ಅಂತೂ ಜೆಡಿಎಸ್‌ಗೆ ಬುದ್ದಿ ಬಂತು : ಮಾಲಾಧಾರಿ ಸಚಿವ ಸಿ.ಟಿರವಿ
ಈಗಲಾರೂ ಜೆಡಿಎಸ್ ಗೆ ಬುದ್ದಿ ಬಂದಿದೆ ಎಂದಿರುವ ಸಿ.ಟಿ ರವಿ ಶೀಘ್ರ ನ್ಯಾಯ ಸಿಗಲಿದೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು (ಡಿ.11): ಅಯೋಧ್ಯೆ ಮಾದರಿಯಲ್ಲಿ ದತ್ತಪೀಠ ವಿವಾದ ಇತ್ಯರ್ಥವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ದತ್ತಮಾಲೇ ಧರಿಸಿರುವ ಸಚಿವರು ಚಿಕ್ಕಮಗಳೂರಿನಲ್ಲಿ ಮಾತನಾಡಿ ದತ್ತಪೀಠ ವಿವಾದವು ಶೀಘ್ರ ಬಗೆಹರಿಯುವ ವಿಶ್ವಾಸ ಇದೆ. ಇದೊಂದು ನ್ಯಾಯಿಕ ಹಾಗೂ ತತ್ವಬದ್ಧವಾದ ಹೋರಾಟವಾಗಿದೆ ಎಂದರು.
ಈ ಬಾರಿ ವಿವಾದ ಬಗೆಹರಿಸುವ ಸಂಕಲ್ಪ ಮಾಡಿದ್ದೇವೆ. ಇಲ್ಲಿ ಸದ್ಯ ಮುಸ್ಲಿಂ ಅರ್ಚಕರಿದ್ದು, ಹಿಂದೂ ಅರ್ಚಕರ ನೇಮಕಕ್ಕೆ ಜೆಡಿಎಸ್ ಸಹಮತ ವ್ಯಕ್ತಪಡಿಸಿದೆ. ಕಾಂಗ್ರೆಸ್ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಲಿ. ಈಗಲಾದರೂ ಜೆಡಿಎಸ್ ಗೆ ಬುದ್ದಿ ಬಂದಿದೆ ಎಂದರು.
ದತ್ತಪೀಠ ವಿವಾದ ಕೋರ್ಟ್ ಹೊರಗೇ ಬಗೆಹರಿಸಿಕೊಳ್ಳಿ...
ದತ್ತಪೀಠದಲ್ಲಿ ಹಿಂದೂ ಪದ್ಧತಿಯ ಪ್ರಕಾರ ಪೂಜೆ ಆಗಬೇಕು. ದತ್ತಪೀಠದ ವಿವಾದವು ರಾಜಕೀಯ ಕೇಂದ್ರೀಕೃತವಲ್ಲ. ಇಲ್ಲಿಗೆ ದಲಿತ ಅರ್ಚಕರನ್ನು ನೇಮಕ ಮಾಡಿದರೂ ನಮಗೆ ಯಾವುದೇ ಸಮಸ್ಯೆ ಇಲ್ಲ. ಒಟ್ಟಿನಲ್ಲಿ ಹಿಂದೂ ಅರ್ಚಕರ ನೇಮಕವಾಗಲಿ ಎಂದರು.
ಸದ್ಯ ಇಲ್ಲಿ ಮುಸ್ಲಿಂ ಅರ್ಚಕರಿದ್ದು, ಹಲವು ದಿನಗಳಿಂದಲೂ ಹಿಂದೂ ಅರ್ಚಕರ ನೇಮಕಕ್ಕಾಗಿ ವಿವಾದ ಸೃಷ್ಟಿಯಾಗಿತ್ತು.