Asianet Suvarna News Asianet Suvarna News

ಬಳ್ಳಾರಿ-ವಿಜಯನಗರ: ನಕಲಿ ಡಾಕ್ಟರ್‌ಗೆ ಕಡಿವಾಣ ಹಾಕೋದಕ್ಕೆ ಆರೋಗ್ಯ ಇಲಾಖೆ ಹರಸಾಹಸ..!

ಯಾವುದಕ್ಕೂ ಕೇರ್ ಮಾಡದೇ ಸಾಮಾನ್ಯ ಚಿಕಿತ್ಸೆ ನೀಡೋದ್ರ ಜೊತೆ ಅಪಾಯಕಾರಿ ಚಿಕಿತ್ಸೆ ನೀಡುತ್ತಿದ್ದನು. ಈ ಹಿನ್ನೆಲೆ ಇದೀಗ ಪೊಲೀಸರ ಜೊತೆ ಆರೋಗ್ಯಾಧಿಕಾರಿಗಳು ದಾಳಿ ಮಾಡಿ ಕೂಡ್ಲಿಗಿ ತಾಲೂಕಿನ ಶಿವಪುರದಲ್ಲಿ ನಕಲಿ ವೈದ್ಯನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Health Department Struggling to Crack Down on Fake Doctors in Ballari and Vijayanagara grg
Author
First Published Nov 30, 2023, 8:05 PM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ/ವಿಜಯನಗರ(ನ.30):  ಆ ಗ್ರಾಮದಲ್ಲಿ ಅವರೊಬ್ಬರೇ ಡಾಕ್ಟರ್. ಜ್ವರ, ನೆಗಡಿ, ಕೆಮ್ಮು ಅಷ್ಟೇ ಅಲ್ಲ, ಮನೆಯಂತಿರೋ ಈ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳುವುದರ ಜೊತೆ ಹೆರಿಗೆಯನ್ನು ಮಾಡಿಸುತ್ತಿದ್ದನು. ಅದೆಷ್ಟೋ ಬಾರಿ ಈ ಬಗ್ಗೆ ದೂರುಗಳು ಬಂದ್ರು.  ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್ಚರ ನೀಡಿದ್ರು. ಯಾವುದಕ್ಕೂ ಕೇರ್ ಮಾಡದೇ ಸಾಮಾನ್ಯ ಚಿಕಿತ್ಸೆ ನೀಡೋದ್ರ ಜೊತೆ ಅಪಾಯಕಾರಿ ಚಿಕಿತ್ಸೆ ನೀಡುತ್ತಿದ್ದನು. ಈ ಹಿನ್ನೆಲೆ ಇದೀಗ ಪೊಲೀಸರ ಜೊತೆ ಆರೋಗ್ಯಾಧಿಕಾರಿಗಳು ದಾಳಿ ಮಾಡಿ ಕೂಡ್ಲಿಗಿ ತಾಲೂಕಿನ ಶಿವಪುರದಲ್ಲಿ ನಕಲಿ ವೈದ್ಯನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ನಕಲಿ ವೈದ್ಯನ ಬಂಧನ ವೈದ್ಯಕೀಯ ಚಿಕಿತ್ಸೆ ಬಳಸ್ತಿದ್ದ ಔಷಧಿ ಉಪಕರಣ ವಶಕ್ಕೆ

