Asianet Suvarna News Asianet Suvarna News

ವಿಜಯನಗರ: ಹಂಪಿ ಉತ್ಸವದಲ್ಲಿ ಧ್ವನಿ, ಬೆಳಕಿನ ರಸದೌತಣ..!

ಹಂಪಿ ನಾಡಿನ ಕಲೆಯನ್ನು ಅನಾವರಣಗೊಳಿಸುತ್ತದೆ. ಅದರಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವಿಜಯನಗರ ಸಾಮ್ರಾಜ್ಯದ ಗತವೈಭವ ಕಟ್ಟಿಕೊಡುತ್ತದೆ. 

Sound Light at Hampi Utsav grg
Author
First Published Jan 31, 2024, 2:00 AM IST

ಕೃಷ್ಣ ಎನ್. ಲಮಾಣಿ 

ಹೊಸಪೇಟೆ(ಜ.31):  ಹಂಪಿ ಉತ್ಸವದ ಜೀವಾಳವಾಗಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಗಜಶಾಲೆ ಆವರಣದಲ್ಲಿ ನಡೆಯಲಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಧ್ವನಿ ಮತ್ತು ಬೆಳಕಿನಲ್ಲಿ ಸ್ಥಳೀಯ ಕಲಾವಿದರೇ ಕಟ್ಟಿಕೊಡುವ ಈ ಕಾರ್ಯಕ್ರಮಕ್ಕೆ ಭಾರೀ ಬೇಡಿಕೆ ಇದೆ. ಹಾಗಾಗಿ ಜಿಲ್ಲಾಡಳಿತ ಆಸಕ್ತಿ ವಹಿಸಿ ಈ ಕಾರ್ಯಕ್ರಮ ಆಯೋಜನೆ ಮಾಡಿದೆ.

ಹಂಪಿ ಉತ್ಸವದಲ್ಲಿ ಫೆ. 2ರಿಂದ ಏಳು ದಿನಗಳವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಫೆ. 2ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ. ಸಾಮ್ರಾಜ್ಯದ ವಿಸ್ತರಣೆ, ಪ್ರಜೆಗಳ ಸುಭಿಕ್ಷೆ, ಸಂಪದ್ಭರಿತ ನಾಡು, ಸಾಹಿತಿ, ಕಲಾವಿದರಿಗೆ ಪ್ರೋತ್ಸಾಹ ಸೇರಿದಂತೆ ವಿಜಯನಗರ ಸಾಮ್ರಾಜ್ಯದ ಸಮಗ್ರ ಕಥನವನ್ನು ಕಲಾವಿದರು ಉಣಬಡಿಸಲಿದ್ದಾರೆ. ಹಾಗಾಗಿ ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಕಳಿಸುವ ಈ ಕಾರ್ಯಕ್ರಮ ಈಗ ಹಂಪಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.

1200 ಪೆನ್‌ ರಿಫೀಲ್‌ನಲ್ಲಿ ಅರಳಿದ ಹಂಪಿ ಕಲ್ಲಿನ ತೇರು!

ಜೀವಂತ ಆನೆ, ಕುದುರೆ ಬಳಕೆ: 

ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಪ್ರೇಕ್ಷಕರಿಗೆ ಕಟ್ಟಿಕೊಡಲು ಜೀವಂತ ಆನೆ ಹಾಗೂ ಕುದುರೆಗಳನ್ನು ಮಾಡಿಕೊಡಲಾಗುತ್ತದೆ. ಈ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ 125 ಕಲಾವಿದರು ಭಾಗವಹಿಸಲಿದ್ದಾರೆ. ಹಾಗಾಗಿ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವ ಪ್ರದರ್ಶನ ವೀಕ್ಷಿಸುತ್ತಾರೆ. ಹಂಪಿ ನಾಡಿನ ಕಲೆಯನ್ನು ಅನಾವರಣಗೊಳಿಸುತ್ತದೆ. ಅದರಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವಿಜಯನಗರ ಸಾಮ್ರಾಜ್ಯದ ಗತವೈಭವ ಕಟ್ಟಿಕೊಡುತ್ತದೆ. ವಿಜಯನಗರ ಸಾಮ್ರಾಜ್ಯದ ಪತನದ ಕಥನ ಕೂಡ ಈ ಕಾರ್ಯಕ್ರಮ 'ಒಳಗೊಂಡಿದೆ. ಹಂಪಿ ಉತವದ ಜೀವಾಳವಾಗಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಬೇಡಿಕೆ ಇರುವುದನ್ನು ಗಮನಿಸಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿ. ಈ ಕಾರ್ಯಕ್ರಮದ ಆಯೋಜನೆಗೆ ಕಾರಣಿಭೂತರಾಗಿದ್ದಾರೆ.

ಬಳ್ಳಾರಿ-ವಿಜಯನಗರ: ನಕಲಿ ಡಾಕ್ಟರ್‌ಗೆ ಕಡಿವಾಣ ಹಾಕೋದಕ್ಕೆ ಆರೋಗ್ಯ ಇಲಾಖೆ ಹರಸಾಹಸ..!

ಧ್ವನಿ ಮತ್ತು ಬೆಳಕು: 

ಹಂಪಿ ಉತ್ಸವ ಫೆ.2,3,4ರಂದು ನಡೆಯಲಿದೆ. ಹಂಪಿ ಉತ್ಸವದ ಮುಗಿದ ಬಳಿಕವೂ ಫೆ. 8ರ ವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತದೆ. ಆನೆಲಾಯದ ಪ್ರಾಂಗಣದಲ್ಲಿ ಸುಮಾರು 10ರಿಂದ 12 ಕಿರು ವೇದಿಕೆಗಳಲ್ಲಿ ನೂರಕ್ಕೂ ಅಧಿಕ ಕಲಾವಿದರು ಕಲಾರಸಿಕರ ಮನಸೂರೆಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ದೇವರಾಯರ ಪಟ್ಟಾಭಿಷೇಕ, ರಥಬೀದಿಯಲ್ಲಿ ವಜ್ರ ವೈಡೂರ್ಯ ಮಾರಾಟ. ಶ್ರೀಕೃಷ್ಣದೇವರಾಯರ ಕುಸ್ತಿ ಪಂದ್ಯಾವಳಿ, ಸೈನಿಕರ ಓಡಾಟ, ಆರಮನೆ ವೈಭೋಗ ಸೇರಿ ಗತವೈಭವವನ್ನು ಉಣಬಡಿಸಲಿದೆ. 

ಹಂಪಿ ಉತ್ಸವದಲ್ಲಿ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಕಲಾವಿದರು ಸಜ್ಜಾಗಿದ್ದಾರೆ. ಗಜಶಾಲೆ ಆವರಣದಲ್ಲಿ ಕಿರುವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಏಳು ದಿನಗಳವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ. 

Follow Us:
Download App:
  • android
  • ios