Asianet Suvarna News Asianet Suvarna News

‘ಮೂವರು ಮಾಜಿ ಶಾಸಕರು ಶೀಘ್ರವೇ ಬಿಜೆಪಿಗೆ’

ಮೂವರು ಅನರ್ಹ ಶಾಸಕರು ಶೀಘ್ರವೇ ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ಸಂಸದರೋರ್ವರು ಹೇಳಿದ್ದಾರೆ. 

Soon  3 Former MLAs Will Join BJP Says Kolar MP Muniswamy
Author
Bengaluru, First Published Aug 24, 2019, 11:56 AM IST
  • Facebook
  • Twitter
  • Whatsapp

ಮುಳಬಾಗಿಲು [ಆ.24]: ಶೀಘ್ರದಲ್ಲಿಯೇ ಜಿಲ್ಲೆಯ ಮಾಜಿ ಶಾಸಕರುಗಳಾದ ಚಿಂತಾಮಣಿಯ ಡಾ.ಸುಧಾಕರ್‌, ಮಾಲೂರು ಮಂಜುನಾಥ್‌ಗೌಡ ಮತ್ತು ಕೊತ್ತೂರು ಮಂಜುನಾಥ್‌ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸಂಸದ ಎಸ್‌. ಮುನಿಸ್ವಾಮಿ ಹೇಳಿದರು.

ಶುಕ್ರವಾರ ನಗರದ ಬಾಲಕೃಷ್ಣಶ್ರಮ ರಸ್ತೆಯಲ್ಲಿರುವ ಬಾಲಕೃಷ್ಣಸ್ವಾಮಿ ಆಲಯದಲ್ಲಿ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪೂಜಾ ಕಾರ್ಯಕ್ರಮಗಳಲ್ಲಿ ಮಾತನಾಡಿದರು. ಈಗಾಗಲೆ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರುಗಳೊಂದಿಗೆ ಇವರ ಸೇರ್ಪಡೆ ಕುರಿತು ಚರ್ಚಿಸಲಾಗಿದೆ ಎಂದರು.

ಕೊತ್ತೂರು ಮಂಜುನಾಥ್‌ ಸಹಮತ

ಜಿಲ್ಲೆಯ ಕೇಂದ್ರಸ್ಥಾನವಾಗಿರುವ ಕೋಲಾರದಲ್ಲಿ ಬೃಹತ್‌ ಕಾರ್ಯಕ್ರಮ ಮಾಡುವ ಮೂಲಕ ಮೂರು ಮಾಜಿ ಶಾಸಕರೊಂದಿಗೆ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದೆಂದರು. ಈ ಸಂದರ್ಭದಲ್ಲಿ ಜೊತೆಯಲ್ಲಿದ್ದ ಕೊತ್ತೂರು ಮಂಜುನಾಥ್‌ ಸಹ ಬಿಜೆಪಿ ಸೇರ್ಪಡೆ ಕುರಿತು ಸಹಮತ ವ್ಯಕ್ತಪಡಿಸಿದರು.

ರಸ್ತೆ ಅಗಲೀಕರಣ ವಿವಾದ

ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ರಸ್ತೆ ಅಗಲೀಕರಣ ಮಾಡುವಾಗ ಪ್ರಭಾವಿಗಳ ಜಾಗದಲ್ಲಿ ಅಗಲೀಕರಣ ಮಾಡದೆ ಕೇವಲ ಅಮಾಯಕರಿರುವ ಕಡೆ ಮಾತ್ರ ಅಗಲೀಕರಣ ಮಾಡಿ ಕಳಪೆ ಕಾಮಗಾರಿ ಮಾಡಿರುವ ಕುರಿತು ನನ್ನ ಗಮನಕ್ಕೂ ಬಂದಿದೆ. ಶೀಘ್ರದಲ್ಲಿಯೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಸ್ಥಳೀಯ ಶಾಸಕರ ಜೊತೆ ಸಭೆ ನಡೆಸಿ ಲೋಪ ದೋಷಗಳನ್ನು ಸರಿಪಡಿಸಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

2018-19ನೇ ಸಾಲಿನಲ್ಲಿ 300 ಸಮುದಾಯ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು. ಆದರೆ ಕೇವಲ 100 ಸಮುದಾಯ ಭವನಗಳ ಕೆಲಸ ಮುಗಿಸಲಾಗಿದ್ದು ಉಳಿದ 200 ಸಮುದಾಯ ಭವನಗಳಿಗೆ ಸೂಕ್ತ ಸ್ಥಳವನ್ನು ಗುರ್ತಿಸದೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಕಿ ಉಳಿದಿವೆ. ಈ ಸಮುದಾಯ ಭವನಗಳ ಅವಶ್ಯಕತೆ ಇರುವ ಹಳ್ಳಿಗಳನ್ನು ಗುರ್ತಿಸಿ ಮಂಜೂರು ಮಾಡಿಸಲಾಗುವುದೆಂದರು.

Follow Us:
Download App:
  • android
  • ios