ಶಿರಾದಲ್ಲಿ ಶೀಘ್ರ ಸರ್ಕಾರಿ ನರ್ಸಿಂಗ್ ಕಾಲೇಜು: ಟಿ.ಬಿ.ಜಯಚಂದ್ರ

: ಪ್ಯಾರಾ ಮೆಡಿಕಲ್ ಕೋರ್ಸ್ ಗಳಿಗೆ ಅಗತ್ಯ ಕಟ್ಟಡ ನಿರ್ಮಿಸುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಕಟ್ಟಡಕ್ಕೆ ಬೇಕಾಗುವ ಅನುದಾನ ಮಂಜೂರು ಮಾಡಿಸುವುದು ಜೊತೆಗೆ ಮುಂದಿನ ದಿನಗಳಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

Sooner Government College of Nursing at Shira: TB Jayachandra  snr

 ಶಿರಾ : ಪ್ಯಾರಾ ಮೆಡಿಕಲ್ ಕೋರ್ಸ್ ಗಳಿಗೆ ಅಗತ್ಯ ಕಟ್ಟಡ ನಿರ್ಮಿಸುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಕಟ್ಟಡಕ್ಕೆ ಬೇಕಾಗುವ ಅನುದಾನ ಮಂಜೂರು ಮಾಡಿಸುವುದು ಜೊತೆಗೆ ಮುಂದಿನ ದಿನಗಳಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಭವನದಲ್ಲಿ ಸರ್ಕಾರಿ ಪ್ಯಾರಾ ಮೆಡಿಕಲ್ ನೂತನ ಕಾಲೇಜು ಸಮಾರಂಭದಲ್ಲಿ ಮಾತನಾಡಿದರು. ಶಿರಾ ನಗರವು ರಾಜ್ಯದ ಮಧ್ಯಭಾಗದಲ್ಲಿದ್ದು, ಬೀದರ್‌ ನಿಂದ ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಹೋಗುವಾಗ ಅನೇಕ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆ ಶಿರಾದಲ್ಲಿ ಒಂದು ಸೂಪರ್ ಸ್ಪಷಾಲಿಟಿ ಆಸ್ಪತ್ರೆ ಪ್ರಾರಂಭಿಸುವ ಉದ್ದೇಶವಿದೆ. ಈಗಾಗಲೇ ಖಾಸಗಿಯವರು 100 ಕೋಟಿ ರು. ವೆಚ್ಚದಲ್ಲಿ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಲು 5ಎಕರೆ ಜಾಗ ನೀಡುವಂತೆ ಮನವಿ ಮಾಡಿದ್ದು, ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ. ಲಕ್ಷಾಂತರ ಮಂದಿಗೆ ಉತ್ತಮ ಆರೋಗ್ಯ ದೊರಕುತ್ತದೆ.

ಶಿರಾ ನಗರದ ನಿವಾಸಿಗಳಿಗೆ ದಿನದ 24 ಗಂಟೆಯಲ್ಲೂ ಕುಡಿವ ನೀರೊದಗಿಸವ ಯೋಜನೆ ಅಮೃತ್ ಯೋಜನೆ ಅಡಿ 76 ಕೋಟಿ ಮಂಜುರಾತಿಯಾಗಿದೆ. ಹದಿನೈದು ದಿನದಲ್ಲಿ ಸರಕಾರದ ಆದೇಶ ಬರುತ್ತದೆ. ಇದರಿಂದ ದಿನದ 24 ಗಂಟೆ ಕುಡಿವ ನೀರು ಒದಗಿಸುವುದು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪೂಜಾ.ಪಿ, ಉಪಾಧ್ಯಕ್ಷೆ ಸಮ್ರೀನ್ ಖಾನಂ ನಸ್ರುಲ್ಲಾ ಖಾನ್, ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್, ಸಾರ್ವಜನಿಕ ಆಸ್ಪತ್ರೆಯ ಡಾ.ಶ್ರೀನಾಥ್, ಡಾ.ಡಿ.ಎಂ.ಗೌಡ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರಪ್ಪ, ಕನಕ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ರಂಗನಾಥ್, ನಗರಸಭಾ ಸದಸ್ಯರಾದ ಉಮಾ ವಿಜಯರಾಜ್, ಮಾಜಿ ಸದಸ್ಯ ಆರ್.ರಾಘವೇಂದ್ರ, ವೈದ್ಯರಾದ ಡಾ.ನರೇಂದ್ರಬಾಬು, ಡಾ.ಮಂಜುನಾಥ್, ಡಾ.ಗಿರೀಶ್ ಇದ್ದರು.

Latest Videos
Follow Us:
Download App:
  • android
  • ios