ನಕಲಿ ವೈದ್ಯರಿಗೆ ಕಡಿವಾಣ ಹಾಕೋದಕ್ಕೆ ಬಳ್ಳಾರಿ ಮತ್ತು ವಿಜಯನಗರ ಆರೋಗ್ಯಾಧಿಕಾರಿಗಳ ಹರಸ ಹಾಸ.. ಆಗೋಮ್ಮೆ ಈಗೋಮ್ಮೆ ದಾಳಿ ಮಾಡಿದ್ರು, ಸಿಲುಕಿಹಾಕಿಕೊಳ್ಳುವವರ ಸಂಖ್ಯೆಗೇನು ಕಡಿಮೆಯಿಲ್ಲ.. ಹೌದು, ಈ ಮನೆಯಲ್ಲಿರೋ ಕ್ಲಿನಿಕ್ ನೋಡಿ. ಸಿರೇಂಜ್, ಗ್ಲೋಕಸ್ ಬಾಟಲಿ, ಅಪಾಯಕಾರಿ ಹೈಡೋಸ್ ಮಾತ್ರೆ ಅಷ್ಟೆ ಅಲ್ಲದೇ ಹೆರಿಗೆ ಮಾಡಿಸಲು ಮತ್ತು ಸಣ್ಣಪುಟ್ಟ ಆಪರೇಷನ್ ಮಾಡಲು ಬೇಕಾದ ಪರಿಕರಗಳು ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ವಸ್ತುಗಳನ್ನು ಇಲ್ಲಿವೆ. ಆದರೆ ಇದನ್ನು ಇಟ್ಟುಕೊಂಡು ಕ್ಲಿನಿಕ್ ನಡೆಸುತ್ತಿರೋರು ಮಾತ್ರ ನಿಜವಾದ ಡಾಕ್ಟರ್ ಅಲ್ಲ. ಕೂಡ್ಲಿಗಿ ತಾಲೂಕಿನ ಶಿವಪುರ ಎನ್ನುವ ಪುಟ್ಟ ಗ್ರಾಮದಲ್ಲಿ ಡಾಕ್ಟರ್ ಎಂದು ಹೇಳಿಕೊಂಡು ಆಂಧ್ರ ಮೂಲದ ಮಹಮ್ಮದ್ ರಫಿ ಮನೆಯೊಂದರಲ್ಲಿ ಕ್ಲಿನಿಕ್ ನಡೆಸುತ್ತಿದ್ದನು. ಆರಂಭದಲ್ಲಿ ಸಣ್ಣಪುಟ್ಟ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದ ಈ ನಕಲಿ ವೈದ್ಯ ನಂತರದ ದಿನಗಳಲ್ಲಿ ಸ್ಟೀರೈಡ್ ಮತ್ತು ಆ್ಯಂಟಿಬಾಟಿಕ್ ಗಳನ್ನು ಹೆಚ್ಚು ಹೆಚ್ಚು ಬಳಸೋ ಮೂಲಕ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಚಿಕಿತ್ಸೆಯನ್ನು ನೀಡುತ್ತಿದ್ದನು. ಈ ಬಗ್ಗೆ ದೂರು ಬಂದ ಹಿನ್ನೆಲೆ ಒರ್ಜಿನಲ್ ಸರ್ಟಿಫಿಕೇಟ್ ನೀಡುವಂತೆ ರಫಿ ಅವರಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿತ್ತು. ಆದರೆ ಆಂಧ್ರ ಮೂಲದ ಯೂನಿರ್ವಸಿಟಿಯೊಂದರ ನಕಲಿ ಸರ್ಟಿಫಿಕೇಟ್ ನೀಡಿದ ಹಿನ್ನೆಲೆ ಇದೀಗ ಪೊಲೀಸರೊಂದಿಗೆ ವೈದ್ಯಾಧಿಕಾರಿಗಳು ದಾಳಿ ನಡೆಸಿ ರಫಿ ಅವರನ್ನು ಬಂಧಿಸಿ ಮನೆಯಲ್ಲಿರೋ ಎಲ್ಲ ರೀತಿಯ ಔಷಧಿಗಳನ್ನು ಜಪ್ತಿ ಮಾಡಿರುವುದಾಗಿ ವಿಜಯನಗರ ಡಿಎಚ್ ಓ ಶಂಕರ್ ನಾಯ್ಕ ಹೇಳಿದ್ದಾರೆ. 

