ಸಂಸದ ಪ್ರಾತಾಪ್‌ ಸಿಂಹ ಅವರನ್ನು ಗಡಿಪಾರು ಮಾಡಬೇಕು. ಅಲ್ಲದೆ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಮೈಸೂರು: ಹೈಲಿರೈಡ್‌, ಓಪನ್‌ ಬಸ್‌ಗೆ ಮುಗಿಬಿದ್ದ ಜನ

ದಸಂಸ ಜಿಲ್ಲಾ ಸಂಚಾಲಕರಾದ ಚುಂಚನಹಳ್ಳಿ ಮಲ್ಲೇಶ್‌, ಮಲ್ಲಹಳ್ಳಿ ನಾರಾಯಣ, ಕಾರ್ಯ ಬಸವಣ್ಣ, ಜನಸಂಗ್ರಾಮ ಪರಿಷತ್‌ನ ನಗರ್ಲೆ ವಿಜಯ ಕುಮಾರ್‌, ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾ ಸಾಗರ್‌, ತಾಲೂಕು ಅಧ್ಯಕ್ಷ ಸತೀಶ್‌ ರಾವ್‌, ಕಾರ್ಯದರ್ಶಿ ಇಮ್ಮಾವು ರಘು, ತಾಲೂಕು ದಸಂಸ ಸಂಚಾಲಕರಾದ ಶೇಖರ್‌, ಶಂಕರಪುರ ಸುರೇಶ್‌, ಮಂಜು, ಪುಟ್ಟಸ್ವಾಮಿ, ಬೊಕ್ಕಹಳ್ಳಿ ಮಹದೇವಸ್ವಾಮಿ, ಲಿಂಗಯ್ಯ ರೈತ ಸಂಘದ ಬೊಕ್ಕಹಲ್ಳಿ ನಂಜುಂಡಸ್ವಾಮಿ, ಗೋಳೂರು ಮಹಾದೇವಸ್ವಾಮಿ ಇದ್ದರು. ಗ್ರಾಮೀಣ ದಸರಾ ಮುಗಿದ ನಂತರ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.

ಮೈಸೂರು: 30 ಸೆಕೆಂಡ್‌ನಲ್ಲಿ 6 ಮೊಟ್ಟೆತಿಂದ ಕೌಶಿಕ್‌

Follow Us:
Download App:
  • android
  • ios