ಬೆಂಗಳೂರು[ಮಾ.21]: ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯತ್ವಕ್ಕೆ ಶಾಸಕಿ ಸೌಮ್ಯ ರೆಡ್ಡಿ ಅವರು ರಾಜೀನಾಮೆ ನೀಡಿದ್ದಾರೆ.  ಈ ಸಂಬಂಧ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಸಚಿವ ಆನಂದ ಸಿಂಗ್ ಗೆ ಪತ್ರ ಬರೆದಿರುವ ಸೌಮ್ಯರಡ್ಡಿ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ನಿರ್ಮಾಣ ವಿಚಾರದಲ್ಲಿ ಬೇಸರ ತಂದಿದೆ ಎಂದು ಉಲ್ಲೇಖಿಸಿದ್ದಾರೆ. 

ಇದೇ ತಿಂಗಳ 9 ರಂದು ನಡೆದ ಸಭೆಯಲ್ಲಿ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ವಿಚಾರ ಕೈಬಿಡುವುದಾಗಿ ತಿಳಿಸಲಾಗಿತ್ತು. ಆದ್ರೆ ನಿನ್ನೆ [ಶುಕ್ರವಾರ] ವಿಧಾನಸೌದದಲ್ಲಿ ನಡೆದ ಮುಖ್ಯಮಂತ್ರಿ ಬಿಎಸ್ ವೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಕಾಣದ ಕೈಗಳ ರಾಜಕೀಯ ಒತ್ತಡದಿಂದ ಈ ಯೋಜನೆಗೆ ಒಪ್ಪಲಾಗಿದೆ ಎಂದು ಸೌಮ್ಯ ರೆಡ್ಡಿ ಆರೋಪಿಸಿದ್ದಾರೆ. 

ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಸರ್ಕಾರ ಅಸ್ತು!

ಅಲ್ಲದೆ ನಿನ್ನೆ ನಡೆದ ಸಭೆಗೆ ಅರಣ್ಯ ಆನಂದ ಸಿಂಗ್ ಸಚಿವರೇ ಗೈರಾಗಿದ್ದರು. ಇದನ್ನ ಎಲ್ಲರು ಒಮ್ಮತದಿಂದ ನಿರ್ಧರಿಸಬೇಕಾಗಿತ್ತು. ಆದ್ರೂ ಈ ಯೋಜನೆಗೆ ನಿನ್ನೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದರಿಂದ ಮರಗಳ ಮಾರಣ ಹೋಮವೆ ನಡೆಯಲಿದೆ. ವನ್ಯ ಜೀವಿ ಮಂಡಳಿ ಅಸ್ತಿತ್ವದಲ್ಲಿದ್ದರೂ ಪ್ರಯೋಜನ ಇಲ್ಲದಂತೆ ಆಗಿದೆ.  ಹೀಗಾಗಿ ವನ್ಯಜೀವಿ ಮಂಡಳಿ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೆನೆ ಎಂದು ಶಾಸಕಿ ಸೌಮ್ಯ ರೆಡ್ಡಿ ಪತ್ರ ಬರೆದಿದ್ಧಾರೆ.