ಬಾಗಲಕೋಟೆ (ಸೆ.08): ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಕೊಡುವ ವಿಚಾರವನ್ನು ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ ಎಂದು ನಗರರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಹೇಳಿದ್ದಾರೆ. 

ವಾಲ್ಮೀಕಿ ಶ್ರೀಗಳ ಹಾಗೂ ಸಮುದಾಯದ ಬಗ್ಗೆ ನಮಗೆ ಗೌರವವಿದೆ. ಸಂಪುಟ ಸಹದ್ಯೋಗಿಗಳು ಹಾಗೂ ಆ ಸಮುದಾಯದ ಸಚಿವರು ಸೇರಿ ಸಾಧಕ ಬಾಧಕದ ಚರ್ಚೆ ನಡೆಸಿದ ನಂತರ ಮೀಸಲಾತಿ ಕೊಡುವ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದಿದ್ದಾರೆ.

7.5 ಮೀಸಲಾತಿಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದ ರಾಮುಲು, ಬಿಎಸ್‌ವೈಗೆ ಟೆನ್ಷನ್ ...

ಇದೇ ವೇಳೆ ನಗರಾಭಿವೃದ್ಧಿ ಇಲಾಖೆಯಿಂದ ಅಭಿವೃದ್ಧಿ ಪ್ರಾಧಿ​ಕಾರದಲ್ಲಿ ಶೇ.5 ನಿವೇಶನಗಳನ್ನು ಪತ್ರಕರ್ತರಿಗೆ ಮೀಸಲಿಡುವ ವಿಷಯದಲ್ಲಿ ಸದ್ಯದಲ್ಲಿಯೇ ಆದೇಶ ಹೊರಡಿಸುವುದಾಗಿ ಸಚಿವರು ತಿಳಿಸಿದ್ದಾರೆ.

ಈಗಾಗಲೇ ಮೀಸಲಾತಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಸಿಎಂ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.