ದೇಶದಲ್ಲೇ ಮಾದರಿ ವಿಧಾನ ಪರಿಷತ್ ಮಾಡುವೆ: ಹೊರಟ್ಟಿ
ಪರಿಷತ್‌ನ ಘನತೆ, ಗೌರವ ಹೆಚ್ಚುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವೆ| ಈ ಹಿಂದಿನ ಕಹಿ ಘಟನೆಗಳು ಮರುಕಳಿಸದಂತೆ ಸದನದ ಗೌರವ ಹೆಚ್ಚುಸುವ ಗುರಿ ಹೊಂದಿದ್ದೇನೆ| ತಾಯಿ, ಜನರ ಪುಣ್ಯದಿಂದ ಒಂದು ಉನ್ನತ ಹುದ್ದೆಗೆ ಏರಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ ಹೊರಟ್ಟಿ|
ಬಾಗಲಕೋಟೆ(ಫೆ.15): ದೇಶದಲ್ಲೇ ಮಾದರಿ ವಿಧಾನ ಪರಿಷತ್ ಮಾಡಲು ಪ್ರಯತ್ನಿಸುವೆ ಎಂದು ನೂತನ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್‌ನ ಘನತೆ, ಗೌರವ ಹೆಚ್ಚುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವೆ. ಈ ಹಿಂದಿನ ಕಹಿ ಘಟನೆಗಳು ಮರುಕಳಿಸದಂತೆ ಸದನದ ಗೌರವ ಹೆಚ್ಚುಸುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಡಿಸಿಎಂ ಕಾರಜೋಳ ಪ್ರತಿಕ್ರಿಯೆ
ಈ ಹಿಂದೆ 7 ತಿಂಗಳ ಸಭಾಪತಿಯಾಗಿದ್ದಾಗ ಅತಿಥಿ ಉಪನ್ಯಾಸಕ ಆಗಿದ್ದೆ. ಇದೀಗ ಪ್ರೀನ್ಸಿಪಲ್ ಆಗಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದೇಶದಲ್ಲಿಯೇ ಮಾದರಿ ಪರಿಷತ್ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡುವೆ. ತಂದೆ, ತಾಯಿ, ಜನರ ಪುಣ್ಯದಿಂದ ಒಂದು ಉನ್ನತ ಹುದ್ದೆಗೆ ಏರಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.