ಕೋಲಾರದಲ್ಲಿ ತಾಯಿ ಮಗ ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಕೊರೋನಾ ಮಹಾಮಾರಿ ರಾಜ್ಯದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ
ಮಾಲೂರು (ಅ.05): ಕೊರೋನಾ ಮಹಾಮಾರಿಗೆ ತಾಯಿ-ಮಗ ಬಲಿಯಾದ ಘಟನೆ ತಾಲೂಕಿನ ಕುಡೇಯನೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಸಾಂಬಚಾರಿ(55) ಹಾಗೂ ಅತನ ತಾಯಿ ಪಾರ್ವತಮ್ಮ(77) ಎಂದು ಗುರುತಿಸಲಾಗಿದೆ. ಹದಿನೈದು ದಿನಗಳ ಹಿಂದೆ ಮನೆಯಲ್ಲಿ ನಡೆದ ಸಮಾರಂಭದ ನಂತರ ಅನಾರೋಗ್ಯದ ಕಾರಣ ಸಾಂಬಚಾರಿಯನ್ನು ಬೆಂಗಳೂರಿನ ಖಾಸಗಿ ಅಸ್ಪತ್ರೆಯೊಂದಕ್ಕೆ ಸೇರಿಸಿದ್ದಾಗ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು.
ಹೆಚ್ಚಾಗುತ್ತಿದೆ ಕೋವಿಡ್ ಸೋಂಕು; ಅಸ್ತಮಾ ಇರುವವರೇ ಇರಲಿ ಆರೋಗ್ಯದ ಬಗ್ಗೆ ನಿಗಾ ...
ಜತೆಯಲ್ಲಿ ತಾಯಿಗೂ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಾಲಿಸಿಕೊಳ್ಳಲಾಗಿತ್ತು. ಆದರೆ ಚಿಕಿತ್ಸೆ ಫಲಿಕಾರಿಯಾಗದೆ ಶನಿವಾರ ರಾತ್ರಿ ತಾಯಿ ಹಾಗೂ ಭಾನುವಾರ ಬೆಳಗ್ಗಿನ ಜಾವ ಮಗ ಮೃತಪಟ್ಟಿದ್ದಾರೆ.
ಭಾನುವಾರ ಮಧ್ಯಾಹ್ನ ಕುಡೇಯನೂರು ಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಬಿಬಿಎಂಪಿ ಅಧಿಕಾರಿಗಳು,ಆಸ್ಪತ್ರೆ ಸಿಬ್ಬಂದಿ ಇದ್ದರು.
