ಹುಬ್ಬಳ್ಳಿ(ಏ.27): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇದೆ ಮೊದಲ ಬಾರಿಗೆ ನಿಗದಿತ ಪಾರ್ಸಲ್‌ ರೈಲುಗಳ ಸೇವೆಯನ್ನು ಭಾರತೀಯ ರೈಲ್ವೆ ಆರಂಭಿಸಿದ್ದು, ಅದರ ಅಂಗವಾಗಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ನಾಲ್ಕು ಪಾರ್ಸೆಲ್‌ ರೈಲುಗಳ ಸಂಚಾರ ನಡೆಸಲಾಗಿದೆ.

ಇವುಗಳ ಮೂಲಕ 75.26 ಟನ್‌ ಸಿದ್ಧ ಆಹಾರ ಅಂದರೆ ನ್ಯೂಡಲ್ಸ್‌, ಬಿಸ್ಕತ್ತುಗಳನ್ನು ಗೋವಾದಿಂದ ದಿವಾನಾ ರೈಲ್ಚೆ ನಿಲ್ದಾಣಕ್ಕೆ ಪೂರೈಸಲಾಯಿತು. ಅದಲ್ಲದೇ 15.38 ಟನ್‌ ನೆಸ್ಲೆ ಚಾಕೊಲೆಟ್‌ನ್ನು ವಾಸ್ಕೋಡ ಗಾಮ ರೈಲ್ವೆ ನಿಲ್ದಾಣದಿಂದ ಉತ್ತರ ರೈಲ್ವೆಯ ಸಿಡಬ್ಲ್ಯೂಸಿಎನ್‌ಎಸ್‌ಎಲ್‌ ಸೈಡಿಂಗ್‌, ದಿವಾನಾಗೆ ಪೂರೈಕೆ ಮಾಡಲಾಗಿದೆ.

ಕೊರೋನಾ ಕಾಟ: ನೈರುತ್ಯ ರೈಲ್ವೆಯಿಂದ ಮಾಸ್ಕ್‌, ಸ್ಯಾನಿಟೈಸರ್‌ ಉತ್ಪಾದನೆ

ಆಹಾರ ಮತ್ತು ಇತರ ಅಗತ್ಯ ಸರಕುಗಳ ಸಾಗಣೆಗೆ ನೈಋುತ್ಯ ರೈಲ್ವೆ ಸಹಕಾರ ನೀಡಲಿದ್ದು, ಆಹಾರ ಉತ್ಪಾದನೆ ಹಾಗೂ ಇತರೆ ಕಂಪನಿಗಳು ಇದರ ಸದುಪಯೋಗ ಪಡೆಯಲು ನೈಋುತ್ಯ ರೈಲ್ವೆಯ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು.

ನೈಋುತ್ಯ ರೈಲ್ವೆ ಮೂರು ಪಾರ್ಸೆಲ್‌ ರೈಲುಗಳನ್ನು ಆರಂಭಿಸಿದ್ದು, ಇವು ಒಂದು ರೆಫ್ರಿಜಿರೇರ್ಟ ವ್ಯಾನ್‌ ಸೇರಿದಂತೆ 15 ಪಾರ್ಸೆಲ್‌ ವ್ಯಾನ್‌ ಗಳನ್ನು ಒಳಗೊಂಡಿದೆ.