ಕಾರವಾರ [ಡಿ.06]:  ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್ ಅವರು ಭಟ್ಕಳಕ್ಕೆ ಭೇಟಿ ನೀಡಿ ವಿವಿಧ ಕಾರ್ಯ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಇಲ್ಲಿನ ಮಾವಿನಕುರ್ವೆ ಬಂದರಕ್ಕೆ ಭೇಟಿ ನೀಡಿದ ಅವರು ಮೀನುಗಾರರನ್ನುದ್ದೇಶಿಸಿ ಅವರು ಮಾತನಾಡಿದರು. 

ಯಾವುದೇ ಕಾರಣಕ್ಕೂ ಲೈಟ್ ಫಿಶಿಂಗ್ ಮಾಡಬಾರದು. ಒಂದು ವೇಳೆ ಯಾರಾದರೂ ಲೈಟ್ ಫಿಶಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದರೆ ತಕ್ಷಣ ನಮ್ಮ ಕರಾವಳಿ ಕಾವಲು ಪಡೆಯ ಕಚೇರಿಗೆ ತಿಳಿಸುವಂತೆ ಸೂಚಿಸಿದರು.

ಮೀನುಗಾರರು ತಮ್ಮ ವೃತ್ತಿಯನ್ನು ಉತ್ತಮ ರೀತಿಯಿಂದ ಮಾಡಿಕೊಂಡು ಹೋಗಬೇಕು. ಕಾಯ್ದೆ ಎಲ್ಲರಿಗೂ ಒಂದೇ ಇದ್ದು, ಯಾರೂ ಕೂಡಾ ಕಾನೂನು ಉಲ್ಲಂಘನೆ ಮಾಡ ಬಾರದು. ಒಂದೊಮ್ಮೆ ಕಾನೂನು ಉಲ್ಲಂಘಿಸಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದ ಅವರು, ಮೀನುಗಾರಿಕೆಯಲ್ಲಿಯೂ ನಿಯಮ ಪಾಲಿಸುವಂತೆ ಕೋರಿದರು. 
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾವಿನಕುರ್ವೆ ಬಂದರಿನ ನಂತರ ಅವರು ಅಳ್ವೇಕೋಡಿ ಮೀನುಗಾರಿಕಾ ಬಂದರಿಗೂ ಕೂಡಾ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಯ ಭಟ್ಕಳ ಇನ್ಸ್‌ಪೆಕ್ಟರ್ ನಾಗರಾಜ, ಸಬ್ ಇನ್ಸ್‌ಪೆಕ್ಟರ್ ಅಣ್ಣಪ್ಪ ಮೊಗೇರ, ಸಿಬ್ಬಂದಿ, ಮೀನುಗಾರರು ಮುಂತಾದವರು ಉಪಸ್ಥಿತರಿದ್ದರು.