Asianet Suvarna News Asianet Suvarna News

ರಾಜ್ಯ ಸರ್ಕಾರ ಆರ್‌ಎಸ್‌ಎಸ್‌ಮಯ ಎಂಬ ಹೇಳಿಕೆ ಸರಿಯಲ್ಲ: ಕುಮಾರ ಬಂಗಾರಪ್ಪ

*   ರಾಜ್ಯದಲ್ಲಿರುವ ಸರ್ಕಾರ ಎಲ್ಲರ ಸರ್ಕಾರ
*   ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಖಚಿತ 
*   ಪ್ರಧಾನಿ ಮೋದಿ ನೇತೃತ್ವದಲ್ಲಿ 2023ರ ಚುನಾವಣೆ ನಡೆಯುತ್ತದೆ
 

Soraba BJP MLA Kumar Bangarappa Talks Over RSS grg
Author
Bengaluru, First Published Oct 11, 2021, 10:21 AM IST

ಗಂಗಾವತಿ(ಅ.11):  ಬಿಜೆಪಿ(BJP) ಸರ್ಕಾರದಲ್ಲಿ ಎಲ್ಲ ಆರ್‌ಎಸ್‌ಎಸ್‌(RSS) ಮಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುರಮಾಸ್ವಾಮಿ(HD Kumaraswamy) ಟೀಕೆ ಮಾಡಿರುವುದು ಸರಿಯಲ್ಲ ಎಂದು ಸೊರಬ ಶಾಸಕ ಕುಮಾರ ಬಂಗಾರಪ್ಪ(Kumar Bangarappa) ಅಸಮಾಧಾನ ವ್ಯಕ್ತಪಡಿಸಿದರು.

ಸಮೀಪದ ಹೇಮಗುಡ್ಡದ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುವ ಆಯಾ ಪಕ್ಷಗಳು ಬೆಂಬಲವಾಗಿ ಇರುತ್ತವೆ. ಈ ಹಿಂದೆ ವಿವಿಧ ಪಕ್ಷಗಳು ಸರ್ಕಾರ ನಡೆಸುತ್ತಿದ್ದ ಸಂದರ್ಭದಲ್ಲಿಯೂ ಸಹ ಕೆಲ ಸಂಘಟನೆಗಳು ಬೆಂಬಲವಾಗಿದ್ದವು. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ(Chief Minister) ಅಧಿಕಾರ ನಡೆಸಿದವರು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ರಾಜ್ಯದಲ್ಲಿರುವ ಸರ್ಕಾರ ಎಲ್ಲರ ಸರ್ಕಾರವಾಗಿದೆ ಎಂದು ತಿಳಿಸಿದ ಅವರು, ತಾವು ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಈ ಭಾಗಕ್ಕೆ ಸಾಕಷ್ಟು ಅನುದಾನ ನೀಡಿರುವುದಾಗಿ ಹೇಳಿದರು. ರಾಜ್ಯದಲ್ಲಿ ನಡೆಯುತ್ತಿರುವ ಸಿಂದಗಿ ಮತ್ತು ಹಾನಗಲ್‌ ವಿಧಾನಸಭೆಯ ಉಪ ಚುನಾವಣೆಯಲ್ಲಿ(Byelection) ಬಿಜೆಪಿ ಗೆಲ್ಲುವುದು ಖಚಿತ ಎಂದರು.

ಎಚ್‌ಡಿಕೆ ಯೋಚಿಸಿ ಮಾತು ಆಡಬೇಕು : ಸಚಿವ ಹಾಲಪ್ಪ

ಬರುವ 2023ರ ಚುನಾವಣೆ ಪ್ರಧಾನಿ ಮೋದಿ(Narendra Modi) ನೇತೃತ್ವದಲ್ಲಿ ನಡೆಯುತ್ತದೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ, ಕೆಲವರು ವದಂತಿಗಳನ್ನು ಸೃಷ್ಟಿಸುತ್ತಿದ್ದಾರೆಂದರು. ಈ ಭಾಗದಲ್ಲಿ ಮಾಜಿ ಸಂಸದರಾಗಿದ್ದ ಎಚ್‌.ಜಿ. ರಾಮುಲು ಮತ್ತು ಅವರ ಪುತ್ರ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಅವರು ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದಾರೆ. ಅದರಂತೆ ಶಾಸಕ ಪರಣ್ಣ ಮುನವಳ್ಳಿ(Paranna Munavalli) ಅವರು ಸಹ ಈ ಭಾಗದಲ್ಲಿರುವ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಿರುವುದು ಸಂತಸ ತಂದಿದೆ ಎಂದರು.

ಶಾಸಕ ಪರಣ್ಣ ಮುನವಳ್ಳಿ, ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ, ಕಾಡಾ ಅಧ್ಯ್ಯಕ್ಷ ತಿಪ್ಪೇರುದ್ರಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೊಸಮಲಿ ಮಲ್ಲೇಶಪ್ಪ, ಸದಸ್ಯ ಕಲ್ಗುಡಿ ಚಂದ್ರಪ್ಪ ಉಪ್ಪಾರ, ಜಿಪಂ ಮಾಜಿ ಸದಸ್ಯ ಎಚ್‌.ಎಂ. ಸಿದ್ದರಾಮಸ್ವಾಮಿ, ಬಿಜೆಪಿ ಮುಖಂಡ ರಘುರಾಮ್‌ ರೆಡ್ಡಿ ಸಣ್ಣಾಪುರ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪನಾಯಕ ಇದ್ದರು.
 

Follow Us:
Download App:
  • android
  • ios