Asianet Suvarna News Asianet Suvarna News

ಬೆಂಗಳೂರಿನಲ್ಲಿ 300 ಕಟ್ಟಡಗಳ ನೆಲಸಮಕ್ಕೆ ಸೂಚನೆ : ನಿವಾಸಿಗಳೇ ಗಮನಿಸಿ!

  • ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಟ್ಟಡ ಕುಸಿತ ಪ್ರಕರಣಗಳು ಹೆಚ್ಚುತ್ತಲೇ ಇವೆ
  •  ಬಿಬಿಎಂಪಿ ಅಪಾಯದ ಅಂಚಿನಲ್ಲಿರುವ ಬಹುಮಹಡಿ ಕಟ್ಟಡಗಳನ್ನು ಗುರುತಿಸಿದ್ದು, ಮುನ್ನೂರು ಕಟ್ಟಡಗಳ ನಿವಾಸಿಗಳಿಗೆ ಖಾಲಿ ಮಾಡುವಂತೆ ಸೂಚನೆ
Soon 300 building will Demolish in Bengaluru snr
Author
Bengaluru, First Published Oct 19, 2021, 6:42 AM IST

 ಬೆಂಗಳೂರು (ಅ.19): ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ (Heavy Rain) ಕಟ್ಟಡ ಕುಸಿತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ (BBMP) ಅಪಾಯದ ಅಂಚಿನಲ್ಲಿರುವ ಬಹುಮಹಡಿ ಕಟ್ಟಡಗಳನ್ನು (Buildings) ಗುರುತಿಸಿದ್ದು, ಮುನ್ನೂರು ಕಟ್ಟಡಗಳ ನಿವಾಸಿಗಳಿಗೆ ಖಾಲಿ ಮಾಡುವಂತೆ ಸೂಚನೆ ನೀಡಿದೆ.

ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತ ಗೌರವ್‌ಗುಪ್ತಾ (Gourav gupta) ಅವರು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಗುರುತಿಸಿ ನೋಟಿಸ್‌(Notice) ನೀಡಲಾಗಿದೆ. ಈಗಾಗಲೇ 300 ಕಟ್ಟಡಗಳಿಗೆ ನೋಟಿಸ್‌ ಕೊಡುತ್ತೇವೆ. ಯಾವ ಕಟ್ಟಡದಲ್ಲಿ ಅನಾಹುತ ಹೆಚ್ಚಾಗಿದೆಯೋ ಅಂತಹ ಕಟ್ಟಡಗಳಲ್ಲಿನ ನಿವಾಸಿಗಳು ತುರ್ತಾಗಿ ಜಾಗ ಖಾಲಿ ಮಾಡುವಂತೆ ತಿಳಿಸಿದ್ದು, ನಂತರ ಬಿಬಿಎಂಪಿಯು ಕಟ್ಟಡ ತೆರವು ಕಾರ್ಯ ನಡೆಸಲಿದೆ. ಶಿಥಿಲ ಕಟ್ಟಡಗಳ ಕುರಿತು ಹೊಸ ಸರ್ವೆ ಮುಂದುವರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬೆಂಗಳೂರು : ಕುಸಿಯುವ ಭೀತಿಯಲ್ಲಿ ಪೊಲೀಸ್ ಕ್ವಾರ್ಟರ್ಸ್, 32 ಕುಟುಂಬಗಳು ಇಲ್ಲಿ ವಾಸ

ಶಿಥಿಲ ಕಟ್ಟಡಗಳಲ್ಲಿ ಬೀಳುವ ಕಟ್ಟಡಗಳು ಕಂಡು ಬಂದಲ್ಲಿ ಕೂಡಲೇ ಅವುಗಳನ್ನು ನೆಲಸಮ (Demolish) ಮಾಡಲು ಕ್ರಮಕೈಗೊಳ್ಳುತ್ತೇವೆ. ಬಿಬಿಎಂಪಿ ಕಟ್ಟಡವಾಗಲೀ ಅಥವಾ ಯಾವುದೇ ಕಟ್ಟಡವಿರಲೀ ಬೀಳುವಂತಿದ್ದರೆ ಕೂಡಲೇ ಅದನ್ನು ಖಾಲಿ ಮಾಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಲಿದ್ದಾರೆ. ನೆಲಸಮ ಮಾಡುವುದಕ್ಕೂ ಸಿದ್ಧರಿದ್ದು, ಅವಶ್ಯಕತೆಗೆ ತಕ್ಕಂತೆ ಕ್ರಮಕೈಗೊಳ್ಳುತ್ತೇವೆ ಎಂದರು.

5 ಸಾವಿರ ಕಟ್ಟಡ ಕಾನೂನು ಬಾಹಿರ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನು (Order) ಮೀರಿ ನಿರ್ಮಾಣ ಮಾಡಿರುವ ಕಟ್ಟಡಗಳ ಕುರಿತು ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಬಿಬಿಎಂಪಿ ಮೌಖಿಕ ಸೂಚನೆ ನೀಡಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಕಟ್ಟಡಗಳನ್ನು ಕಾನೂನು ಬಾಹಿರವಾಗಿ ಕಟ್ಟಲಾಗಿದೆ (Illigal Buildings) ಎನ್ನಲಾಗಿದ್ದು, ಅವುಗಳ ಬಗ್ಗೆ ಕ್ರಮಕೈಗೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದೆ. ಇದರಿಂದ ಬಿಬಿಎಂಪಿಗೆ ಮಾಹಿತಿ ನೀಡಿದರೆ, ಆಸ್ತಿ ತೆರಿಗೆ ಪಾವತಿಸದೆ ಮನೆ ನಿರ್ಮಾಣ ಮಾಡಿದವರಿಗೆ ಸಂಕಷ್ಟಎದುರಾಗಲಿದೆ. ಕಳೆದ ಹತ್ತು ವರ್ಷದಲ್ಲಿ ಬಿಬಿಎಂಪಿಯಿಂದ ಅಧಿಕೃತವಾಗಿ ಅನುಮತಿ ಪಡೆದ ಹೈರೇಜ್‌ ಕಟ್ಟಡಗಳ ಸಂಖ್ಯೆ ಕೇವಲ 1178 ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಒಂದು ಕಡೆ ಧಾರಾಕಾರ ಮಳೆ

ಒಂದು ಕಡೆ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಇದು ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿದೆ. ಇದರ ನಡುವೆ ಹವಾಮಾನ ವೈಪರಿತ್ಯದಿಂದ ನಗರದಲ್ಲಿ ಇನ್ನೂ ಎರಡು ದಿನ 48 ಗಂಟೆಗಳ ಕಾಲ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.  

Follow Us:
Download App:
  • android
  • ios