ಬಳ್ಳಾರಿ: ಸಚಿವ ನಾಗೇಂದ್ರ ವರ್ಸಸ್‌ ಶಾಸಕ ಭರತ್ ರೆಡ್ಡಿ?, ಮುಸಕಿನ ಗುದ್ದಾಟದ ಮಧ್ಯೆ ಚುನಾವಣೆ ಮುಂದೂಡಿಕೆ

ಪೊಲೀಸರ ಜೊತೆ ವೈದ್ಯಾಧಿಕಾರಿಗಳ ಜಂಟಿ ದಾಳಿ

ಇನ್ನೂ ನಕಲಿ ವೈದ್ಯರ ಮೇಲೆ ದಾಳಿ ಮಾಡಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ದಾಳಿ ಮಾಡಿ ಮಾಡಿದ್ದಾಗಿದೆ. ದಾಳಿ ಮಾಡಿದಾಗ ತೆರೆಮರೆಗೆ ಸರಿಯೋ ಈ ರೀತಿಯ ವೈದ್ಯರು ಮತ್ತದೆ ಕೆಲಸ ಮಾಡ್ತಾರೆ. ಇನ್ನೂ ಹಳ್ಳಿ ಹಳ್ಳಿಯಲ್ಲಿ ಸೇರಿಕೊಂಡಿರೋ ನಕಲಿ ವೈದ್ಯರು. ಹೆಚ್ಚು ಹೆಚ್ಚು ಅ್ಯಂಟಿಬಾಟಿಕ್ ಸ್ಟೀರೈಡ್ ನೀಡುವ ಮೂಲಕ ಬೇಗನೆ ರೋಗ ಗುಣಮುಖವಾಗೋ ರೀತಿಯಲ್ಲಿ ಚಿಕಿತ್ಸೆ ನೀಡುತ್ತಾರೆ. ಇದು ಹಳ್ಳಿ ಜನರಿಗೆ ಇಷ್ಟವಾಗುತ್ತಿದೆ. ಹೀಗಾಗಿ ಇವರ ಬಗ್ಗೆ ಜನರು ಕೂಡ ದೂರು ನೀಡಲು ಮುಂದಾಗುತ್ತಿಲ್ಲ. ಹೆರಿಗೆ, ಮೂಲವ್ಯಾಧಿ, ಕಿಡ್ನಿ ಸ್ಟೋನ್, ಅಪಂಡೆಕ್ಸ್ ಸೇರಿದಂತೆ ಇತರೆ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಕೆಲವು ರೋಗಗಳು ಮೇಲ್ನೋಟಕ್ಕೆ ಸಣ್ಣದಾಗಿ ಕಂಡರು ಇದರ ಚಿಕಿತ್ಸೆ ನೀಡೋದು ಮಾತ್ರ ಅಪಾಯಕಾರಿಯಾಗಿರುತ್ತದೆ. ಅದನ್ನು ಈ ನಕಲಿ ವೈದ್ಯರು ಮಾಡ್ತಿದ್ರು. ಹೀಗಾಗಿ ಇದೆಲ್ಲದಕ್ಕೂ ಕಡಿವಾಣ ಹಾಕಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. 

ಒಬ್ಬರ ಬಂಧನವಾಯ್ತು, ಉಳಿದವರ ಕಥೆ ಏನು..? 

ಸದ್ಯಕ್ಕೆ ವೈದ್ಯನೆಂದು ನಂಬಿಸಿ ಜನರಿಗೆ ಚಿಕಿತ್ಸೆ ನೀಡ್ತಿದ್ದ ನಕಲಿ ವೈದ್ಯ ಮಹಮ್ಮದ್ ರಫಿ ಅವರನ್ನು ಕೂಡ್ಲಿಗಿ ಪೊಲೀಸರು ಬಂಧಿಸಿದ್ದಾರೆ. ಆದರೆ ನಕಲಿ ವೈದ್ಯರ  ಕಡಿವಾಣಕ್ಕೆ ಕೇವಲ ಆರೋಗ್ಯ ಇಲಾಖೆ ಮತ್ತು ಪೊಲೀಸರಷ್ಟೇ ಅಲ್ಲದೇ ಸಾರ್ವಜನಿಕರ ಸಹಾಯ ಸಹಕಾರವೂ ಅಗತ್ಯವಿದೆ.

Follow Us:
Download App:
  • android
  • ios