Asianet Suvarna News Asianet Suvarna News

ಮಂತ್ರಾಲಯ: ರಾಘವೇಂದ್ರ ಸ್ವಾಮಿಗಳ ಹೆಸರಲ್ಲಿ ಶೀಘ್ರ ವಿಶ್ವವಿದ್ಯಾಲಯ, ಸುಬುಧೇಂದ್ರ ಶ್ರೀ

ಪ್ರಸಕ್ತ ಸಾಲಿನಲ್ಲಿ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಬೆಂಗಳೂರಿನ ಬಿಜಿಎಸ್ ಮತ್ತು ಎಸ್ಜೆಬಿಐಟಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಕಾಶನಾಥ ಸ್ವಾಮೀಜಿ, ಬೆಂಗಳೂರಿನ ವಿದ್ವಾನ್ ರಘುಪತಿ ಉಪಾಧ್ಯಾಯ, ವಾರಣಸಿಯ ಪ್ರೊ.ವರಜಾ ಭೂಷಣ ಓಝಾ ಅವರಿಗೆ ಪ್ರದಾನ ಮಾಡಿ, ನಗದು, ನೆನಪಿನ ಕಾಣಿ,ಪ್ರಶಸ್ತಿ-ಸನ್ಮಾನ ಪತ್ರದೊಂದಿ ಫಲಮಂತ್ರಾಕ್ಷತೆಯನ್ನು ನೀಡಿ ಗೌರವಿಸಿದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು 

Soon University in the name of Raghavendra Swami says  Subudhendra Teertha Swamiji grg
Author
First Published Aug 21, 2024, 11:54 AM IST | Last Updated Aug 21, 2024, 12:34 PM IST

ರಾಯಚೂರು(ಆ.21): ಸ್ವಚ್ಛ, ಸುಂದರ, ಸಂಪೂರ್ಣ ನಿನಾದದೊಂದಿಗೆ ಮುನ್ನಡೆಯುತ್ತಿದ್ದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಅನ್ನ,ವಿದ್ಯೆ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಶ್ರೀಮಠದಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಿಳಿಸಿದರು.

ಸುಕ್ಷೇತ್ರ ಮಂತ್ರಾಲಯದ ಶ್ರೀರಾಯರ 353 ನೇ ಆರಧಾನೆಯ ಪೂರ್ವಾರಾಧನೆ ನಿಮಿತ್ತ ಶ್ರೀಮಠದ ಮುಂಭಾಗದ ಯೋಗೀಂದ್ರ ಮಂಟಪದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಶ್ರೀಗುರುಸಾರ್ವಭೌಮರ ಸಂಕಲ್ಪಕ್ಕೆ ತಕ್ಕಂತೆ ಶ್ರೀಮಠದಿಂದ ಕೆಲಸ-ಕಾರ್ಯಗಳನ್ನು ಮಾಡಲಾಗುತ್ತಿದ್ದು, ಜಾತಿ, ಧರ್ಮ, ಬಡವ ಬಲ್ಲಿದ ಎನ್ನುವ ಬೇದವಿಲ್ಲದೇ ಎಲ್ಲರಿಗೂ ಅನ್ನ, ವಿದ್ಯೆ ಮತ್ತು ಆರೋಗ್ಯ ಧಾನ ಒದಗಿಸಬೇಕು ಎನ್ನುವ ದ್ಯೇಯವನ್ನು ಹೊಂದಲಾಗಿದೆ. ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ವಿಶ್ವವಿದ್ಯಾಲಯ ಆರಂಭಿಸಿ ಶಾಲಾ-ಕಾಲೇಜುಗಳು, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳು, ವೇದ ಮತ್ತು ಶಾಸ್ತ್ರಗಳ ವಿವಿಗಳನ್ನು ಸ್ಥಾಪಿಸಿ ಸುಕ್ಷೇತ್ರವನ್ನು ಶಿಕ್ಷಣ ತವರನ್ನಾಗಿಸಲಾಗುವುದು. ಅದೇ ರೀತಿ ಬಡವರಿಗೆ ಎಲ್ಲ ರೀತಿಯ ವೈದ್ಯಕೀಯ ಸೇವೆಗಳು ಲಭಿಸುವ ನಿಟ್ಟಿನಲ್ಲಿ ಬೃಹತ್‌ ವೈದ್ಯಾಲಯವನ್ನು ನಿರ್ಮಿಸುವ ಸಂಕಲ್ಪ ಹೊಂದಲಾಗಿದೆ ಎಂದರು.

ಶ್ರೀ ರಾಘವೇಂದ್ರ ಸ್ವಾಮಿ 353ನೇ ಆರಾಧನಾ ಮಹೋತ್ಸವ ಆರಂಭ: ಟಿಟಿಡಿಯ ಶ್ರೀವಾರಿ ಶೇಷವಸ್ತ್ರ ಸಮರ್ಪಣೆ

ಅನುಗ್ರಹ ಪ್ರಶಸ್ತಿ: 

ಪ್ರಸಕ್ತ ಸಾಲಿನಲ್ಲಿ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಬೆಂಗಳೂರಿನ ಬಿಜಿಎಸ್ ಮತ್ತು ಎಸ್ಜೆಬಿಐಟಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಕಾಶನಾಥ ಸ್ವಾಮೀಜಿ, ಬೆಂಗಳೂರಿನ ವಿದ್ವಾನ್ ರಘುಪತಿ ಉಪಾಧ್ಯಾಯ, ವಾರಣಸಿಯ ಪ್ರೊ.ವರಜಾ ಭೂಷಣ ಓಝಾ ಅವರಿಗೆ ಪ್ರದಾನ ಮಾಡಿ, ನಗದು, ನೆನಪಿನ ಕಾಣಿ,ಪ್ರಶಸ್ತಿ-ಸನ್ಮಾನ ಪತ್ರದೊಂದಿ ಫಲಮಂತ್ರಾಕ್ಷತೆಯನ್ನು ನೀಡಿ ಗೌರವಿಸಿದರು.

Latest Videos
Follow Us:
Download App:
  • android
  • ios